AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಸ್ಪಂದನಾ ವಿಜಯ್‌ ಬೆನ್ನಲ್ಲೇ ಹೃದಯಾಘಾತದಿಂದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಸಾವು

ಇತ್ತೀಚೆಗೆ ಚಿಕ್ಕ ಮಕ್ಕಳು (Children) ಹೃದಯಾಘಾತದಿಂದ(heart attack) ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಆಟವಾಡುತ್ತಿರುವಾಗಲೋ ಅಥವಾ ಕುಳಿತುಕೊಂಡಿರುವಾಗಲೋ ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಮೊನ್ನೇ ಚಾಮರಾಜನಗರದ ವಿದ್ಯಾರ್ಥಿಯೋರ್ವಳು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಳು. ಇದರ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ನರ್ಸಿಂಗ್​ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಮಂಗಳೂರು: ಸ್ಪಂದನಾ ವಿಜಯ್‌ ಬೆನ್ನಲ್ಲೇ ಹೃದಯಾಘಾತದಿಂದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಸಾವು
ಸುಮಾ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Aug 14, 2023 | 12:59 PM

Share

ಮಂಗಳೂರು, ಆ.14: ಕರ್ನಾಟಕದಲ್ಲಿ ಸ್ಪಂದನಾ ವಿಜಯ್‌ ರಾಘವೇಂದ್ರ ಅವರ ಹೃದಯಾಘಾತದ ಸಾವು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದರ ಬೆನ್ನಲ್ಲೇ  ಲೋ ಬಿಪಿಯಿಂದ(Low BP) ಹೃದಯಾಘಾತ(Heart Attack) ಸಂಭವಿಸಿ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ (Student) ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ಸುಮಾ(19) ಮೃತ ವಿದ್ಯಾರ್ಥಿನಿ. ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ಸುಮಾಗೆ ಆಗಾಗ ಆರೋಗ್ಯ ಕೈ ಕೊಟ್ಟಿದ್ದು ಲೋ ಬಿಪಿಯಾಗಿ ಹೃದಯಾಘಾತವಾಗಿ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ಸುಮ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಆ.11 ರಂದು ಮತ್ತೆ ಆರೋಗ್ಯ ಹಾಳಾಗಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇನ್ನೇನು ಆರೋಗ್ಯ ಸರಿಯಾಯ್ತು ಎನ್ನವಷ್ಟುರಲ್ಲಿ ಮತ್ತೆ ಆ.13 ರಂದು ಸಂಜೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ರಾಷ್ಟ್ರಗೀತೆ ಹಾಡುವ ವೇಳೆಯೇ ಹೃದಯಾಘಾತದಿಂದ SSLC ವಿದ್ಯಾರ್ಥಿನಿ ಸಾವು

ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು, ವೈದ್ಯರ ನಿರ್ಲಕ್ಷ್ಯದ ಆರೋಪ

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು ವೈದ್ಯರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ದಾವಣಗೆರೆ ತಾಲೂಕಿನ ಕಲ್ಕಕೇರಿ ಕ್ಯಾಂಪ್ ನಿವಾಸಿ ನೇತ್ರಾವತಿ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು 1 ಕೆಜಿ 700 ಗ್ರಾಂ ತೂಕ ಹೊಂದಿತ್ತು. ಹಾಗೂ ಗಂಡು ಮಗು 1 ಕೆಜಿ 800 ಗ್ರಾಂ ತೂಕ ಹೊಂದಿತ್ತು. ಆದ್ರೆ ಹೆಚ್ಚು ತೂಕ ಇದ್ದ ಗಂಡು ಮಗು ಮೃತಪಟ್ಟಿದೆ. ಹೀಗಾಗಿ ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಹೆಣ್ಣು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ವೈದ್ಯರ ವಿರುದ್ಧ FIR ದಾಖಲಾಗಿದೆ.

ಪ್ರವಾಸಿ ಮಂದಿರದಲ್ಲಿ ಹೆಡ್‌ಕಾನ್ಸ್‌ಟೇಬಲ್ ಮೃತ ದೇಹ ಪತ್ತೆ

ಹಾಸನ ನಗರದ ಎನ್.ಆರ್.ವೃತ್ತದ ಸಮೀಪ ಇರುವ ಪ್ರವಾಸಿ ಮಂದಿರದಲ್ಲಿ ಹೆಡ್‌ಕಾನ್ಸ್‌ಟೇಬಲ್ ಮೃತ ದೇಹ ಪತ್ತೆಯಾಗಿದೆ. ರಾಜೇಂದ್ರ (51) ಮೃತ ಹೆಡ್‌ಕಾನ್ಸ್‌ಟೇಬಲ್.  ರಾತ್ರಿ ವೇಳೆ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ತಲೆಗೆ ಬಲವಾದ ಪೆಟ್ಟು ಬಿದ್ದಿರಬಹುದು ಅಥವಾ ನೆಲಕ್ಕೆ ಬಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ರಾಜೇಂದ್ರ ಕೆ‌ಎಸ್‌ಆರ್‌ಪಿ ಹನ್ನೊಂದನೆ ಬ್ಯಟಾಲಿಯನ್‌ನ ಹೆಡ್‌ಕಾನ್ಸ್‌ಟೇಬಲ್ ಆಗಿದ್ದರು. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:00 am, Mon, 14 August 23