ಗದಗ: ನಗರದ ಕಳಸಾಪುರ ರಸ್ತೆಯಲ್ಲಿನ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯದ ವಿದ್ಯಾರ್ಥಿನಿಯನ್ನು ಹೊಡೆಯುತ್ತಿದ್ದ ಯುವಕನನ್ನು ತರಾಟೆಗೆ ತೆಗೆದುಕೊಂಡ ಯುವಕನಿಂದ ವಿದ್ಯಾರ್ಥಿಯನ್ನ ಬಚಾವ್ ಮಾಡಿದ ಸ್ಥಳೀಯ ಮಹಿಳೆಯರು, ಯುವಕನಿಗೆ ಕಪಾಳಮೋಕ್ಷ ಮಾಡುವ ಮೂಲಕ ಕೈಯಲ್ಲಿ ಕೋಲು ಹಿಡಿದು ಕಿಡಿಗೇಡಿಗೆ ಪಾಠ ಕಲಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಸತಿ ನಿಲಯದ ವಿದ್ಯಾರ್ಥಿನಿಗೆ ಈ ಹಿಂದೆಯೇ ನಿಲಯದ ಸಿಬ್ಬಂದಿಗಳು ವಾರ್ನ್ ಮಾಡಿದ್ದರು. ಆದರೂ ಕೂಡಾ ವಿದ್ಯಾರ್ಥಿನಿ ಯುವಕನ ಜೊತೆಗೆ ಸಲುಗೆಯಿಂದ ಇರುತ್ತಿದ್ದಳು. ಇದೀಗ ವಿದ್ಯಾರ್ಥಿನಿಯನ್ನ ಬಚಾವ್ ಮಾಡಿ, ಕಿಡಿಗೇಡಿಗೆ ಪಾಠ ಕಲಿಸಿ, ವಿದ್ಯಾರ್ಥಿನಿ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ ಯುವಕನನ್ನ ಗದಗ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿದ್ಯಾಕಾಶಿಯಲ್ಲಿ ಪುಂಡರ ದಾಂಧಲೆ; ಕುಡಿದು ಲಾಡ್ಜ್ ಸಿಬ್ಬಂದಿ ಮೇಲೆ ಹಲ್ಲೆ
ಧಾರವಾಡ: ನಗರದ ಹೊಸ ಬಸ್ ನಿಲ್ದಾಣದ ಎದುರಿನ ‘ಧಾರವಾಡ ರೆಸಿಡೆನ್ಸಿ’ ಲಾಡ್ಜ್ ಮ್ಯಾನೇಜರ್ ಮಹೇಂದ್ರ ಎಂಬುವವನ ಮೇಲೆ ಕುಡಿದ ಮತ್ತಿನಲ್ಲಿ ರಾಹುಲ್, ವಿಜಯ್, ಮಣಿಕಂಠ, ಪ್ರಜ್ವಲ್ ಪವಾರ್ ಎಂಬುವವರು ನಿನ್ನೆ(ಜ.13) ರಾತ್ರಿ ಸಿಬ್ಬಂದಿ ಜೊತೆ ಜಗಳಕ್ಕಿಳಿದು ಹಲ್ಲೆ ಮಾಡಿದ್ದಾರೆ. ಪುಂಡರ ಗಲಾಟೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಉಪನಗರ ಠಾಣೆಗೆ ಮಹೇಂದ್ರ ದೂರು ನೀಡಿದ್ದಾರೆ.
ಇದನ್ನೂ ಓದಿ:Bengaluru: ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಧರ್ಮದರ್ಶಿ ಮುನಿಕೃಷ್ಣ ಅರೆಸ್ಟ್
ಕ್ರೈಸ್ತ ವಿದ್ಯಾರ್ಥಿನಿಗೆ ಚಾಕಲೇಟ್ ಆಫರ್ ನೀಡಿದ ಮುಸ್ಲಿಂ ವಿದ್ಯಾರ್ಥಿ; ಬಸ್ಸಿಂದ ಕೆಳಗಿಳಿಸಿ ಹಲ್ಲೆ
ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೆಲಿಂಜ ಎಂಬಲ್ಲಿ ವೀರಕಂಬ ನಿವಾಸಿ ಮಹಮ್ಮದ್ ಶಾಕೀರ್ ಎಂಬ ವಿದ್ಯಾರ್ಥಿ ಬಸ್ನಲ್ಲಿ ಹೋಗುವಾಗ ಕ್ರೈಸ್ತ ವಿದ್ಯಾರ್ಥಿನಿಗೆ ಚಾಕಲೇಟ್ ಆಫರ್ ನೀಡಿದ ಕಾರಣಕ್ಕಾಗಿ ಆತನನ್ನ ಬಸ್ನಿಂದ ಇಳಿಸಿ ಹಲ್ಲೆ ಮಾಡಲಾಗಿದೆ. ಗಾಯಾಳು ವಿದ್ಯಾರ್ಥಿಯನ್ನ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿ ಮಹಮ್ಮದ್ ಶಾಕೀರ್ ತನ್ನ ಮೇಲೆ ಹಲ್ಲೆ ಮಾಡಿದ ವೀರಕಂಬ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ್, ಪ್ರಜ್ವಲ್, ರೋಹಿತ್ ಸೇರಿ ಇತರ ಮೂವರ ವಿರುದ್ಧ ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