Gadag Police: ಪೊಲೀಸರಿಗೇ ಕಾಟ ಕೊಡುತ್ತಿದ್ದ ಗದಗ ಕುಖ್ಯಾತ ರೌಡಿಶೀಟರ್​, ಕೊನೆಗೂ ಹುಬ್ಬಳ್ಳಿಯಲ್ಲಿ ಅರೆಸ್ಟ್​, ಬಳ್ಳಾರಿ ಜೈಲಿಗೆ ರವಾನೆ

| Updated By: ಸಾಧು ಶ್ರೀನಾಥ್​

Updated on: Feb 07, 2023 | 3:03 PM

ಪೊಲೀಸ್ ಅಧಿಕಾರಿ ಹಾಗೂ ಪೊಲೀಸರ ಮೇಲೆ ದರ್ಪ ತೋರಿದ್ದ ರೌಡಿ ಶೀಟರ್, ಗೂಂಡಾ ಕೊನೆಗೂ ಅರೆಸ್ಟ್. ಮಹಾರಾಷ್ಟ್ರದ ಮುಂಬೈ, ಪುಣೆಯಲ್ಲಿ ಶೋಧ ನಡೆಸಲಾಗಿ ಗೂಂಡಾ, ರೌಡಿ ಶೀಟರ್ ಕೇಸ್ ಹೊತ್ತ ಖತರ್ನಾಕ್ ಆಸಾಮಿಯ ಹೆಜ್ಜೆ ಹೆಜ್ಜೆಯ ಮೇಲೆ ನಿಗಾ ಇಟ್ಟಿದ್ದರು ಪೊಲೀಸ್ರು.

Gadag Police: ಪೊಲೀಸರಿಗೇ ಕಾಟ ಕೊಡುತ್ತಿದ್ದ ಗದಗ ಕುಖ್ಯಾತ ರೌಡಿಶೀಟರ್​, ಕೊನೆಗೂ ಹುಬ್ಬಳ್ಳಿಯಲ್ಲಿ ಅರೆಸ್ಟ್​, ಬಳ್ಳಾರಿ ಜೈಲಿಗೆ ರವಾನೆ
ಪೊಲೀಸರಿಗೇ ಕಾಟ ಕೊಡುತ್ತಿದ್ದ ಗದಗ ಕುಖ್ಯಾತ ರೌಡಿಶೀಟರ್ ಅರೆಸ್ಟ್​
Follow us on

ಅವನು ಆ ಪಟ್ಟಣದ ಖತರ್ನಾಕ್ ಗೂಂಡಾ, ರೌಡಿ ಶೀಟರ್ (notorious rowdy sheeter). ಎಲ್ಲರಿಗೂ ಆತನಿಂದಾಗುವ ಉಪಟಳಕ್ಕೆ ಸಾಕು ಸಾಕಾಗಿ ಹೋಗಿತ್ತು. ಪೊಲೀಸ್ ಅಧಿಕಾರಿಗಳಿಗೂ ಗುರ್ ಗುರ್ ಅಂತಿದ್ದ ಭಂಡ ಅವ. ಈ ಗೂಂಡಾನನ್ನು ಬಂಧಿಸಲು ಹೋದಾಗ ಪೊಲೀಸರಿಗೇ… ಕೊಚ್ವಿ ಹಾಕುತ್ತೇನೆ ಅಂತಾ ಅವಾಜ್ ಹಾಕಿದ್ದವ. ಅಷ್ಟೇ ಅಲ್ಲ, ಪೊಲೀಸರ ಮೇಲೆಯೇ ಇಡೀ ಕುಟುಂಬದ ಸದಸ್ಯರು ಹಲ್ಲೆ ಮಾಡಿ, ಪಿಎಸ್ಐ ಕಾಲಿಗೆ ಗಾಯಗೊಳಿಸಿ ನಾಪತ್ತೆಯಾಗಿದ್ದ. ಆದ್ರೆ, ಪೊಲೀಸ್ರು ಬಿಡ್ತಾರಾ ಸಿನಿಮೀಯ ರೀತಿಯಲ್ಲಿ ನಟೋರಿಯಸ್ ರೌಡಿಯನ್ನು ಅಟ್ಯಾಕ್ ಮಾಡಿ ಬಳ್ಳಾರಿ ಜೈಲಿಗೆ ಅಟ್ಟಿ ಬಂದಿದ್ದಾರೆ (Gadag Police). ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದ ರೌಡಿ ಶೀಟರ್ ಕೊನೆಗೂ ಅರೆಸ್ಟ್ (arrest) ಆಗಿದ್ದಾನೆ! ಜಿಲ್ಲಾಧಿಕಾರಿಗಳ ಆದೇಶದಂತೆ ಗೂಂಡಾಕಾಯ್ದೆಯಡಿ ಬಂಧಿಸಲು ಹೋದಾಗ ಗಲಾಟೆ ಮಾಡಿದ್ದ ಆರೋಪಿ ಅಬ್ದುಲ್ ರಜಾಕ್ ಆಡೂರನನ್ನು ಲಕ್ಷ್ಮೇಶ್ವರ ಪೊಲೀಸ ಬಂಧಿಸಿ ಬಳ್ಳಾರಿ ಜೈಲಿಗೆ ಬಿಟ್ಟುಬಂದಿದ್ದಾರೆ.

