ಮಳೆ ನಿಂತರೂ ಜನರ ಕಣ್ಣೀರು ನಿಂತಿಲ್ಲ; ಮನೆ ಕಳೆದುಕೊಂಡು ಗೋಳಾಟ, ಅನ್ನ ನೀರಿಗೂ ಪರದಾಟ

| Updated By: ಆಯೇಷಾ ಬಾನು

Updated on: May 22, 2022 | 8:05 PM

ಗದಗ ಜಿಲ್ಲೆಯ ಜನ್ರ ಜೀವನವೇ ಬುಡಮೇಲು ಆಗಿದೆ. ಅದ್ರಲ್ಲೂ ಗ್ರಾಮೀಣ ಭಾಗದ ಮಣ್ಣಿನ ಮನೆಯಲ್ಲಿ ವಾಸವಾಗಿರೋ ಬಡ ಜನ್ರ ಬದುಕು ದುಸ್ಥರವಾಗಿದೆ. ಹುಟ್ಟಿ, ಬೆಳೆದು ಬಾಳಿ ಬದುಕಿದ ಮನೆಗಳು ಕಣ್ಮುಂದೆಯೇ ಕ್ಷಣ ಕ್ಷಣಕ್ಕೂ ಕುಸಿದು ಬಿಳುತ್ತಿವೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಬಡ ಕುಟುಂಬಗಳ ಬದುಕು ಬೀದಿಗೆ ಬಂದಿವೆ.

ಮಳೆ ನಿಂತರೂ ಜನರ ಕಣ್ಣೀರು ನಿಂತಿಲ್ಲ; ಮನೆ ಕಳೆದುಕೊಂಡು ಗೋಳಾಟ, ಅನ್ನ ನೀರಿಗೂ ಪರದಾಟ
ಮಳೆ ನಿಂತರೂ ಜನರ ಕಣ್ಣೀರು ನಿಂತಿಲ್ಲ; ಮನೆ ಕಳೆದುಕೊಂಡು ಗೋಳಾಟ, ಅನ್ನ ನೀರಿಗೂ ಪರದಾಟ
Follow us on

ಗದಗ: ಅವು ಬಾಳಿ ಬದುಕಿದ ಮನೆಗಳು. ಅಲ್ಲೇ ಹುಟ್ಟಿ, ಬೆಳೆದ ಮನೆಗಳ ಸ್ಥಿತಿ ನೋಡಿ ಬಡ ಕುಟುಂಬಗಳು ಕಣ್ಣೀರು ಹಾಕ್ತಾಯಿವೆ. ಕಣ್ಮುಂದೆಯೇ ಕ್ಷಣ ಕ್ಷಣಕ್ಕೂ ಮಣ್ಣಿನ ಮನೆಗಳು ಕುಸಿಯುತ್ತಿವೆ. ಬಾಳಿ ಬದುಕಿದ ಮನೆಯೊಳಗೆ ಹೋಗಲು ಆ ಮನೆಯ ಸದಸ್ಯರೇ ಭಯ, ಆತಂಕ ಪಡುತ್ತಿದ್ದಾರೆ. ಪತಿ ಆಸ್ಪತ್ರೆಯಲ್ಲಿ ಮಲಗಿದ್ರೆ. ಇತ್ತು ಪತ್ನಿ ಮನೆ ಕಳೆದುಕೊಂಡು ಕಣ್ಣೀರು ಹಾಕ್ತಾಯಿದ್ದಾಳೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಿರಂತವಾಗಿ ಸುರಿಯುತ್ತಿರೋ ರಣಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ ನಿಮ್ಮ ಕೈ ಮುಗಿತೀನಿ ನಮಗೊಂದು ಸೂರು ಕೊಡಿಸಿ ಅಂತ ಅಜ್ಜಿಯ ಗೋಳಾಡಿದ್ದಾರೆ. ಮನೆಯಲ್ಲಿ ಮಲಗಲು ಜಾಗವಿಲ್ಲದೇ ಸೊಸೆ ಮೊಮ್ಮಕ್ಕಳ ಕರೆದುಕೊಂಡು ತವರು ಮನೆ ಸೇರಿದ್ದಾಳೆ ಅಂತ ಕಣ್ಣೀರು ಹಾಕಿದ್ದಾರೆ. ಇನ್ನು ಪಕ್ಕದ ಮನೆಯ ಮಹಿಳೆ ಕಥೆ ಇದಕ್ಕೂ ಭೀಕರವಾಗಿದೆ. ಮನೆ ಯಜಮಾನ ಆಸ್ಪತ್ರೆ ಸೇರಿದ್ದಾನೆ. ಇತ್ತ ನೋಡಿದ್ರೆ ಇಡೀ ಮನೆ ಕುಸಿದು ಬಿದ್ದಿದೆ. ಹೀಗಾಗಿ ದಿಕ್ಕುತೋಚದ ಮಹಿಳೆ ಕಣ್ಣೀರು ಹಾಕ್ತಾಯಿದ್ದಾಳೆ. ಇದನ್ನೂ ಓದಿ: ಧನುಷ್ ತಮ್ಮ ಮಗನೆಂದು ಹೇಳಿಕೊಂಡಿದ್ದ ದಂಪತಿಗೆ ಸಂಕಷ್ಟ; 10 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ ನಟ

