ಚಳಿಗಾಲದ ಅಧಿವೇಶನ ಇಲ್ಲಿಯೇ ಯಾಕಾದರೂ ನಡೆಯುತ್ತದೋ ಎಂದು ಇಲ್ಲಿನ ರೈತರಿಗೆ ಧುತ್ತನೆ ಎದುರಾಗಿದೆ ಟೆನ್ಷನ್! ಏನದು ವಿಷಯ?
ಪ್ರತಿಭಟನೆ ನಡೆಯುವ ಸ್ಥಳದ ಅಕ್ಕಪಕ್ಕದ ಜಮೀನು ಸಹ ಹಾಳಾಗುತ್ತಿರುವ ಹಿನ್ನೆಲೆ ಈ ಬಾರಿಯಾದ್ರೂ ಆ ಜಾಗಗಳಿಗೂ ಪರಿಹಾರ ನೀಡುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. ಅಧಿವೇಶನ ನಡೆಯುವ ಸಮಯದಲ್ಲಿ ಸರಕಾರ ನಿಗದಿಪಡಿಸಿರುವ ಪ್ರತಿಭಟನಾ ಸ್ಥಳ ಮಾತ್ರವೇ ಬಳಕೆ ಆಗಲ್ಲ. ಅಕ್ಕಪಕ್ಕದ ಜಮೀನಿನಲ್ಲಿಯೂ ಜನ ಮಲಮೂತ್ರ ಮಾಡಲು, ಇನ್ನಿತರ ಕೆಲಸಗಳಿಗೆ ಬಳಸುತ್ತಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ( Belagavi Suvarna soudha) ವಾರ್ಷಿಕ ಕಾರ್ಯಕ್ರಮದಂತೆ ಮುಂದಿನ ತಿಂಗಳು ಡಿಸೆಂಬರ್ 4 ರಿಂದ 15ರ ವರೆಗೆ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಆದರೆ ಯಾಕಾದ್ರೂ ಈ ಚಳಿಗಾಲದ ಅಧಿವೇಶನ (legislative winter session) ಆರಂಭವಾಗ್ತಿದೆಯಲ್ಲಾ ಅನ್ನೋ ಟೆನ್ಷನ್ ಇಲ್ಲಿನ ರೈತರಿಗೆ (farmers) ಧುತ್ತನೆ ಎದುರಾಗಿದೆ.
ಸುವರ್ಣ ಸೌಧದ ಆಸುಪಾಸು ಇರುವ 50ಕ್ಕೂ ಅಧಿಕ ರೈತರು ಅದಾಗಲೇ ಈ ಟೆನ್ಷನ್ ಅನುಭವಿಸತೊಡಗಿದ್ದಾರೆ! ಏನಿಲ್ಲ ಪಾಪಾ ತಾವು ಕಷ್ಟಪಟ್ಟು ಬೆಳೆದ ಬೆಳೆ ಕಳೆದುಕೊಳ್ಳುವ ಆತಂಕ ಈ ಅಮಾಯಕ ರೈತರದ್ದಾಗಿದೆ. ಸುವರ್ಣ ಸೌಧದ ಸುತ್ತಲಿನ ನೂರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆ ಹಾಳಾಗುವ (crop loss) ಭೀತಿಯಲ್ಲಿದ್ದಾರೆ ರೈತರು.
ಪ್ರತಿವರ್ಷ ಅಧಿವೇಶನದಲ್ಲಿ 150ಕ್ಕೂ ಅಧಿಕ ಪ್ರತಿಭಟನೆಗಳು ನಡೆಯುವ ಹಿನ್ನೆಲೆಯಲ್ಲಿ ಕೊಂಡಸಕೊಪ್ಪ ಮತ್ತು ಸುವರ್ಣ ಗಾರ್ಡನ್ – ಎರಡು ಕಡೆ ಪ್ರತಿಭಟನೆ ಮಾಡಲು ಅಧಿಕೃತವಾಗಿ ಅವಕಾಶ ನೀಡಲಾಗಿದೆ. ಹೀಗೆ ಪ್ರತಿಭಟನೆಗೆ ಗುರುತಿಸಿದ ಜಮೀನಿಗೆ ಮಾತ್ರ ಸರ್ಕಾರದಿಂದ ಪರಿಹಾರ ಕಲ್ಪಿಸುವ ಭಾಗ್ಯವಿದೆ.
ಇದನ್ನೂ ಓದಿ: 2023-24ನೇ ಸಾಲಿನ ಬಜೆಟ್ ಅಧಿವೇಶನಕ್ಕೆ ಖರ್ಚಾಗಿದ್ದು ಬರೊಬ್ಬರಿ 95 ಲಕ್ಷ ರೂ. !
ಆದರೆ ಪ್ರತಿಭಟನೆ ನಡೆಯುವ ಸ್ಥಳದ ಅಕ್ಕಪಕ್ಕದ ಜಮೀನು ಸಹ ಹಾಳಾಗುತ್ತಿರುವ ಹಿನ್ನೆಲೆ ಈ ಬಾರಿಯಾದ್ರೂ ಆ ಜಾಗಗಳಿಗೂ ಪರಿಹಾರ ನೀಡುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. ಅಧಿವೇಶನ ನಡೆಯುವ ಸಮಯದಲ್ಲಿ ಸರಕಾರ ನಿಗದಿಪಡಿಸಿರುವ ಪ್ರತಿಭಟನಾ ಸ್ಥಳ ಮಾತ್ರವೇ ಬಳಕೆ ಆಗಲ್ಲ. ಅಕ್ಕಪಕ್ಕದ ಜಮೀನಿನಲ್ಲಿಯೂ ಜನ ಮಲಮೂತ್ರ ಮಾಡಲು, ಇನ್ನಿತರ ಕೆಲಸಗಳಿಗೆ ಬಳಸುತ್ತಾರೆ.
ಪ್ರತಿಭಟನೆಗೆ ಬಂದ ಸಾವಿರಾರು ಜನ ಅಕ್ಕಪಕ್ಕದ ಜಮೀನು ಬಳಕೆ ಹಿನ್ನೆಲೆ ಬೆಳೆದು ನಿಂತ ಭತ್ತದ ಬೆಳೆ, ಗೋವಿನ ಜೋಳ, ಚನ್ನಂಗಿ, ಹೂಕೋಸು ಬೆಳೆ ಹಾಳಾಗುವ ಆತಂಕ ಆಯಾ ರೈತರದ್ದಾಗಿದೆ. ಬರಗಾಲ ಹಿನ್ನೆಲೆ ಈಗಾಗಲೇ ಒಂದು ಬೆಳೆ ಕಳೆದುಕೊಂಡಿದ್ದೇವೆ. ಈಗ ಅಧಿವೇಶನ ಹಿನ್ನೆಲೆ ಎರಡನೇ ಬೆಳೆಯೂ ಕಳೆದುಕೊಳ್ಳುತ್ತೇವೆ. ಹಾಳಾದ ಬೆಳೆಗೆ ಸೂಕ್ತ ಪರಿಹಾರ ನೀಡಿ ಇಲ್ಲ, ಪ್ರತಿಭಟನೆಗೆ ಬ್ರೇಕ್ ಹಾಕುವಂತೆ ಸರ್ಕಾರಕ್ಕೆ ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Thu, 23 November 23