ಮಂಡ್ಯದ ಬಡ ರೈತ ಕುಟುಂಬದ ರಾಘವೇಶ್ ಗದಗ ಪಶು ವೈದ್ಯ ಕಾಲೇಜಿನಲ್ಲಿ 16 ಚಿನ್ನದ ಪದಕದೊಂದಿಗೆ ಪದವಿ ಸಾಧನೆ!

| Updated By: ಸಾಧು ಶ್ರೀನಾಥ್​

Updated on: Oct 17, 2023 | 11:06 AM

16 ಚಿನ್ನದ ಪದಕ ಪಡೆದಿರುವ ರಾಘವೇಶ್, ಮಂಡ್ಯದ ಮದ್ದೂರು ತಾಲೂಕಿನ ಅಪ್ಪಟ ರೈತ ಕುಟುಂಬದ ಯುವಕ. ರಾಘವೇಶ್ ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಆ್ಯಂಡ್ ಅನಿಮಲ್ ಹಸ್ಬಂಡರಿ ಕೋರ್ಸ್ ನಲ್ಲಿ ಈ ಸಾಧನೆ ಮಾಡಿದ್ದಾನೆ. ರಾಘವೇಶ್ ತಂದೆ ತಾಯಿ ಮಗನ ಸಾಧನೆಯಿಂದ ಖುಷಿ ಪಟ್ಟಿದ್ದಾರೆ. ಕಡು ಬಡತನದಲ್ಲಿ ಮಗನನ್ನ ಬೆಳೆಸಿದ್ದೇವೆ. ಅವನು ಬಂಗಾರ ಪದಕದೊಂದಿಗೆ ಪದವಿ ಪಡೆದುಕೊಂಡಿದ್ದು ಖುಷಿಯಾಗಿದೆ. ಮುಂದೆ ದೇಶ ಸೇವೆ ಮಾಡಲಿ ಅನ್ನೋದು ನಮ್ಮ ಆಸೆ ಎಂದಿದ್ದಾರೆ.

ಮಂಡ್ಯದ ಬಡ ರೈತ ಕುಟುಂಬದ ರಾಘವೇಶ್ ಗದಗ ಪಶು ವೈದ್ಯ ಕಾಲೇಜಿನಲ್ಲಿ 16 ಚಿನ್ನದ ಪದಕದೊಂದಿಗೆ ಪದವಿ ಸಾಧನೆ!
ರಾಘವೇಶ್ ಗದಗ ಪಶು ವೈದ್ಯ ಕಾಲೇಜಿನಲ್ಲಿ 16 ಚಿನ್ನದ ಪದಕದೊಂದಿಗೆ ಪದವಿ ಸಾಧನೆ!
Follow us on

ನಿರಂತರ ಶ್ರಮಪಟ್ಟು, ಶ್ರದ್ಧೆಯಿಟ್ಟು ಮಾಡಿದ್ರೆ ಎಂತಹ ಕನಸೂ ನನಸಾಗುತ್ತದೆ. ಕಂಡ ಕನಸು ಕಾಣುವುದು ಅದನ್ನ ಸಾಕಾರಗೊಳಿಸುವುದು ಅವರವರ ಕೈಯಲ್ಲಿಯೇ ಇದೆ. ಇಂತಹ ಅದ್ಭುತ ಕನಸನ್ನ ಸಾಕಾರಗೊಳಿಸಿರುವ ಮೂವರು ವಿದ್ಯಾರ್ಥಿಗಳು ನಿಜಕ್ಕೂ ಚಿನ್ನದ ವಿದ್ಯಾರ್ಥಿಗಳಾಗಿದ್ದಾರೆ (gold medals). ಪಶು ವೈದ್ಯಕೀಯ ಪದವಿಯಲ್ಲಿ (Graduation) ಅತಿ ಹೆಚ್ಚು ಚಿನ್ನದ ಪದಕಗಳನ್ನ ಬಾಚಿಕೊಂಡ ವಿದ್ಯಾರ್ಥಿಗಳ ಯಶೋಗಾಥೆ ಎಂತಹವರನ್ನೂ ಪ್ರೇರೇಪಿಸುತ್ತದೆ. ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವ ವಿದ್ಯಾಲಯದ 13ನೇ ಘಟಿಕೋತ್ಸವ… ಘಟಿಕೋತ್ಸವದಲ್ಲಿ ಭಾಗಿಯಾದ ರಾಜಪಾಲ ಥಾವರ್ ಚಂದ್ ಗೆಹ್ಲೋಟ್… ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ ಮುಖ್ಯ ಅತಿಥಿಯಾಗಿ ಭಾಗಿ…837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ 445 ಸ್ನಾತಕ ಪದವಿ 333 ಸ್ನಾತಕೋತ್ತರ ಪದವೀಧರರು…59 ಡಾಕ್ಟರೇಟ್ ಪದವೀಧರರಿಗೆ ಪದವಿ ಪ್ರದಾನ ಮಾಡಿದ ರಾಜ್ಯಪಾಲರು… ಗದಗ ಪಶು ವೈದ್ಯ ಕಾಲೇಜಿನಲ್ಲಿ ( Gadag veterinary university) ರೈತನ ಮಗ ರಾಘವೇಶ್ ( poor farmer family of Mandya) 16 ಚಿನ್ನದ ಪದಕ…ಬೀದರ್ ಪಶು ವಿವಿಯ ಸಚಿನ್ 5 ಬೆಂಗಳೂರು ಪಶು ಕಾಲೇಜ್ ನ ವಸುಧಾ 4 ಚಿನ್ನದ ಪದಕ ಪ್ರದಾನ…ಹೌದು ಬೀದರ್ ತಾಲೂಕಿನ ಕಮಠಾಣ ಬಳಿಯ ನಂದಿನಗರದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಜಾನಿಗಳ ವಿಶ್ವವಿದ್ಯಾಲಯದ 13 ಘಟಿಕೋತ್ಸ ನಿನ್ನೆ ಸೋಮವಾರ ನಡೆಯಿತು.