ಗದಗ ಜಿಲ್ಲೆಯ ಜನ್ರ ಜೀವನವೇ ಬುಡಮೇಲು ಆಗಿದೆ. ಅದ್ರಲ್ಲೂ ಗ್ರಾಮೀಣ ಭಾಗದ ಮಣ್ಣಿನ ಮನೆಯಲ್ಲಿ ವಾಸವಾಗಿರೋ ಬಡ ಜನ್ರ ಬದುಕು ದುಸ್ಥರವಾಗಿದೆ. ಹುಟ್ಟಿ, ಬೆಳೆದು ಬಾಳಿ ಬದುಕಿದ ಮನೆಗಳು ಕಣ್ಮುಂದೆಯೇ ಕ್ಷಣ ಕ್ಷಣಕ್ಕೂ ಕುಸಿದು ಬಿಳುತ್ತಿವೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಬಡ ಕುಟುಂಬಗಳ ಬದುಕು ಬೀದಿಗೆ ಬಂದಿವೆ. ಬಾಳಿ ಬದುಕಿದ ಮನೆಯೊಳಗೆ ಹೋಗಲು ಈಗ ಕುಟುಂಬ ಸದಸ್ಯರು ಭಯ, ಆತಂಕ ಪಡುವಂತಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬಡ ಕುಟುಂಬಗಳ ಕರುಣಾಜನಕ ಸ್ಥಿತಿ ಗ್ರಾಮಸ್ಥರ ಮರಗುತ್ತಿದ್ದಾರೆ. ಕಸ್ತೂರವ್ವ ಎಂಬ ಮಹಿಳೆ ಪತಿ ತೀವ್ರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿದ್ದಾರೆ. ಈಗ ನಿರಂತರ ಮಳೆಗೆ ಇಡೀ ಮನೆ ಕುಸಿದು ಬಿದ್ದಿದೆ. ಮನೆ ಯಜಮಾನನೂ ಇಲ್ಲ. ಮನೆಯೂ ಇಲ್ಲದೇ ನಮಗೆ ಯಾರೂ ದಿಕ್ಕು ಅಂತ ಕಣ್ಣೀರು ಹಾಕುತ್ತಿದ್ದಾಳೆ. ತುತ್ತು ಅನ್ನಕ್ಕೂ ಒಂದೇ ಮನೆಯ ಮೂರು ಕುಟುಂಬ ಪರದಾಡುತ್ತಿದ್ದಾರೆ. ಅಕ್ಕಪಕ್ಕದ ಮನೆಯಲ್ಲಿ ಅಡುಗೆ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಆದ್ರೆ, ಜನ್ರು ಅನ್ನ, ನೀರಿಗಾಗಿ ಪರದಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಅಂತ ಸಂತ್ರಸ್ಥೆ ಮಹಿಳೆ ಕಸ್ತೂರವ್ವ ಗೋಳಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಈ ಬಡ ಮಹಿಳೆ ಕಥೆ ಹೀಗಾದ್ರೆ. ಪಕ್ಕದ ಮನೆಯ ಅಜ್ಜಿಯ ಕಥೆ ದೇವರಿಗೆ ಪ್ರೀತಿ ಎಂಬಂತಾಗಿದೆ. ಮಳೆಗೆ ಇಡೀ ಮನೆ ಕುಸಿದಿದೆ. ಮನೆಯಲ್ಲಿ ಮಲಗಲು ಜಾಗವಿಲ್ಲ ಅಂತ ಸೊಸೆ ಮೊಮ್ಮಕ್ಕಳನ್ನು ಕೆರದುಕೊಂಡು ತವರು ಮನೆ ಸೇರಿದ್ದಾಳೆ ಅಂತ ಡಂಬಳ ಗ್ರಾಮದ ಅಜ್ಜಿ ರಾಜವ್ವ ಗೋಳಾಡುತ್ತಿದ್ದಾಳೆ. ನೆರವಿಗೆ ಧಾವಿಸಬೇಕಾದ ಅಧಿಕಾರಿಗಳು ಡಂಬಳ ಗ್ರಾಮದಲ್ಲಿ ಅಜ್ಜಿ ರಾಜವ್ವ ಗೋಳಾಟ ಕೇಳೋರೋ ದಿಕ್ಕಿಲ್ಲದಂತಾಗಿದೆ. ಮನೆ ಕುಸಿತ, ಇಡೀ‌ಮನೆ ಸೋರಿಕೆಯಿಂದ ಅಜ್ಜಿಯ ಬದುಕು ಬೀದಿಗೆ ಬಂದಿದೆ. ನಮಗೆ ಸರ್ಕಾರ ಸಹಾಯ ಮಾಡಬೇಕು ಅಂತ ಅಜ್ಜಿ ರಾಜವ್ವ ಕೈಮುಗಿದು ಬೇಡಿಕೊಂಡಿದ್ದಾಳೆ. ಮೂರು ದಿನಗಳ ಮಳೆಯ ಆರ್ಭಟಕ್ಕೆ ಗದಗ ಜಿಲ್ಲೆಯಲ್ಲಿ ಅಂದಾಜು 507 ಮನೆಗಳು ಕುಸಿದಿವೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ. ಶಿರಹಟ್ಟಿ ತಾಲೂಕಿನಲ್ಲಿ 67, ಮುಂಡರಗಿ ತಾಲೂಕಿನಲ್ಲಿ 98, ರೋಣ ತಾಲೂಕಿನಲ್ಲಿ 48, ನರಂಗುಂದ ತಾಲೂಕಿನಲ್ಲಿ 54, ಗದಗ ತಾಲೂಕಿನಲ್ಲಿ 169, ಲಕ್ಷ್ಮೇಶ್ವರ ತಾಲೂಕಿನಲ್ಲಿ 69 ಮನೆಗಳು ಈಗಾಗಲೇ ಕುಸಿದಿವೆ. ಒಂದೊಂದು ಕುಟುಂಬದ ಒಂದೊಂದು ಕಥೆಯಾಗಿ ಗೋಳಾಡುತ್ತಿದ್ದಾರೆ. ಇದನ್ನೂ ಓದಿ: ಆಮ್ ಆದ್ಮಿ ಪಕ್ಷ ಸೇರಿದ್ರಾ ಕಪಿಲ್ ದೇವ್? ಸೋಶಿಯಲ್ ಮೀಡಿಯಾದಲ್ಲಿ ವಿಶ್ವಕಪ್ ಹೀರೋ ಕೊಟ್ಟ ಉತ್ತರವಿದು