ಪೊಲೀಸ್ ಅಧಿಕಾರಿ ಹಾಗೂ ಪೊಲೀಸರ ಮೇಲೆ ದರ್ಪ ತೋರಿದ್ದ ರೌಡಿ ಶೀಟರ್, ಗೂಂಡಾ ಕೊನೆಗೂ ಅರೆಸ್ಟ್. ಮಹಾರಾಷ್ಟ್ರದ ಮುಂಬೈ, ಪುಣೆಯಲ್ಲಿ ಶೋಧ ನಡೆಸಲಾಗಿ ಗೂಂಡಾ, ರೌಡಿ ಶೀಟರ್ ಕೇಸ್ ಹೊತ್ತ ಖತರ್ನಾಕ್ ಆಸಾಮಿಯ ಹೆಜ್ಜೆ ಹೆಜ್ಜೆಯ ಮೇಲೆ ನಿಗಾ ಇಟ್ಟಿದ್ದರು ಪೊಲೀಸ್ರು. ಕೊನೆಗೆ ಅವ ಪೊಲೀಸ್ರ ಬಲೆಗೆ ಬಿದ್ದಿದ್ದು ಹುಬ್ಬಳ್ಳಿಯಲ್ಲಿ.

ಎಸ್.. ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾದ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಆ ರೌಡಿಯ ಅಟ್ಟಹಾಸ ಹೆಚ್ಚಾಗಿತ್ತು‌. ಕಂಡ ಕಂಡವರಿಗೆ ಧಮ್ಮಿ ಹಾಕೋದು, ದಬ್ಬಾಳಿಕೆ ಮಾಡ್ತಾ, ರೌಡಿಸಂನಲ್ಲಿ ಹೆಸರು ಮಾಡ್ತಾಯಿದ್ದ. ಈತನ ಮೇಲೆ ಪೊಲೀಸರು ಕಣ್ಣು ಇಟ್ಟಿದ್ರು. ಇತ್ತೀಚೆಗೆ ಆತನ ಉಪಟಳ ಹೆಚ್ಚಾದಾಗ, ಜಿಲ್ಲಾಧಿಕಾರಿ ವೈಶಾಲಿ ಎಂ ಎನ್ ಅವರು, ಗೂಂಡಾಕಾಯ್ದೆಯಡಿ ಬಂಧಿಸುವಂತೆ ಆದೇಶ ಮಾಡಿದ್ರು‌‌.

ಲಕ್ಷ್ಮೇಶ್ವರ ಪಿಎಸ್ಐ ಪ್ರಕಾಶ ನೇತೃತ್ವದಲ್ಲಿ, ಅಬ್ದುಲ್ ಆಡೂರನನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಹಲ್ಲೆ‌ ಮಾಡಿದ್ದ, ತನ್ನ ರೌಡಿ ಶೀಟರ್ ಗ್ಯಾಂಗ್ ಕಟ್ಟಿಕೊಂಡು, ಕೊಚ್ಚಿ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದ. ಆದಾದ ನಂತ್ರ ಲಕ್ಷ್ಮೇಶ್ವರ ಪೊಲೀಸರು ಅಬ್ದುಲ್ ಆಡೂರನ ಐದು ಜನ ಸಹೋದರರನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.

ಆದ್ರೆ ಪ್ರಮುಖ ಆರೋಪಿ ಅಬ್ದುಲ್ ಆಡೂರ ಪೊಲೀಸರಿಗೆ ಚೆಳ್ಳಿಹಣ್ಣು ತಿನ್ನಿಸಿ, ನಾಪತ್ತೆಯಾಗಿದ್ದ.‌ ಇದು ಲಕ್ಷ್ಮೇಶ್ವರ ಪೊಲೀಸ್ರಿಗೆ ಚಾಲೆಂಜ್ ಆಗಿತ್ತು. ಹೀಗಾಗಿ ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾರ್ಗದಲ್ಲಿ ವಿಶೇಷ ತಂಡ ರಚನೆ ಮಾಡಿ ಶೀಘ್ರ ಬಂಧಿಸುವಂತೆ ಸೂಚಿಸಿದ್ದರು. ಹೀಗಾಗಿ ಸಿಪಿಐ ವಿಕಾಸ್ ಲಮಾಣಿ, ಪಿಎಸ್ಐ ಪ್ರಕಾಶ್ ನೇತೃತ್ವದ ತಂಡ ಮುಂಬೈ, ಪುಣೆಯಲ್ಲಿ ಶೋಧ ಮಾಡಿದ್ದರು. ಆದ್ರೆ, ಹುಬ್ಬಳಿಯಲ್ಲಿ ನಟೋರಿಯಸ್ ಅಬ್ದುಲ್ ರಜಾಕ್ ಆಡೂರ ಅವತಿದ್ದು ತಿಳಿದು ಅಲ್ಲಿ ಬಂಧಿಸಿದ್ದಾರೆ.

