ಹಾರ್ನ್ ಮಾಡಿದ್ದಕ್ಕೆ ಸಾರಿಗೆ ಬಸ್ (state transportation bus) ಅಡ್ಡಗಟ್ಟಿ ಪುಂಡರ ಗ್ಯಾಂಗ್ (miscreants) ವೊಂದು ಚಾಲಕನ (Bus Driver) ಮೇಲೆ ಹಲ್ಲೆ ಮಾಡಿದ ಘಟನೆ ಗದಗ ಹೊರವಲಯದ ಅಸುಂಡಿ ಬಳಿ ನಡೆದಿದೆ. ಗದಗ ನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಸಾರಿಗೆ ಬಸ್ ನಿಲ್ಲಿಸಿ ವಾಗ್ವಾದ (Attack) ನಡೆಸಿದ್ದಾರೆ.
ಅಸುಂಡಿ ಬಳಿ ಸ್ವಿಫ್ಟ್ ಕಾರ್ ನಲ್ಲಿ ನಾಲ್ವರು ಹೊರಟ್ಟಿದ್ರು. ಹಿಂಬದಿಯಿಂದ ಹೊರಟಿದ್ದ ಸಾರಿಗೆ ಬಸ್ ಚಾಲಕ ಹಾರ್ನ್ ಹಾಕಿದ್ದಾನೆ. ಕಾರ್ ಸೈಡ್ ಮೀರರ್ ಕ್ಲೋಸ್ ಮಾಡಿದ್ದನ್ನ ಗಮನಿಸಿ ಬಸ್ ಡ್ರೈವರ್ ಐದಾರು ಬಾರಿ ಹಾರ್ನ್ ಮಾಡಿದ್ದಾನೆ.
ಹಾರ್ನ್ ಮಾಡಿದ್ದಕ್ಕೆ ಕೋಪಗೊಂಡು ಬಸ್ ಅಡ್ಡಗಟ್ಟಿ ನಿಲ್ಲಿಸಿ ವಾಗ್ವಾದಕ್ಕಿಳಿದ್ದಾರೆ. ಯಾಕೆ ಹಾರ್ನ್ ಹಾಕಿದೆ ಅಂತಾ ತಗಾದೆ ತೆಗೆದು ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಗಲಾಟೆಯಲ್ಲಿ ಬಸ್ ಡ್ರೈವರ್ ಸಂತೋಷ್ ಅಸೂಟಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