
ಗದಗ, ನವೆಂಬರ್ 24: ರಾಜ್ಯದಲ್ಲಿ ಸಿಎಂ ಕುರ್ಚಿಯ ಗುದ್ದಾಟ ಬಲು ಜೋರಾಗಿದೆ. ಸಿಎಂ, ಡಿಸಿಎಂ ನಡುವೆ ನೀ ಕೊಡೆ ನಾ ಬಿಡೆ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಹೊತ್ತಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಗ್ಗೆ ಹುಲಿಗೆಮ್ಮ ದೇವಿ ಅಚ್ಚರಿಯ ಭವಿಷ್ಯ ನುಡಿದಿದ್ದಾಳೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅಣ್ಣ-ತಮ್ಮನಂತೆ ಇದ್ದಾರೆ. ಸಿದ್ದರಾಮಯ್ಯ ಖುಷಿ ಖುಷಿಯಿಂದ ಸಿಎಂ ಸ್ಥಾನವನ್ನು ಡಿ.ಕೆ. ಶಿವಕುಮಾರ್ಗೆ ಬಿಟ್ಟು ಕೊಡ್ತಾರೆಂದು ಹುಲಿಗೆಮ್ಮ ದೇವಿಯ ಜೋಗತಿ ಬೈಲಮ್ಮ ಹೇಳಿದ್ದಾರೆ.
ಹುಲಿಗೆಮ್ಮ ದೇವಿ ಆರಾಧಾನೆ ಮಾಡುವ ಗದಗ ನಗರ ರಾಚೋಟೇಶ್ವರ ನಗರದ ಬೈಲಮ್ಮ ಎಂಬ ಜೋಗತಿ ಈ ಬಗ್ಗೆ ಭವಿಷ್ಯ ನುಡಿದಿದ್ದು, ಸಿದ್ದರಾಮಯ್ಯ ಅವರ ಹತ್ತಿರ ಯಾವುದೇ ಕಪಟತನವಿಲ್ಲ. ಹೀಗಾಗಿ ಅಣ್ಣ ಹೇಗೆ ತಮ್ಮನಿಗಾಗಿ ಬಿಟ್ಟು ಕೊಡ್ತಾನೋ, ಹಾಗೆಯೇ ಸಿದ್ದರಾಮಯ್ಯ ಸಂತೋಷದಿಂದ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ಗೆ ಬಿಟ್ಟುಕೊಡ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇಬ್ಬರ ಕಚ್ಚಾಟದಲ್ಲಿ ಮೂವರನೇವರು ಮೂಗು ತೋರಿಸುತ್ತಿದ್ದಾರೆ. ಆದ್ರೆ ಅವರಿಗೆ ಯಾವುದೇ ಸಿಎಂ ಸ್ಥಾನ ಸಿಗೋದಿಲ್ಲ. ಇನ್ನು, ಎರಡೂವರೆ ತಿಂಗಳಲ್ಲಿ ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳತ್ತಾರೆಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಸಿಎಂ ಕುರ್ಚಿಗಾಗಿ ಕಿತ್ತಾಟ, ಅಂದಿನ ಶಾಸಕಾಂಗ ಸಭೆಯ ರಹಸ್ಯ ಬಿಚ್ಚಿಟ್ಟ ರಾಯರೆಡ್ಡಿ
ರಾಜ್ಯದ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಹೀಗಾಗಿ ಸಿಎಂ ಆಗಿ ಇನ್ನೆರಡೂವರೆ ವರ್ಷ ಸಿದ್ದರಾಮಯ್ಯ ಮುಂದುವರಿಯುತ್ತಾರೋ ಅಥವಾ ಡಿಕೆಶಿ ಅವರಿಗೆ ಬಿಟ್ಟುಕೊಡ್ತಾರೋ ಎಂಬ ಪ್ರಶ್ನೆ ಉದ್ಭವಿಸಿದೆ. ದಲಿತ ನಾಯಕರಾದ ಸತೀಶ ಜಾರಕಿಹೊಳಿ, ಗೃಹ ಸಚಿವ ಜಿ. ಪರಮೇಶ್ವರ ಹೆಸರು ಕೂಡ ಸಿಎಂ ಸ್ಥಾನದ ರೇಸ್ನಲ್ಲಿದೆ. ಈ ನಡುವೆ ಹುಲಿಗೆಮ್ಮ ದೇವಿಯ ಜೋಗತಿ ಬೈಲಮ್ಮ ನುಡಿದಿರುವ ಭವಿಷ್ಯ ಭಾರಿ ಕುತೂಹಲ ಮೂಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:41 pm, Mon, 24 November 25