ಜನವರಿ 30 ರಂದು ಗೂಂಡಾ ಕಾಯ್ದೆಯಡಿ ಬಂಧಿಸಲು ಲಕ್ಷ್ಮೇಶ್ವರ ಪಿಎಸ್ಐ ಪ್ರಕಾಶ ಹೋದಾಗ ಅಬ್ದುಲ್ ಆಡೂರ್ ಹಾಗೂ ಸಹೋದರರು ಸೇರಿ ಪಿಎಸ್ಐ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ನಾಪತ್ತೆಯಾಗಿದ್ದ. ಪೊಲೀಸ್ರು ರೌಡಿ ಶೀಟರ್ ನಗರಸಭೆ ಸದಸ್ಯ ಫೀರ್ದೋಷ ಆಡೂರ್, ಅಬ್ದುಲ್ ಸತ್ತಾರ, ಸುಲೇಮಾನ್ ಆಡೂರ, ನಿಜಾಮ್ ಆಡೂರ, ಜಾಫರ್ ಐದು ಜನ್ರನ್ನು ಜನವರಿ 31 ರಂದು ಅರೆಸ್ಟ್ ಮಾಡಿದ್ದರು.

ಆದ್ರೆ, ಪ್ರಮುಖ ಆರೋಪಿ ಅಬ್ದುಲ್ ಆಡೂರ್ ಪೋಲೀಸ್ರು ಎಷ್ಟೇ ಪ್ರಯತ್ನ ಮಾಡಿದ್ರು ಸಿಕ್ಕಿರಲಿಲ್ಲಾ. ಆದ್ರೆ, ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ರು. ಮುಂಬಯಿ ಸೇರಿದಂತೆ ಹಲವು ರಾಜ್ಯಗಳಲ್ಲಿ ದುಬಾರಿ ಬೆಲೆಯ ಕಾರಿನಲ್ಲಿ ಸಂಚಾರ ಮಾಡ್ತಾಯಿರುವುದನ್ನು ಪತ್ತೆಹಚ್ಚಿದ್ದರು. ಆರೋಪಿ ಐಷಾರಾಮಿ ಕಾರಿನಲ್ಲಿ ಅಂತರಾಜ್ಯಕ್ಕೆ ಹೋಗುವಾಗ 10 ನಿಮಿಷಕ್ಕೆ ಒಂದು ಬಾರಿ ಮೊಬೈಲ್ ಸ್ವಿಚ್ ಆಫ್ ಮಾಡಿ, ಪೊಲೀಸರ ದಾರಿ ತಪ್ಪಿಸುತ್ತಿದ್ದ. ಪೊಲೀಸರು ಒಂದು ಪ್ರದೇಶಕ್ಕೆ ಹೋಗುವಷ್ಟರಲ್ಲಿ, ಮತ್ತೊಂದು ಪ್ರದೇಶಕ್ಕೆ ಹೋಗ್ತಾಯಿದ್ದ. ಐದಾರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಕೊನೆಗೆ ಹುಬ್ಬಳ್ಳಿ ಸಮೀಪ ರೌಡಿ ಅಬ್ದುಲ್ ಆಡೂರನನ್ನು ಪೊಲೀಸರು ಬಂಧಿಸಿ ಬಳ್ಳಾರಿ ಜೈಲಿಗೆ ಕಳಿಸಿದ್ದಾರೆ.

ರೌಡಿ ಶೀಟರ್ ಅಬ್ದುಲ್ ರಜಾಕ್ ಆಡೂರನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿ ಬಳ್ಳಾರಿ ಜೈಲಿಗೆ ಕಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ ಮೇಲೆ ಹಲ್ಲೆ ಮಾಡಲು ಬಂದ ರೌಡಿಗೆ ತಕ್ಕ ಪಾಠವನ್ನು ಕಲಿಸಿದ್ದಕ್ಕೆ ಜಿಲ್ಲೆಯ ರೌಡಿಗಳಿಗೆ ನಡುಕ ಆರಂಭವಾಗಿದೆ. ಕಾನೂನು ಕೈಗೆ ತೆಗೆದುಕೊಂಡ್ರೆ, ತಕ್ಕ ಪಾಠ ಕಲಿಸುತ್ತೇವೆ ಎನ್ನುವ ಖಡಕ್ ಸಂದೇಶವನ್ನು ಗದಗ ಎಸ್ಪಿ ರವಾನಿಸಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ

Published On - 2:51 pm, Tue, 7 February 23