ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರೆದ್ರೂ ಮೌಢ್ಯ (superstition) ಮಾತ್ರ ಇನ್ನೂ ತೊಲಗಿಲ್ಲ. ಗ್ರಾಮೀಣ, ಪಟ್ಟಣಗಳಲ್ಲಿ ಇನ್ನೂ ಜನರು ಮೂಢನಂಬಿಕೆಗಳಿಗೆ ದಾಸರಾಗಿದ್ದಾರೆ. ಯಾಕೆ ಈ ಪೀಠಿಕೆ ಅಂತೀರಾ ಈ ವರದಿ ನೋಡಿ. ಗದಗ ಜಿಲ್ಲೆಯ ಕೆಲ ಭಾಗದಲ್ಲಿ ಕಳೆದ 10-15 ದಿನಗಳಿಂದ ಸೀರೆಗಳ (saree) ಮಾರಾಟ ಬಲು ಜೋರಾಗಿದೆ. ಇದಕ್ಕೆ ಕಾರಣ ಸೊಸೆಗೆ ಸೋದರತ್ತೆಯರು (sister) ಸೀರೆ ಉಡಿಸಬೇಕು ಅನ್ನೋ ಸುದ್ದಿಯೇ ಇದಕ್ಕೆ ಮೂಲ. ಮಹಿಳೆಯರಿಗೆ ಅದು ತವರುಮನೆ ಕಾಳಜಿ, ಪ್ರೀತಿ ಅಂತಾರೆ ಜನ. ಹೌದು ಮಹಿಳೆಯರು ತನ್ನ ಅಣ್ಣ ಅಥವಾ ತಮ್ಮನಿಗೆ (brother) ಒಬ್ಬಳೇ ಹೆಣ್ಣು ಮಗಳು ಇದ್ರೆ ಸೋದರತ್ತೆ ಸೀರೆ ಉಡಿಸಬೇಕು. ಇಲ್ಲಾಂದ್ರೆ ಕೇಡಾಗುತ್ತೆ ಅನ್ನೋ ಸುದ್ದಿ ಗದಗ (gadag) ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಹಬ್ಬಿದೆ.
ಹೀಗಾಗಿ ನಮ್ಮ ಅಣ್ಣ ಅಥವಾ ತಮ್ಮನ ಮಗಳಿಗೆ ಒಳ್ಳೆಯ ಸೀರೆ ಕೊಡಿ ಅಂತ ಮಹಿಳೆಯರು ಕೇಳ್ತಾಯಿದ್ದಾರೆ. ಇದರಿಂದ ಬಟ್ಟೆ ಅಂಗಡಿಗಳ ಮಾಲೀಕರು ಭರ್ಜರಿ ವ್ಯಾಪಾರ ಮಾಡ್ತಾಯಿದ್ದಾರೆ. ಭೀಕರ ಬರ ಹಿನ್ನೆಲೆಯಲ್ಲಿ ಈ ಬಾರಿ ಹಬ್ಬಗಳಲ್ಲಿ ಜನರು ಬಟ್ಟೆ ಖರೀದಿಗೆ ಮುಂದಾಗಿರಲಿಲ್ಲ. ಆದ್ರೆ, ಈಗ ವದಂತಿ ಗ್ರಾಮೀಣ ಭಾಗದ ಜನ್ರನ್ನು ದಂಗು ಬಡಿಸಿದೆ. ಮಹಿಳೆಯರು ಪಟ್ಟಣದ ಬಟ್ಟೆ ಅಂಗಡಿಗಳಲ್ಲಿ ಸೀರೆ ಖರೀದಿಗೆ ಮುಂದಾಗಿದ್ದಾರೆ.
ಕಳೆದ 15 ದಿನಗಳಿಂದ ತಾಲೂಕಿನ ಮಾಚೇನಹಳ್ಳಿ, ಬೆಳ್ಳಟ್ಟಿ, ಹೊಸಳ್ಳಿ, ನಾಗರಮಡುವು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಈ ರೀತಿಯ ವದಂತಿ ಹಬ್ಬಿದೆ. ಸೀರೆ ಕೊಡಿಸದಿದ್ದರೆ ಕೇಡಾಗುತ್ತೆ ಎಂಬ ನಂಬಿಕೆಯಿಂದ ತವರು ಮನೆಗೆ ಹೆಣ್ಣುಮಕ್ಕಳು ಬಂದು ಅಣ್ಣ, ತಮ್ಮನ ಮಗಳಿಗೆ ಸೀರೆ ಉಡಿಸಿ, ಆರತಿ ಮಾಡಿ ತೆರಳುತ್ತಿರುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: ಚಳಿಗಾಲದ ಅಧಿವೇಶನ ಇಲ್ಲಿಯೇ ಯಾಕಾದರೂ ನಡೆಯುತ್ತದೋ ಎಂದು ಇಲ್ಲಿನ ರೈತರಿಗೆ ಧುತ್ತನೆ ಎದುರಾಗಿದೆ ಟೆನ್ಷನ್! ಏನದು ವಿಷಯ?
ಅಣ್ಣನ, ತಮ್ಮನ ಹೆಣ್ಣು ಮಗಳಿಗೆ ಸೀರೆ ಕೊಡಿಸಬೇಕೆಂಬ ವದಂತಿ ಸತ್ಯವೋ, ಅಸತ್ಯವೋ ಎನ್ನುವ ಮಾಹಿತಿ ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಪಂಚಾಂಗ ಹೇಳುವವರು ಖಚಿತವಾಗಿ ಹೇಳುತ್ತಿಲ್ಲ. ಈ ಹಿಂದೆ ಕೂಡ ತಾಯಿಗೆ ಮಗಳು ಸೀರೆ ಕೊಡಿಸುವುದು, ಒಬ್ಬನೇ ಮಗನಿದ್ದರೆ ಬೆಳ್ಳಿ ಕಡಗ ಕೊಡಿಸುವುದು ಸುದ್ದಿಯಾಗಿತ್ತು. ಹೀಗಾಗಿ ನಾವು ಕೂಡ ನಮ್ಮ ಅಣ್ಣ ಮತ್ತು ತಮ್ಮನ ಮಗಳಿಗೆ ಈ ಬಾರಿ ಹೊಸ ಸೀರೆ, ಬೆಳ್ಳಿ ಉಂಗುರ ಖರೀದಿ ಮಾಡಿಸಿ ಕೊಡಲು ಮುಂದಾಗಿದ್ದೇವೆ. ತಪ್ಪೇನಲ್ಲ. ಇದರಿಂದ ನಮ್ಮ ತವರು ಮನೆಯ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಅಂತ ಗಂಗಮ್ಮ ಹೇಳುತ್ತಾರೆ.
ಸೊಸೆಗೆ ಹೊಸ ಸೀರೆ ಉಡಿಸಿ ಹಣೆಗೆ ಕುಂಕುಮ ಇಟ್ಟು ಆರತಿ ಬೆಳಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹರಸುತ್ತಿದ್ದಾರೆ ತಾಯಂದಿರು. ಒಟ್ಟಾರೆ ವದಂತಿಗಳು ಜನರಲ್ಲಿ ಪುನ: ಮೌಢ್ಯತೆ ಹೆಚ್ಚಿಸುತ್ತಿರುವುದು ವಿಜ್ಞಾನಕ್ಕೆ ಸವಾಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