ಗಣಿ ಸಚಿವರ ಜಿಲ್ಲೆಯಲ್ಲೇ ಮಿತಿ ಮೀರಿದ ಮರಳು ಮಾಫಿಯಾ

ಗದಗ: ಗಣಿ ಸಚಿವರ ಜಿಲ್ಲೆಯಲ್ಲೇ ಮರಳು ಮಾಫಿಯಾ ಮಿತಿಮೀರಿದೆ. ಮುಂಡರಗಿ ತಾಲೂಕಿನಲ್ಲಿ ಮರಳು ದಂಧೆ ಮಾಫಿಯಾ ಎಗ್ಗಿಲ್ಲದೆ ಸಾಗಿದೆ. ಗುತ್ತಿಗೆದಾರರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವುದು 13 ಸಾವಿರ ರೂಪಾಯಿ, ಆದ್ರೆ ವಸೂಲಿ ಮಾಡ್ತಿರೋದು 23 ಸಾವಿರ ರೂಪಾಯಿ. ಕಾನೂನು ಮೀರಿದ್ರೆ ಕ್ರಮ ಕೈಗೊಳ್ಳೋದಾಗಿ ಸಚಿವ ಸಿಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಆದರೆ ಸಚಿವರ ಎಚ್ಚರಿಕೆಗೂ ಗುತ್ತಿಗೆದಾರರು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಮರಳು ಗುತ್ತಿಗೆದಾರರ ವಿರುದ್ಧ ಲಾರಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರ ಮರಳು […]

ಗಣಿ ಸಚಿವರ ಜಿಲ್ಲೆಯಲ್ಲೇ ಮಿತಿ ಮೀರಿದ ಮರಳು ಮಾಫಿಯಾ
ಸಾಧು ಶ್ರೀನಾಥ್​

Updated on: Jan 01, 2020 | 2:00 PM

ಗದಗ: ಗಣಿ ಸಚಿವರ ಜಿಲ್ಲೆಯಲ್ಲೇ ಮರಳು ಮಾಫಿಯಾ ಮಿತಿಮೀರಿದೆ. ಮುಂಡರಗಿ ತಾಲೂಕಿನಲ್ಲಿ ಮರಳು ದಂಧೆ ಮಾಫಿಯಾ ಎಗ್ಗಿಲ್ಲದೆ ಸಾಗಿದೆ. ಗುತ್ತಿಗೆದಾರರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವುದು 13 ಸಾವಿರ ರೂಪಾಯಿ, ಆದ್ರೆ ವಸೂಲಿ ಮಾಡ್ತಿರೋದು 23 ಸಾವಿರ ರೂಪಾಯಿ.

ಕಾನೂನು ಮೀರಿದ್ರೆ ಕ್ರಮ ಕೈಗೊಳ್ಳೋದಾಗಿ ಸಚಿವ ಸಿಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಆದರೆ ಸಚಿವರ ಎಚ್ಚರಿಕೆಗೂ ಗುತ್ತಿಗೆದಾರರು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಮರಳು ಗುತ್ತಿಗೆದಾರರ ವಿರುದ್ಧ ಲಾರಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರ ಮರಳು ನೀತಿ ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Published On - 1:45 pm, Wed, 1 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us