ಕೆಳಗಿಳಿಯೋ ಮಂಗಣ್ಣ: ಕೋತಿ ರಕ್ಷಣೆಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಹರಸಾಹಸ, ಆಪರೇಷನ್ ‘ಮಂಕಿ’ ಸಕ್ಸಸ್

ಅನ್ನ, ನೀರು ಇಲ್ಲದೇ ಎತ್ತರ ಮರ ಏರಿ ಬರೋಬ್ಬರಿ ಐದು ದಿನ ಅಲ್ಲೇ ಕುಳಿತಿದ್ದ ಕೋತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಐದು ಗಂಟೆ ಆಪರೇಷನ್ ಮಂಕಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.

ಕೆಳಗಿಳಿಯೋ ಮಂಗಣ್ಣ: ಕೋತಿ ರಕ್ಷಣೆಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಹರಸಾಹಸ, ಆಪರೇಷನ್ ‘ಮಂಕಿ’ ಸಕ್ಸಸ್
40 ಅಡಿ ಎತ್ತರ ಗಿಡ ಏರಿ ಕುಳಿತ ಕೋತಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on:Jun 04, 2023 | 5:00 PM

ಗದಗ: ಆ ಕೋತಿ ಎತ್ತರ ಮರ ಏರಿ ಬರೋಬ್ಬರಿ ಐದು ದಿನಗಳಾಗಿತ್ತು. ಅನ್ನ, ನೀರು ಇಲ್ಲದೇ ನರಳಾಡುತ್ತಿತ್ತು. ನಿನ್ನೆ ಸತತ ಐದು ಗಂಟೆ ಆಪರೇಷನ್ ಮಂಕಿ (Operation ‘Monkey’) ಕಾರ್ಯಾಚರಣೆ ಮಾಡಿದ್ರೂ ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿತ್ತು. ಆದ್ರೆ, ಇಂದು ಬೆಳ್ಳಂಬೆಳಗ್ಗೆ ನಡೆಸಿದ ಆಪರೇಷನ್ ಮಂಕಿ ರೋಚಕವಾಗಿತ್ತು. ವ್ಯಕ್ತಿಯೊಬ್ಬ ಮರ ಏರುತ್ತಿದ್ದಂತೆ ಬೆದರಿಂದ ಮಂಗ ಸರ್ರ್ ಅಂತ ಕೆಳಗಿಳಿದು ಬಂದಿದೆ. ಕೆರಳಿದ ಮಂಗ ಮರದಿಂದ ಕೆಳಗೆ ಇಳಿಯುತ್ತಿದ್ದಂತೆ ಇಬ್ಬರ ಮೇಲೆ ಅಟ್ಯಾಕ್ ಗಾಯಗೊಳಿಸಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ಕೊನೆಗೂ ಆಪರೇಷನ್ ಮಂಕಿ ಸಕ್ಸಸ್ ಆಗಿದೆ.

ಮಂಗ ಒಂದು 40 ಅಡಿ ತೆಂಗಿನ ಮರವೇರಿ ಕುಳಿತಿದೆ. ಅರೇ ಮಂಗ ಗಿಡ ಏರೋದ್ರಲ್ಲಿ ವಿಶೇಷ ಏನೂ ಅನ್ನೋ ಕೂತಹಲ ಸಹಜ. ಆದ್ರೆ, ಈ ಮಂಗ ಮರ ಹತ್ತಿ ಐದು ದಿನಗಳು ಕಳೆದಿವೆ. ಆದ್ರೆ, ಗಂಭೀರ ಗಾಯಗೊಂಡ ಮಂಗ ಮರದಿಂದ ಕಳಗೆ ಇಳಿಯಲು ಆಗದೇ ಒದ್ದಾಡುತ್ತಿತ್ತು. ಕಳೆದ ಐದು ದಿನಗಳಿಂದ ಆಹಾರ,‌ ನೀರು ಇಲ್ಲದೆ ತೆಂಗಿನ ಮರ ಏರಿ ಕುಳಿತಿದ್ದ ಮಂಗ ಸ್ಥಿತಿ ಅಯೋ ಪಾಪ ಎನ್ನುವಂತಿತ್ತು. ಗದಗ ನಗರದ ಮುಳಗುಂದ ನಾಕಾದಲ್ಲಿ ಈ ಘಟನೆ ಕಂಡುಬಂದಿದೆ.

