ಪಾರ್ಟ್‌ಟೈಮ್ ಜಾಬ್ ಆಫರ್ ನಂಬಿ 39 ಲಕ್ಷ ರೂ ಕಳೆದುಕೊಂಡ ಇಂಜಿನಿಯರ್!

| Updated By: ಗಂಗಾಧರ​ ಬ. ಸಾಬೋಜಿ

Updated on: Aug 14, 2023 | 3:07 PM

Gadag News: ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ನಂಬಿ ಇಂಜಿನಿಯರ್ ಒಬ್ಬರು ಬರೋಬ್ಬರಿ 39 ಲಕ್ಷದ 15 ಸಾವಿರ ರೂ.ಗಳನ್ನು ಕಳೆದುಕೊಂಡು ಮೋಸ ಹೊಗಿರುವಂತಹ ಘಟನೆ ಗದಗ ನಗರದಲ್ಲಿ ಕಂಡುಬಂದಿದೆ. ಅಲ್ಲಿಗೆ ಅನಕ್ಷರಸ್ಥ ಜನರು ಮೋಸಹೋಗಬಹುದು ಮಾತ್ರವಲ್ಲದೇ ಅಕ್ಷರಸ್ಥರು ಕೂಡ ಮೋಸ ಹೋಗುತ್ತಿರುವುದು ವಿಪರ್ಯಾಸವೇ ಸರಿ.

ಪಾರ್ಟ್‌ಟೈಮ್ ಜಾಬ್ ಆಫರ್ ನಂಬಿ 39 ಲಕ್ಷ ರೂ ಕಳೆದುಕೊಂಡ ಇಂಜಿನಿಯರ್!
ಪ್ರಾತಿನಿಧಿಕ ಚಿತ್ರ
Follow us on

ಗದಗ ಆಗಸ್ಟ್​ 14: ಸೈಬರ್ ಕ್ರೈಮ್ (cybercrime) ಪೊಲೀಸರು, ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಸಲ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರೂ ಮತ್ತೆ ಮತ್ತೆ ಜನರು ಮೋಸ ಹೋಗುತ್ತಿರುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅನಕ್ಷರಸ್ಥ ಜನರು ಮೋಸಹೋಗಬಹುದು. ಆದರೆ ಅಕ್ಷರ ಜ್ಞಾನ ಹೊಂದಿದವರೇ ಮೋಸ ಹೋಗುತ್ತಿರುವುದು ವಿಪರ್ಯಾಸವೇ ಸರಿ. ಈಗಿನ ಕಾಲದಲ್ಲಿ ದುಡಿದ ಹಣವೇ ಸರಿಯಾಗಿ ಸಿಗುವುದು ಕಷ್ಟ. ಹೀಗಿದ್ದರೂ ತುರ್ತಾಗಿ ಹಣ ಗಳಿಸುವ ದುರಾಸೆಗೆ ಬಿದ್ದು ಹಣ ಕಳೆದಕೊಳ್ಳವವರ ಸಂಖ್ಯೆ ಕಡಿಮೆ ಇಲ್ಲ.

ಇಲ್ಲೊಂದು ಪ್ರಕರಣದಲ್ಲಿ ಮಿಸ್ ಆನಿಕಾ ಎಂಬವರು ಕಳುಹಿಸಿದ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ನಂಬಿ ಇಂಜಿನಿಯರ್ ಒಬ್ಬರು ಬರೋಬ್ಬರಿ 39 ಲಕ್ಷದ 15 ಸಾವಿರ ರೂ.ಗಳನ್ನು ಕಳೆದುಕೊಂಡು ಮೋಸಕ್ಕೆ ಒಳಗಾಗಿದ್ದಾರೆ.

ಗದಗ ಶಹರದ ಹುಡ್ಕೋ ಕಾಲೋನಿಯ ಸಂದೀಪ ತಂದೆ ರಂಗನಗೌಡ ಪಾಟೀಲ ಎಂಬ ಇಂಜಿನಿಯರ್ ಆಗಸ್ಟ್ 4ರಿಂದ 8ರವರೆಗೆ ತಮಗೆ 9593989404 ಈ ನಂಬರ್‌ನಿಂದ ಮಿಸ್ ಆನಿಕಾ ಎಂಬುವರು ವಾಟ್ಸ್‌ಅಪ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ಕಳುಹಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸ್ಪಂದನಾ ವಿಜಯ್‌ ಬೆನ್ನಲ್ಲೇ ಹೃದಯಾಘಾತದಿಂದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಸಾವು

ನಂತರ ಲಿಯಾ @Lia9913, ಕಿರಣರಾವ್@KiranRao01231311 ನತಾಶಾ@NT13454 ಮತ್ತು ಕಿಶೋರ್ @Kishore55031 ಎಂಬುವರು ವಿವಿಧ ಟಾಸ್ಕ್​ಗಳನ್ನು ಕೊಟ್ಟು 20ಲಕ್ಷದ 24ಸಾವಿರದ, 800ರೂ.ಗಳನ್ನು ಅಕೌಂಟ್‌ನಲ್ಲಿ ಹಾಕಿ ಆಶೆ ಹುಟ್ಟಿಸಿದ್ದಾರೆ.

