ಧನುಷ್ ತಮ್ಮ ಮಗನೆಂದು ಹೇಳಿಕೊಂಡಿದ್ದ ದಂಪತಿಗೆ ಸಂಕಷ್ಟ; 10 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ ನಟ

ಧನುಷ್ ತಮ್ಮ ಮಗನೆಂದು ಹೇಳಿಕೊಂಡಿದ್ದ ದಂಪತಿಗೆ ಸಂಕಷ್ಟ; 10 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ ನಟ
ಧನುಷ್

Dhanush: ಧನುಷ್ ಮತ್ತು ಅವರ ತಂದೆ ಕಸ್ತೂರಿ ರಾಜಾ ಮಧುರೈ ಮೂಲದ ದಂಪತಿಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇನ್ನು ಮುಂದೆ ನಕಲಿ ಆರೋಪಗಳನ್ನು ಮಾಡದಂತೆ ಅವರಿಗೆ ತಿಳಿಸಿದ್ದು, ಒಂದು ವೇಳೆ ಅದನ್ನು ಮೀರಿದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ.

TV9kannada Web Team

| Edited By: shivaprasad.hs

May 22, 2022 | 7:26 PM

ಕಾಲಿವುಡ್​ನ ಖ್ಯಾತ ನಟ ಧನುಷ್ (Dhanush)​ ತಮ್ಮ ಮಗ ಎಂದು ಹೇಳಿಕೊಂಡ ದಂಪತಿಯ ವಿರುದ್ಧ ನಟ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಈ ಹಿಂದೆ ಮಧುರೈ ಮೂಲದ ಕತಿರೇಸನ್ ಮತ್ತು ಮೀನಾಕ್ಷಿ ಎಂಬ ದಂಪತಿ ಧನುಷ್ ತಮ್ಮ ಮೂರನೇ ಮಗ ಎಂದು ಆರೋಪಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿನಿಮಾದಲ್ಲಿ ನಟಿಸಲು ಆತ ಓಡಿಹೋಗಿದ್ದಾನೆ ಎಂದು ಅವರು ವಾದಿಸಿದ್ದರು. ಅಲ್ಲದೇ ಪೋಷಕರಾಗಿರುವ ತಮಗೆ ಮಾಸಿಕ 65,000 ರೂ ಪರಿಹಾರ ನೀಡಬೇಕು ಎಂದೂ ಅವರು ಕೋರಿಕೊಂಡಿದ್ದರು. ಇದೀಗ ಐಎಎನ್‌ಎಸ್ ವರದಿಯ ಪ್ರಕಾರ ಧನುಷ್ ಮತ್ತು ಅವರ ತಂದೆ ಕಸ್ತೂರಿ ರಾಜಾ ಮಧುರೈ ಮೂಲದ ದಂಪತಿಗೆ ತಮ್ಮ ವಕೀಲರಾದ ಹಾಜಾ ಮೊಹಿದೀನ್ ಗಿಸ್ತಿ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇನ್ನು ಮುಂದೆ ಇಂತಹ ನಕಲಿ ಆರೋಪಗಳನ್ನು ಮಾಡದಂತೆ ಅವರಿಗೆ ತಿಳಿಸಿದ್ದಾರೆ. ಒಂದು ವೇಳೆ ಅದನ್ನು ಮೀರಿದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ.

ಮಧುರೈ ಮೂಲದ ದಂಪತಿಗೆ ನೀಡಿರುವ ನೋಟಿಸ್​ನಲ್ಲಿ ‘ಭವಿಷ್ಯದಲ್ಲಿ ಅಂತಹ ಹಕ್ಕು ಸಲ್ಲಿಕೆಯ ಆರೋಪ ಮಾಡಿದಲ್ಲಿ ಕತಿರೇಸನ್ ಮತ್ತು ಮೀನಾಕ್ಷಿ ಇಬ್ಬರನ್ನೂ ಮಾನನಷ್ಟ ಕಾಯ್ದೆಯಡಿ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು’ ಎಂದು ತಿಳಿಸಲಾಗಿದೆ. ಈಗಾಗಲೇ ನೀಡಿರುವ ಹೇಳಿಕೆಗಳು ಸುಳ್ಳೆಂದು ಪತ್ರಿಕಾ ಹೇಳಿಕೆಯನ್ನು ನೀಡಿ ಕ್ಷಮೆಯಾಚಿಸುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದ್ದು, ತಪ್ಪಿದಲ್ಲಿ 10 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Aishwaryaa Rajinikanth: ಧನುಷ್ ‘ಫ್ರೆಂಡ್’ ಎಂದು ಕರೆದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿದ ಐಶ್ವರ್ಯಾ!