ಇದನ್ನೂ ಓದಿ: Gadag News: ಗದಗ ಜಿಲ್ಲಾ ಪೊಲೀಸರ ಭರ್ಜರಿ ಮೊಬೈಲ್ ಕಾರ್ಯಾಚರಣೆ; ಒಂದೇ ತಿಂಗಳಲ್ಲಿ ಲಕ್ಷಾಂತರ ರೂ. ಮೊಬೈಲ್​ಗಳು ಪತ್ತೆ

ಮಂಗನ ಮನಕಲುಕುವ ಸ್ಥಿತಿ ನೋಡಿದ ಸ್ಥಳೀಯರು ಮಂಗನನ್ನು ಕೆಳಗೆ ಇಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಅದು ಕೆಳಗೆ ಇಳಿದಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಶನಿವಾರ ನಡೆಸಿದ ಮಂಕಿ ಆಪರೇಷನ್ ವಿಫಲವಾಗಿತ್ತು. ನಿನ್ನೆ ಅಗ್ನಿ ಶಾಮಕ ದಳ ವಾಟರ್ ಫೈರ್ ಮೂಲಕ ಮಂಕಿ ರಕ್ಷಣೆ ಕಸರತ್ತು ನಡೆಸಿದ್ದರು. ಮತ್ತೊಂದೆಡೆ ಅರವಳಿಕೆ ನೀಡಿ ಮಂಗನನ್ನು ಹಿಡಿಯಬೇಕು ಅಂತ ಸತತ ಐದು ಗಂಟೆ ನಡೆಸಿದ ಕಾರ್ಯಾಚರಣೆ ವಿಫಲವಾಗಿತ್ತು.

ಹೀಗಾಗಿ ಇಂದು ಬೆಳ್ಳಂಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತೆ ಕಾರ್ಯಚರಣೆ ನಡೆಸಿದ್ದರು. ಕ್ರೇನ್ ಬಳಸಿಕೊಂಡು ರಕ್ಷಣಾ ಕಾರ್ಯ ಮಾಡಬೇಕೋ ಅಥವಾ ತೆಂಗಿನ ಮರ ಏರುವ ಮಷಿನ್ ಮೂಲಕ ಕಾರ್ಯಾಚರಣೆ ಮಾಡಬೇಕು ಅಂತ ಚರ್ಚೆ ಮಾಡಿದ ಅಧಿಕಾರಿಗಳು, ಕೊನೆಗೆ ತೆಂಗಿನ ಮರ ಏರುವ ಮಷಿನ್ ಮೂಲಕ ವ್ಯಕ್ತಿಯನ್ನು ತೆಂಗಿನ ಗಿಡ ಹತ್ತಿಸಿ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Gadag News: ಜಿಲ್ಲೆಯಾದ್ಯಂತ ಹೆಚ್ಚುತ್ತಿವೆ ಬಾಲ್ಯ ವಿವಾಹ‌ ಪ್ರಕರಣಗಳ ಸಂಖ್ಯೆ; 5 ವರ್ಷದಲ್ಲೇ 171 ಬಾಲ್ಯ ವಿವಾಹಕ್ಕೆ ಬ್ರೇಕ್​, 115 ಫೋಕ್ಸೋ ಕೇಸ್ ದಾಖಲು

ಆ ವ್ಯಕ್ತಿ ತೆಂಗಿನ ಮರ ಏರುತ್ತಿದ್ದಂತೆಯೇ ಗಾಬರಿಗೆ ಬಿದ್ದ ಮಂಗ ಸರ್ರನೇ ಕೆಳಗೆ ಇಳಿದಿದೆ. ಮರ ಇಳಿದು ಓಡುತ್ತಿದ್ದ ಮಂಗನನ್ನು ಸ್ಥಳೀಯ ವ್ಯಕ್ತಿ ಹಿಡಿಯಲು ಮುಂದಾದಾಗ ಆತನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಈ ವ್ಯಕ್ತಿಯನ್ನು ಬಿಡಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಚಂದ್ರು ಮೇಲೂ ಅಟ್ಯಾಕ್ ಮಾಡಿ ಗಾಯಗೊಳಿಸಿದೆ. ಗಾಯಗೊಂಡವರು ಸದ್ಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗದಗ ಆರ್​ಎಫ್​ಓ ಮಂಜುನಾಥ ಮೇಲಗಮನಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ. ಮಂಗನ ಬಲ ಭಾಗದ ತೊಡೆಗೆ ಗಂಭೀರ ಗಾಯವಾಗಿದೆ. ಹೀಗಾಗಿ ಗಾಯಗೊಂಡ ಮಂಗನಿಗೆ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಐದು ದಿನಗಳ ಮಂಗನ ವನವಾಸ ಇಂದು ಅಂತ್ಯವಾಗಿದೆ. ಮಂಗ ಈ ಅರಣ್ಯ ಇಲಾಖೆ ಆರೈಕೆಯಲ್ಲಿದ್ದು, ಮಂಗನ ನರಳಾಟ ನೋಡಿ ಮರುಗಿದ ಜನ್ರು ನಿರಾಳರಾಗಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 4:26 pm, Sun, 4 June 23

ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