ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್: ಕೊಲೆ ಕಾರಣ ರಿವಿಲ್

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರ ಬಲೆಗೆ ಬಿದ್ದಿದ್ದು ಚಾಲಕ ಕಿರಣ್​. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಿರಣ್​​ ಕೊಲೆಗೆ ಅಸಲಿ ಕಾರಣವನ್ನು ರಿವಿಲ್​​ ಮಾಡಿದ್ದಾನೆ.

ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್: ಕೊಲೆ ಕಾರಣ ರಿವಿಲ್
ಪ್ರತಿಮಾ, ಕಿರಣ್ (ಕೊಲೆ ಆರೋಪಿ)
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on: Nov 19, 2023 | 8:34 AM

ಬೆಂಗಳೂರು ನ.19: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ (Pratima murder case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಪೋಟಕ ಅಂಶವೊಂದು ಬಯಲಾಗಿದೆ. ಪೊಲೀಸರ (Police) ವಿಚಾರಣೆ ವೇಳೆ ಹಣ, ಚಿನ್ನಾಭರಣಕ್ಕಾಗಿ ಪ್ರತಿಮಾರನ್ನು ಕೊಲೆ ಮಾಡಿರುವುದಾಗಿ ಆರೋಪಿ ಕಿರಣ್ ಬಾಯಿ ಬಿಟ್ಟಿದ್ದಾನೆ. ಪ್ರತಿಮಾ ಕೊಲೆಗೆ ಸಂಚು ರೂಪಿಸಿ ಮನೆಗೆ ನುಗ್ಗಿ ಪ್ರತಿಮಾ ಅವರನ್ನು ಕೊಲೆ ಮಾಡಿ, ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದನು. 5 ಲಕ್ಷ ರೂ. ನಗದು, 3 ರಿಂದ 4 ಲಕ್ಷ ಮೌಲ್ಯದ 2 ಚಿನ್ನದ ಬಳೆ, ಬ್ರೇಸ್​​ ಲೇಟ್ ಆರೋಪಿ​ ಕಿರಣ್​ ದೋಚಿದ್ದನು.

ಬಳಿಕ ಹಣವನ್ನು ಕೋಣನಕುಂಟೆ ಬಳಿಯ ಗೆಳಯ ಶಿವು ನಿವಾಸದಲ್ಲಿ ಇಟ್ಟಿದ್ದನು. ಈ ಹಣವನ್ನು ನನಗೆ ಒರ್ವರು ಕೊಡಬೇಕಿತ್ತು, ಈಗ ಕೊಟ್ಟಿದ್ದಾರೆ. ಈ ಹಣ ನಿನ್ನ ಮನೆಯಲ್ಲಿ ಇರಲಿ, ನಾನು ಮಲೆ ಮಹದೇಶ್ವರ ಬೆಟ್ಟ ಹೋಗಿ ಬಂದ ಮೇಲೆ ತೆಗೆದುಕೊಂಡು ಹೋಗುತ್ತೇನೆ ಎಂದು ಗೆಳೆಯನಿಗೆ ಹೇಳಿದ್ದನು. ಆದರೆ ಶಿವುಗೆ ಇದು ಯಾವ ಹಣ ಎಂಬುವುದು ತಿಳಿದಿರಲಿಲ್ಲ.

ಆದರೆ ಹಣ ತಂದು ಕೊಟ್ಟಿದ್ದು ಮಾತ್ರ ಸ್ಪಷ್ಟವಾಗಿದೆ. ಹೀಗಾಗಿ ಪೊಲೀಸರು ಶಿವು ಅನ್ನು ಸಾಕ್ಷಿಯಾಗಿ ಮಾಡಿದ್ದಾರೆ. ಆರೋಪಿ ಕಿರಣ್​​ನಿಂದ ಐದು ಲಕ್ಷ ನಗದು ಮತ್ತು ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣ ದೋಚಲೆಂದೇ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ತಲಘಟ್ಟಪುರ ಇನ್ಸ್ಪೆಕ್ಟರ್ ಜಗದೀಶ್ ನೇತ್ರತ್ವದಲ್ಲಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಪ್ರತಿಮಾ ಕೊಲೆ ಕೇಸ್, ಆರೋಪಿ ಕಿರಣ್ ತಪ್ಪೊಪ್ಪಿಗೆ: ಡಿಸಿಪಿ ರಾಹುಲ್ ಕುಮಾರ್ ಸ್ಪಷ್ಟನೆ

ಮೊದಲಿಗೆ ಬೇರೆಯೇ ಕಥೆ ಕಟ್ಟಿದ್ದ ಆರೋಪಿ ಕಿರಣ್​

ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಕಿರಣ್​​ನನ್ನು ಬಂಧಿಸಿದ್ದರು. ಈ ವೇಳೆ ಆರೋಪಿ ಕಿರಣ ಪೊಲೀಸರ ಎದುರು “ನಾನು ಪ್ರತಿಮಾ ಮೇಡಂ ಕಾರ್​ ಚಾಲಕನಾಗಿದ್ದೆ. ಇತ್ತೀಚಿಗೆ ನನ್ನನ್ನು ಕೆಲಸದಿಂದ ತೆಗೆಯಲಾಗಿತ್ತು. ಅದಕ್ಕೆ ನಾನು ಕ್ಷಮಿಸಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ ಎಂದಿದ್ದೆ. ಆದರೆ ಮೇಡಂ ಇದಕ್ಕೆ ಒಪ್ಪದೇ ಇದ್ದಾಗ ಕೊಪ ಬಂದು ಕೊಲೆ ಮಾಡಿದೆ. ಮತ್ತು ಅಲ್ಲಿಯೇ ಇದ್ದ 15 ಸಾವಿರ ತೆಗೆದುಕೊಂಡು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದೆ” ಎಂದು ಹೇಳಿದ್ದನು. ಆದರೆ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