ಆ ಹಣ ವಿತ್‌ಡ್ರಾ ಮಾಡಲು ಹೋದಾಗ ಅಕೌಂಟ್ ತಡೆಹಿಡಿದು ಅನ್ಪ್ರೀಜ್ ಮಾಡಲು ಹಂತ-ಹಂತವಾಗಿ 39ಲಕ್ಷ, 15 ಸಾವಿರಗಳನ್ನು ಹಾಕಿಸಿಕೊಂಡು ಇನ್ನೂ ಐದು ಲಕ್ಷ ರೂ. ಹಾಕಬೇಕು ಎಂದು ಮೆಸೇಜ್ ಕಳುಹಿಸಿ ಮೋಸ ಮಾಡಿದ್ದಾರೆ.

ಈ ಕುರಿತು ಇಂಜಿನಿಯರ್ ಸಂದೀಪ್ ತಂದೆ ರಂಗನಗೌಡ ಪಾಟೀಲ ಸಿಇಎನ್ ಠಾಣೆಗೆ ದೂರು ನೀಡಿದ್ದು, 0061/2023 ಮಾಹಿತಿ ತಂತ್ರಜ್ಞಾನ ಕಾಯ್ದೆ 2008(U/s-66(D))ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗಾಹಕರನ್ನು ವಂಚಿಸಿ ನಕಲಿ ಚಿನ್ನ ಮಾರಾಟ

ಕೊಪ್ಪಳ: ಬಂಗಾರ ಮಾರಾಟದ ನೆಪದಲ್ಲಿ ಬಂದ ಮಹಿಳೆ ಈ ನಕಲಿ ಚಿನ್ನ ಮಾರಾಟ ಮಾಡಿ‌ ಯಾಮಾರಿಸಿರುವಂತಹ ಘಟನೆ ಇತ್ತೀಚೆಗೆ ಕೊಪ್ಪಳ ನಗರದಲ್ಲಿ ಆಗಸ್ಟ್‌ 3 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಪ್ಪಳದ ನಾಗರತ್ನ ಅಳವಂಡಿ,‌ ಎಂ.ಸುನೀತ ವಂಚನೆಗೆ ಒಳಗಾದವರು. ಹಣ ಕಳೆದುಕೊಂಡ ನಾಗರತ್ನ ಅವರು ಕಳೆದ 4 ದಿನದ ಹಿಂದೆಯೇ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

ಈ ಹಿನ್ನೆಲೆ ಈ ವಂಚಕ ಗ್ಯಾಂಗ್​ಗೆ ಜ್ಯುವೆಲರಿ ಶಾಪ್ ಮಾಲೀಕರು ಮತ್ತು ಪೊಲೀಸ್ ಇಲಾಖೆಯ ಕೆಲವರ ಪರೋಕ್ಷ ಬೆಂಬಲ ಇದೆ ಎಂದು ನಾಗರತ್ನ ಆರೋಪಿಸಿದ್ದಾರೆ.

ಇದನ್ನೂ ಓದಿ: ಎಂಡಿಎಂಎ ಸಾಗಿಸುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಸೇರಿ ಮೂವರ ಬಂಧನ