ವಿಶ್ವವಿದ್ಯಾಲಯದ ಕುಲಾಧಿಪತಿಯಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು. ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹಾಗೂ ಆರ್. ಸಿ. ಅಗ್ರವಾಲ್, ಉಪ ಉಪನಿರ್ದೇಶಕರು, ಭಾರತೀಯ ಕೃಷಿ ಅನುಧಾನ ಪರಿಷತ್- ನವದೆಹಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಘಟಿಕೋತ್ಸವದಲ್ಲಿ 837 ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅದರಲ್ಲಿ 445 ಸ್ನಾತಕ ಪದವೀಧರರು, 333 ಸ್ನಾತಕೋತ್ತರ ಪದವೀಧರರು, 59 ಡಾಕ್ಟರೆಟ್ ಪದವೀಧರರು ಇದ್ದರು.

ಇನ್ನು 70 ವಿದ್ಯಾರ್ಥಿಗಳಿಗೆ 127 ಚಿನ್ನದ ಪದಕಗಳನ್ನ ನೀಡಿ ಗೌರವಿಸಲಾಯಿತು.. ಗದಗನ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿ ನೀತೀಶ್ ರಾಘವೇಸ್ ಎ.ಎನ್. ಅತೀ ಹೆಚ್ಚು ಅಂದರೆ 16 ಚಿನ್ನದ ಪದಕ ಪಡೆದಿದ್ದು ಚಿನ್ನದ ಹುಡುಗ ಎಂಬ ಕಿರ್ತೀಗೆ ಭಾಜನರಾದರು. ಇನ್ನು ಗದಗದ ಪಶು ಕಾಲೇಜಿನ ರೈತನ ಮಗ ರಾಘವೇಶ 16 ಚಿನ್ನದ ಪದಕವನ್ನ ಪಡೆದುಕೊಂಡರು-ನನಗೆ ಚಿನ್ನದ ಪದಕ ಬರುತ್ತದೆಂದು ಕೊಂಡಿದ್ದೆ; ಆದರೆ 16 ಚಿನ್ನದ ಪದಕ ಬಂದಿದೆ, ಚಿಕ್ಕವನಿಂದಲೇ ಕಷ್ಟಪಟ್ಟು ಓದಿದ್ದರ ಫಲವಾಗಿಯೇ ಇಂದು ಎಲ್ಲಾ ವಿಷಯಗಳಲ್ಲೂ ಅತ್ಯಧಿಕ ಅಂಕಗಳನ್ನ ಗಳಿಸಿ ಬೀದರ್ ವಿಶ್ವವಿದ್ಯಾಲಯದ ಚಿನ್ನದ ವಿದ್ಯಾರ್ಥಿಗಳು ಎಂದೇ ಬಿರುದು ಪಡೆಯುವಂತಾಗಿದೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.