ಮಳೆ ನಿಂತ್ರೂ ಅವಾಂತರಗಳು ಇನ್ನೂ ನಿಂತಿಲ್ಲ. ಹಳ್ಳಿಗಳಲ್ಲಿ ಮಣ್ಣಿನ ಮನೆಗಳು ತೊಯ್ದು ತೊಪ್ಪವಾಗಿದ್ದು ಮನೆಗಳು ಕುಸಿತ ಮುಂದುವರೆದಿದೆ. ಬಡ ಕುಟುಂಬಗಳು ಕುಸಿದ ಮನೆಯಲ್ಲೇ ಬದುಕು ಮುಂದುವರೆಸಿವೆ. ಭಯದಲ್ಲೇ ತುತ್ತಿನ‌ ಚೀಲ ತುಂಬಿಸಿಕೊಳ್ಳಲು ಒಲೆ ಹೊತ್ತಿಸಿ ಅಡುಗೆ ನಡೆಸಿದ್ದಾರೆ. ಗದಗ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಬಡ ಜನ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ್ರ ಗೋಳು ಕೇಳಬೇಕಾದ ಉಸ್ತುವಾರಿ ಸಚಿವ ಬಿಸಿ ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ಕಳಕಪ್ಪ ಬಂಡಿ ಮಾತ್ರ ಗ್ರಾಮಗಳತ್ತ ಸುಳಿಯದಿರೋದು ಮಾತ್ರ ವಿಪರ್ಯಾಸವೇ ಸರಿ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 8:05 pm, Sun, 22 May 22