ಕಳೆದ ಆಗಸ್ಟ್​ 3 ರಂದು ನಾಗರತ್ನ, ಕೊಪ್ಪಳದ ಜವಾಹರ್ ರಸ್ತೆಯಲ್ಲಿನ ಸಿ.ಜೆ.ಸೋಮನಾಥ ಜ್ಯುವೆಲರಿ ಅಂಗಡಿ ಚಿನ್ನ ಖರೀದಿಗೆ ಹೋಗಿದ್ದಾರೆ. ಈ ವೇಳೆ ಅದೇ ಅಂಗಡಿಗೆ ಬಂದಿರುವ ಮಹಿಳೆ ಯೊಬ್ಬಳು, ತಮ್ಮ ಬಳಿ ಇದ್ದ ಒಂದಷ್ಟು ಚಿನ್ನದ ಮಾದರಿಯ ವಸ್ತು ತೋರಿಸಿ, ಪರೀಕ್ಷೆ ಮಾಡಿಸಿದ್ದಾರೆ. ಆ ಆಭರಣ ಪರೀಕ್ಷೆ ಮಾಡಿರುವ ಚಿನ್ನದ ವ್ಯಾಪಾರಿ ‘ಇದು 24 ಕ್ಯಾರೇಟ್ ಚಿನ್ನವೇ ಹೌದು. ಆದರೆ, ನಾನು ಇದನ್ನು ಹಣ ಕೊಟ್ಟು ಖರೀದಿ ಮಾಡುವುದಿಲ್ಲ. ಬದಲಾಗಿ ಚಿನ್ನಾಭರಣ ಎಕ್ಸಚೇಂಜ್ ಮಾಡುತ್ತೇನೆ’ ಎಂದಿದ್ದಾರೆ.

ಅಷ್ಟರಲ್ಲೇ ಚಿನ್ನ ಖರೀದಿಗೆ ಹೋಗಿದ್ದ ನಾಗರತ್ನ ಮತ್ತು ಅವರ ಗೆಳತಿ ಕೂಡ ಜ್ಯುವೆಲರಿ ಶಾಪ್​ನಿಂದ ಹೊರಗೆ ಬಂದಿದ್ದು, ವಂಚನೆ ಮಾಡಲು ಬಂದಿದ್ದ ಮಹಿಳೆ ಇವರನ್ನು ಹಿಂಬಾಲಿಸಿದ್ದಾಳೆ. ಇವರನ್ನು ತಡೆದು ನಿಲ್ಲಿಸಿ, ‘ನನ್ನ ಪತಿ ಆಸ್ಪತ್ರೆಯಲ್ಲಿದ್ದು, ನನಗೆ ಹಣದ ತುರ್ತು ಅಗತ್ಯ ಇದೆ. ಒಟ್ಟು 30 ಗ್ರಾಂ. ಇರುವ ಈ ಚಿನ್ನ ಇಟ್ಟುಕೊಂಡು ಕನಿಷ್ಠ 50 ಸಾವಿರ ಹಣ ಕೊಡಿ. ಬಾಕಿ ಹಣ ನಂತರ ಕೊಡುವಂತೆ ಎಂದು ಗೋಗರೆದಿದ್ದಾಳೆ.

ಆಗ ನಾಗರತ್ನ ಅವರು ಬ್ಯಾಕ್​ಗೆ ಕರೆದೊಯ್ದು ಆ ಮಹಿಳಿಗೆ 40 ಸಾವಿರ ಹಣ ರೂ. ನೀಡಿದ್ದಾರೆ.‌ ಮರು ದಿನ ಆ ವಸ್ತುಗಳನ್ನು ಅದೇ ಚಿನ್ನದ ವ್ಯಾಪಾರಿ ಬಳಿ ತಂದು, ಆರಂಭರಣ ಮಾಡುವಂತೆ ಹೇಳಿದ್ದು, ಇವೆಲ್ಲ ಚಿನ್ನ ಅಲ್ಲ ಎಂದು ಹೇಳಿದ್ದಾರೆ.

ವಂಚನೆ ಆಗಿರುವ ಬಗ್ಗೆ ನಾಗರತ್ನ ಆಗಸ್ಟ್ 6 ರಂದು ಕೊಪ್ಪಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ವಂಚನೆ ಮಾಡಿರುವ ಮಹಿಳೆಯ ಚಲನ-ವಲನ ಜ್ಯುವೆಲರಿ ಶಾಪ್​ನಲ್ಲಿ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಪೊಲೀಸರು ಕೂಡಲೇ ಕ್ರಿಯಾಶೀಲರಾಗಿ ವಂಚಕಿಯ ಫೋಟೊ ಸಾರ್ವಜನಿಕ ಸ್ಥಳದಲ್ಲಿ ಅಂಟಿಸುವ ಮೂಲಕ ಮುಂದೆ ಆಕೆ‌ ಮಾಡಬಹುದಾದ ವಂಚನೆ ತಡೆಯಬಹುದಿತ್ತು. ಆದರೆ, ಘಟನೆ ಕುರಿತು ಪೊಲೀರು ನಿರಾಸಕ್ತಿ ತೋರಿಸುತ್ತಿದ್ದು,‌‌ ಅನುಮಾನಕ್ಕೆ ಕಾರಣವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:06 pm, Mon, 14 August 23