ಗದಗ: ರೌಡಿ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆಯ ಮಾಸ್ಟರ್ ಪ್ಲಾನ್

| Updated By: Rakesh Nayak Manchi

Updated on: Feb 14, 2023 | 7:52 PM

ಅವಳಿ ನಗರದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮಿತಿಮಿರುತ್ತಿದೆ. ಸಂಗೀತದ ನಗರಿ ಈಗ ಕ್ರೈಂ ನಗರವಾಗಿ ಬದಲಾಗುತ್ತಿದೆ. ಜನರಲ್ಲಿ ಆತಂಕಗೊಂಡಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ತೀವ್ರ ತಲೆ ನೋವಾಗಿದೆ. ರೌಡಿ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ.

ಗದಗ: ರೌಡಿ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆಯ ಮಾಸ್ಟರ್ ಪ್ಲಾನ್
ಹೈಟೆಕ್ ಸಿಸಿ ಕ್ಯಾಮೆರಾಗಳು
Follow us on

ಗದಗ: ಪುಡಿ ರೌಡಿಗಳೇ ಹುಷಾರ್… ಇನ್ನು ಮುಂದೆ ನೀವಾನಾದ್ರೂ ಎಣ್ಣೆ ಮತ್ತನಲ್ಲಿ ಕಿರಿಕ್ ಮಾಡಿದರೆ ನಿಮ್ಮ ಅಟ್ಟಹಾಸ ಮೂರನೇ ಕಣ್ಣಲ್ಲಿ ಸೆರೆಯಾಗುತ್ತದೆ. ನಿಮಗೆ ಗೋತ್ತಿಲ್ಲದೇ ಅವಳಿ ನಗರದಲ್ಲಿ ನಿಮ್ಮ ಅಟ್ಟಹಾಸ ರಿಕಾರ್ಡ್ ಆಗುತ್ತದೆ. ಹೌದು ಮೊದ್ಲೇ ಗದಗ-ಬೆಟಗೇರಿ ಅವಳಿ ನಗರ ಅಂದರೆ ಸಂಗೀತದ ನಾಡು, ಮುದ್ರಣ ಕಾಶಿ ಅಂತಲೇ ಫೇಮಸ್ ಆಗಿವೆ. ಆದರೆ, ಅದ್ಯಾಕೋ ಗೋತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಅವಳಿ ನಗರ ಕ್ರೈಂ ಸಿಟಿಯಾಗಿ ಮಾರ್ಪಡುತ್ತಿದೆ. ಕ್ಷುಲ್ಲಕ ಕಾರಣಕ್ಕೂ ಹಾದಿಬೀದಿಯಲ್ಲಿ ಚಾಕು, ಚೂರಿ ಸಂಸ್ಕೃತಿ ಶುರುವಾಗಿದೆ. ಹೀಗಾಗಿ ರಾತ್ರಿಯಾದ ಸಾಕು ಜನರು ಅವಳಿ ನಗರದಲ್ಲಿ ಸುತ್ತಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಎರಡ್ಮೂರು ತಿಂಗಳಲ್ಲಿ ಮೂರ್ನಾಲ್ಕು ಚಾಕು, ಚೂರಿ ಇರಿತ ಘಟನೆಗಳಾಗಿವೆ. ಅಷ್ಟೇ ಅಲ್ಲ ಜನನಿಬಿಡ ಪ್ರದೆಶ ಮುಳಗುಂದ ನಾಕಾದಲ್ಲಿ ಹಾಡಹಗಲೇ ಓರ್ವ ಮಹಿಳೆ ಮೇಲೆ ಅಟ್ಯಾಕ್ ಮಾಡಿ ಭೀಕರ ಕೊಲೆಯು ನಡೆದಿದೆ. ಇದು ಪೊಲೀಸ್ ಇಲಾಖೆಗೂ ತಲೆ ನೋವಾಗಿತ್ತು. ಗದಗ ಜಿಲ್ಲೆಗೆ ಹೊಸದಾಗಿ ಬಂದ ಎಸ್ಪಿ ಬಿ.ಎಸ್. ನೇಮಗೌಡ ಅವರು ರೌಡಿ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಅವಳಿ ನಗರದ 37 ಪ್ರಮುಖ, ಸೂಕ್ಷ್ಮ ಪ್ರದೇಶಗಳಲ್ಲಿ ಹೈಟೆಕ್ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರದಿಂದ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಕೆಗೆ ಒಂದೂವರೆ ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಕೆಲಸ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕ್ರಿಮಿನಲ್​ಗಳ ಮೇಲೆ ಸಿಸಿ ಕಣ್ಣು ಇಡಲಾಗಿದೆ ಅಂತ ನೇಮಗೌಡ ಹೇಳಿದ್ದಾರೆ.

