AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪತ್ನಿಯನ್ನ ಕೊಲೆ ಮಾಡಲು ಯತ್ನಿಸಿದ ಪತಿ

ಗಂಡನ ವಿರುದ್ಧ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ಹಾಸನ ಪೊಲೀಸರು ಠಾಣಗೆ ಕರೆಸಿ ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಪತಿ ಹರೀಶ್​ ಪತ್ನಿ ಶಿಲ್ಪಳ ಕತ್ತು ಕೋಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ. ಅಷ್ಟಕೂ ಹರೀಶ್​, ಶಿಲ್ಪಾಳನ್ನು ಕೊಲೆ ಮಾಡಲು ಯತ್ನಿಸಿದ್ದು ಯಾಕೆ? ಇಲ್ಲಿದೆ ಕಾರಣ..

ಹಾಸನ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪತ್ನಿಯನ್ನ ಕೊಲೆ ಮಾಡಲು ಯತ್ನಿಸಿದ ಪತಿ
ಪತಿ ಹರೀಶ್​ (ಎಡಚಿತ್ರ) ಪತ್ನಿ ಶಿಲ್ಪ (ಬಲಚಿತ್ರ)
Follow us
ಮಂಜುನಾಥ ಕೆಬಿ
| Updated By: ವಿವೇಕ ಬಿರಾದಾರ

Updated on:Nov 20, 2023 | 9:46 AM

ಹಾಸನ ನ.20: ಹಾಸನದ (Hassan) ಮಹಿಳಾ ಪೊಲೀಸ್ (Police) ಠಾಣೆಗೆಯಲ್ಲೇ ಪತ್ನಿಯ ಕತ್ತು ಕೊಯ್ದು ಪತಿ ಕೊಲೆ ಮಾಡಲು ಯತ್ನಿಸಿದ್ದಾನೆ. ಶಿಲ್ಪ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹರೀಶ್ ಕೊಲೆ ಮಾಡಲು ಯತ್ನಿಸಿದ ಪತಿ. ಹರೀಶ್ ಮತ್ತು ಶಿಲ್ಪ ಮದುವೆಯಾಗಿ 6 ವರ್ಷಗಳಾಗಿದ್ದು, ಒಬ್ಬರ ಮೇಲೆ ಒಬ್ಬರು ಅನುಮಾನಪಟ್ಟು ಜಗಳವಾಡಿ ಠಾಣೆಯ ಮೆಟ್ಟಿಲೇರಿದ್ದಾರೆ. ಗಂಡ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಶಿಲ್ಪ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಪತಿ ಹರೀಶ್​ನನ್ನು ಕರೆಸಿ ವಿಚಾರಣೆ ನಡೆಸುತ್ತಿರುವಾಗ, ಕೊಲೆ ಮಾಡಲು ಯತ್ನಿಸಿದ್ದಾರೆ. ಕೂಡಲೆ ಪೊಲೀಸರು ತಡೆದಿದ್ದು, ಚಾಕು ಕಿತ್ತುಕೊಂಡು ಆರೋಪಿ ಹರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಹಕರನ್ನು ಸೆಳೆಯುವ ವಿಚಾರವಾಗಿ ಎರಡು ಹೋಟೆಲ್​ನವರ ಮಧ್ಯೆ ಗಲಾಟೆ

ನೆಲಮಂಗಲ: ಗ್ರಾಹಕರನ್ನು ಸೆಳೆಯುವ ವಿಚಾರವಾಗಿ ಎರಡು ಹೋಟೆಲ್​ನವರ ಮಧ್ಯೆ ಗಲಾಟೆ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ಬಳಿ ನಡೆದಿದೆ. ದೀಪಕ್, ಕುಮಾರ್, ಗಂಗಣ್ಣ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ದೀಪಕ್ ಎಂಬುವರಿಗೆ ಹಲ್ಲೆ ಮಾಡಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ಅವರನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ದೀಪಕ್ ಮತ್ತು ಗಂಗಣ್ಣ ಹೋಟೆಲ್ ಮಾಲಿಕರು. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:41 am, Mon, 20 November 23