ಧನುಷ್ ಅಥವಾ ಅಧಿಕೃತ ದಾಖಲೆಗಳಲ್ಲಿ ಇರುವಂತೆ​ ವೆಂಕಟೇಶ್ ಪ್ರಭು ಕಸ್ತೂರಿ ರಾಜಾ ಚಲನಚಿತ್ರ ನಿರ್ಮಾಪಕ ಕಸ್ತೂರಿ ರಾಜಾ ಮತ್ತು ವಿಜಯಲಕ್ಷ್ಮಿಗೆ ಜನಿಸಿದವರು ಎಂದು ವಕೀಲರು ವಾದಿಸಿದ್ದಾರೆ. ಮಧುರೈ ಮೂಲದ ದಂಪತಿಗಳಾದ ಕತಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಧನುಷ್ ತಮ್ಮ ಮೂರನೇ ಮಗ ಎಂದು ಹೇಳಿಕೊಂಡಿದ್ದರು. ನ್ಯಾಯಾಲಯವು ಡಿಎನ್​ಎ ಟೆಸ್ಟ್​ಗೆ ಆದೇಶಿಸಿತ್ತು. ವಕೀಲರು ತಿಳಿಸಿದಂತೆ ಅದರಲ್ಲಿ ಬಂದಿರುವ ವರದಿಯಲ್ಲಿ ಮಧುರೈ ಮೂಲದ ದಂಪತಿಯ ಆರೋಪ ಸುಳ್ಳು ಎಂದು ಹೇಳಲಾಗಿದೆ.

ಇದನ್ನೂ ಓದಿ: Dhanush: ಧನುಷ್ ತಮ್ಮ ಮಗ ಎಂದು ಹೇಳಿಕೊಂಡ ದಂಪತಿ; ಮದ್ರಾಸ್ ಹೈಕೋರ್ಟ್​​ನಿಂದ ನಟನಿಗೆ ಸಮನ್ಸ್- ಏನಿದು ಪ್ರಕರಣ?

ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಧನುಷ್:

ಚಿತ್ರಗಳ ವಿಷಯಕ್ಕೆ ಬಂದರೆ ನಟ ಧನುಷ್ ಹಾಲಿವುಡ್ ಪದಾರ್ಪಣೆಗೆ ಸಿದ್ಧರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಒಟಿಟಿ ಸಂಸ್ಥೆ ನೆಟ್​ಫ್ಲಿಕ್ಸ್​ನ ಮೂಲ ಚಿತ್ರವಾದ​​ ‘ದಿ ಗ್ರೇ ಮ್ಯಾನ್’ನಲ್ಲಿ (The Gray Man) ಧನುಷ್ ಬಣ್ಣಹಚ್ಚುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮೊದಲ ಲುಕ್ ರಿವೀಲ್ ಮಾಡಲಾಗಿತ್ತು. ಆಕ್ಷನ್ ಅವತಾರದಲ್ಲಿ ಧನುಷ್ ಕಾಣಿಸಿಕೊಂಡಿದ್ದರು. ‘ದಿ ಗ್ರೇ ಮ್ಯಾನ್’ ಚಿತ್ರವನ್ನು ಅಂಥೋನಿ ಹಾಗೂ ಜೋ ರಸ್ಸೋ ನಿರ್ದೇಶಿಸುತ್ತಿದ್ದಾರೆ. ಮಾರ್ಕ್ ಗ್ರೇನಿ ಅವರ ‘ದಿ ಗ್ರೇ ಮ್ಯಾನ್’ ಎಂಬ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಜುಲೈ 22ರಿಂದ ‘ದಿ ಗ್ರೇ ಮ್ಯಾನ್’ ನೆಟ್​ಫ್ಲಿಕ್ಸ್​ನಲ್ಲಿ ಬಿತ್ತರವಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada