ಗದಗ: ಗದಗ ತಾಲೂಕಿನ ಸೊರಟೂರು ಗ್ರಾಮದಲ್ಲಿ ಬಡ ಕುಟುಂಬದ ಮೇಲೆ ದಬ್ಬಾಳಿಕೆ ನಡೆದಿರುವ ಆರೋಪ ಕೇಳಿಬಂದಿದೆ. ಮನೆಗೆ ನುಗ್ಗಿ ಹಲ್ಲೆ ನಡೆಸಿ, ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಡೆವೆಪ್ಪ ಕನ್ನೂರು ಕುಟುಂಬದ ವಿರುದ್ಧ ದೌರ್ಜನ್ಯ ಆರೋಪ ಕೇಳಿಬಂದಿದೆ. ಅಡಿವೆಪ್ಪ ಕನ್ನೂರು ಕುಟುಂಬ ಏಳು ಜನರು ಬಡ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ.
3 ತಿಂಗಳ ಹಿಂದೆ ಅಡೆವೆಪ್ಪ ಕನ್ನೂರು ಕುಟುಂಬದ ಸಂಬಂಧಿ ಬಡ ಕುಟುಂಬದ ಯುವತಿ ಜತೆ ಪರಾರಿಯಾಗಿದ್ದ. ಉಳಿದ ಹೆಣ್ಣುಮಕ್ಕಳನ್ನೂ ಓಡಿಸಿಕೊಂಡು ಹೋಗುವ ಧಮ್ಕಿ ಹಾಕಿದ್ದ ಎನ್ನಲಾಗಿದೆ.
ಹಲ್ಲೆಗೀಡಾದ ಕುಟುಂಬಸ್ಥರು ನಮಗೆ ಕನ್ನೂರು ಕುಟುಂಬದಿಂದ ಜೀವ ಭಯ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ಮೂವರು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಬೇಡಿಕೊಂಡಿದ್ದಾರೆ. ದುರುಳರು ಸೆಪ್ಟೆಂಬರ್ 8 ರಂದು ರಾತ್ರಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಮುಳಗುಂದ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ದಾವಣಗೆರೆ ಚಿತ್ರಗಾರ ಗಲ್ಲಿಯಲ್ಲಿ ಶತಮಾನಗಳಿಂದ ಗಣೇಶ ವಿಗ್ರಹ ಮಾರಾಟ; ನಟಿ ಗಿರಿಜಾ ಲೋಕೇಶ್ ಇಲ್ಲಿಂದಲೇ ಖರೀದಿಸುತ್ತಿದ್ದರು!
ಇದನ್ನೂ ಓದಿ: ಕಾರು-ಲಾರಿ ಮುಖಾಮುಖಿ ಡಿಕ್ಕಿ: ಅಕ್ಕನಿಗೆ ಬಾಗಿನ ಕೊಟ್ಟು ತವರಿಗೆ ಕರೆದೊಯ್ಯುತ್ತಿದ್ದ ಬಿಎಸ್ಎಫ್ ಯೋಧ, ಅಕ್ಕನ ಮಗು ಸಾವು
(gram panchayat ex member attack family members on soratur gadag)
Published On - 8:00 am, Fri, 10 September 21