ಇನ್ನು ರಾಘವೇಶ್ 16 ಚಿನ್ನದ ಪದಕ ಪಡೆದುಕೊಂಡಿದ್ದರೆ ಕ್ರಮವಾಗಿ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವ ವಿದ್ಯಾಲಯದ ಸಚಿನ್ 5 ಚಿನ್ನದ ಪದ ಪಡೆದಿದ್ದು, ಬೆಂಗಳೂರು ಪಶು ಕಾಲೇಜ್ ನ ವಸುಧಾ 4 ಚಿನ್ನದ ಪದಕ ಪಡೆದುಕೊಂಡು ಮಿಂಚಿದರು. ಈ ಚಿನ್ನದ ಪದಕ ಪಡೆದ ಈ ಮೂವರೂ ವಿದ್ಯಾರ್ಥಿಗಳು ರೈತರ ಸೇವೆ ಮಾಡಬೇಕು ಎಂದುಕೊಂಡಿದ್ದಾರೆ. ತಾವು ಕಷ್ಟಪಟ್ಟು ಪಟ್ಟು ಓದಿದ ಜ್ಜಾನವನ್ನ ಬಳಸಿಕೊಂಡು ಹೊಸ ಹೊಸ ಅವಿಷ್ಕಾರಗಳನ್ನ ಮಾಡಿ ಇದರಿಂದ ರೈತರಿಗೆ ಅನೂಕುಲ ಮಾಡಿಕೊಡಬೇಕೆಂದು ಒಬ್ಬೊಬ್ಬರು ಒಂದೊಂದು ಗುರಿಯನ್ನ ಇಟ್ಟುಕೊಂಡಿದ್ದಾರೆ.

ಇನ್ನು 16 ಚಿನ್ನದ ಪದಕ ಪಡೆದುಕೊಂಡಿರುವ ರಾಘವೇಶ್ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅವಸರದಹಳ್ಳಿಯ ಅಪ್ಪಟ ರೈತ ಕುಟುಂಬದ ಯುವಕ. ರಾಘವೇಶ್ ಅವರು ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಆ್ಯಂಡ್ ಅನಿಮಲ್ ಹಸ್ಬಂಡರಿ ಕೋರ್ಸ್ ನಲ್ಲಿ 16 ಬಂಗಾರದ ಪದಕಗಳನ್ನ ಪಡೆದುಕೊಂಡು ಸಾಧನೆ ಮಾಡಿದ್ದಾನೆ. ಇಷ್ಟೇ ಅಲ್ಲದೆ ಕೃಷಿ ವಿಜ್ಞಾನಿಯಾಗಿ ಕೃಷಿಗೆ ಹೊಸತನ ಕೊಟ್ಟು ರೈತರ ಆದಾಯ ದುಪ್ಪಟು ಮಾಡಿ ರೈತರ ಬದುಕು ಹಸನಗೊಳಿಸಬೇಕು ಎಂಬ ತಮ್ಮ ತಂದೆಯ ಆಸೆಯನ್ನ ಈ ಮೂಲಕ ಈಡೇರಿಸಬೇಕು ಅಂದುಕೊಂಡಿದ್ದಾರೆ.

ಇನ್ನು ರಾಘವೇಶ್ ಅವರ ತಂದೆ ತಾಯಿ ಮಗನ ಸಾಧನೆಯಿಂದ ಖುಷಿ ಪಟ್ಟಿದ್ದಾರೆ. ಕಡು ಬಡತನದಲ್ಲಿ ಮಗನನ್ನ ಬೆಳೆಸಿದ್ದೇವೆ. ಅವನು ಬಂಗಾರ ಪದಕದೊಂದಿಗೆ ಪದವಿ ಪಡೆದುಕೊಂಡಿದ್ದು ನಮಗೆ ಖುಷಿಯಾಗಿದೆ. ಮುಂದೆ ರಾಜ್ಯ ಹಾಗೂ ದೇಶ ಸೇವೆ ಮಾಡಲಿ ಅನ್ನೋದು ನಮ್ಮ ಆಸೆ ಎಂದು ಹೇಳಿದ್ದಾರೆ.

ಕಲಿಯುವ, ಸಾಧಿಸುವ ಛಲವಿದ್ದವನಿಗೆ ಯಾವುದೂ ಕಷ್ಟವಲ್ಲ. ಸಲೀಸು ಅನ್ನೋದಕ್ಕೆ ಈ ಚಿನ್ನದ ಹುಡುಗರ ಸಾಧನೆ ಮಾದರಿಯಾಗಿದೆ. ಸತತ ಪ್ರಯತ್ನವಿದ್ದರೆ ಗುರಿ ಮುಟ್ಟೋಕೆ ಯಾವುದೂ ಅಡ್ಡಿಯಾಗಲ್ಲ ಅನ್ನೋದಕ್ಕೆ ತಾಜಾ ನಿದರ್ಶನವಾಗಿದ್ದಾರೆ. ಈ ಚಿನ್ನದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡುವಂತಾಗಲಿ ಅನ್ನೋದೆ ಎಲ್ಲರ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