ಇದನ್ನೂ ಓದಿ: ಆ ಇಬ್ಬರು ಹಿಂದೂ-ಮುಸ್ಲಿಂ ಯುವಕರ ಮಧ್ಯೆ ಗಾಢ ಸ್ನೇಹವಿತ್ತು, ಆದರೆ ಒಬ್ಬ ಮತ್ತೊಬ್ಬನ ಪತ್ನಿಯ ಮೇಲೆ ಕಣ್ಣು ಹಾಕಿಬಿಟ್ಟ, ಮುಂದೆ ನಡೆದಿದ್ದು ಘೋರ

ಅವಳಿ ನಗರದಲ್ಲಿ ಸಂಜೆಯಾದರೆ ಸಾಕು ಪುಡಿ ರೌಡಿಗಳು ಎಣ್ಣೆ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕು, ಚೂರಿ ಇರಿಯವ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಒಬ್ಬರೇ ಹೊರಟರೆ ರೌಡಿಗಳು ಮಾರಣಾಂತಿಕ ಹಲ್ಲೆ ಮಾಡಿ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕ್ರೈಂ ಹಾಗೂ ಪುಡಿ ರೌಡಿಗಳ ಹೆಡೆಮುರಿ ಕಟ್ಟಲು ಈಗ ಸಿಸಿ ಕಣ್ಣುಗಳು ಕಾವಲು ನಿಂತಿವೆ. ಆಟೋಮೆಟಿಕ್ ನಂಬರ್ ಪ್ಲೇಟ್ ರಿಕಗ್ನೈಷನ್ ಕ್ಯಾಮರಾ, ಸ್ಟ್ಯಾಸ್ಟಿಕ್ಸ್ ಕ್ಯಾಮರಾ ಕಂಟಿನ್ಯೂಸ್ ರಿಕಾರ್ಡಿಂಗ್, ಪ್ಯಾನ್ ಟಿಲ್ಟ್ ಝೂಮ್ ಹೀಗೆ ವಿವಿಧ ನಮೂನೆಗಳ ಹೈಟೆಕ್ ಸಿಸಿ ಕ್ಯಾಮರಾಗಳು ಅವಳಿ ನಗರ 37 ಕಡೆ ಅಳವಡಿಕೆ ಮಾಡಲಾಗುತ್ತಿದೆ. ಗದಗ-ಬೆಟಗೇರಿ ಅವಳಿ ನಗರದ ನಾಲ್ಕು ದಿಕ್ಕಿನಲ್ಲೂ ಸಿಟಿ ಎಂಟ್ರನ್ಸ್​​ಗೂ ಸಿಸಿ ಕ್ಯಾಮರಾ ಅಳವಡಿಲಾಗುತ್ತಿದೆ. ಹೀಗಾಗಿ ಗದಗ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಕ್ಕೆ ಅವಳಿ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರೈಂ ಜೊತೆಗೆ ಸುಗಮ ಸಂಚಾರ ವ್ಯವಸ್ಥೆ ಹಾಗೂ ಯಾವುದೇ ಕ್ರೈಂ ನಡೆದರೂ ಸಾಕ್ಷಿ ಕಲೆ ಹಾಕಲು ಅನಕೂಲ ಆಗಲಿದೆ. ಎಲ್ಲವೂ ಗದಗ ಎಸ್​ಪಿ ಕಂಚೇರಿಯಿಂದ ನಿಯಂತ್ರಣ ಮಾಡಲಾಗುತ್ತದೆ. ಸರ್ಕಾರ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಲು ಒಂದೂವರೆ ಕೋಟಿ ಹಣ ನೀಡಿದೆ. ಅಷ್ಟೇ ಅಲ್ಲ ನಗರಸಭೆ ಅಳವಡಿಸಿ ಸಿಸಿ ಕ್ಯಾಮರಾಗಳು ಕೆಟ್ಟು ಹೋಗಿದ್ದವು. ಅವುಗಳನ್ನು ರಿಪೇರಿ ಮಾಡಲಾಗಿದೆ. ಇಡೀ ಅವಳಿ ನಗರ ಈಗ ಸಿಸಿ ಕಣ್ಗಾವಲಿನಲ್ಲಿದೆ. ಪುಡಿ ರೌಡಿಗಳು, ರೌಡಿಗಳು ಬಾಲ ಬಿಚ್ಚಿದ್ರೆ ನಿಮ್ಮ ಕರಾಮತ್ತು ಸಿಸಿ ಕಣ್ಣಲ್ಲಿ ಸೆರೆಯಾಗಲಿದೆ ಹುಷಾರ್…

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Tue, 14 February 23