2023-24ನೇ ಸಾಲಿನ ಬಜೆಟ್ ಅಧಿವೇಶನಕ್ಕೆ ಖರ್ಚಾಗಿದ್ದು ಬರೊಬ್ಬರಿ 95 ಲಕ್ಷ ರೂ. !
2023-24ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದು, ಈ ಬಜೆಟ್ಗೆ ಎಷ್ಟು ಖರ್ಚಾಗಿದೆ ಎಂದು ಕೋಲಾರದ ಆರ್ಟಿಐ ಕಾರ್ಯಕರ್ತ ಕೆ.ಸಿ.ರಾಜಣ್ಣ ಆರ್ಟಿಐ ಕಾಯ್ದೆಯಡಿ ಮಾಹಿತಿ ಕೇಳಿದ್ದರು.
ಕೋಲಾರ ಅ.01: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದ 2.O ಕಾಂಗ್ರೆಸ್ ಸರ್ಕಾರ ಜುಲೈ ತಿಂಗಳಲ್ಲಿ 2023-24ನೇ ಸಾಲಿನ ಬಜೆಟ್ (Budget) ಮಂಡಿಸಿತು. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಬಜೆಟ್ ಅಧಿವೇಶನ ಮುಗಿದು ಎರಡು ತಿಂಗಳು ಕಳೆದಿದೆ. ಈ ಬಜೆಟ್ಗೆ ಖರ್ಚಾದ ಹಣ ಎಷ್ಟು ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಜುಲೈ 3ರಿಂದ ಜುಲೈ 21ರವರೆಗೆ ನಡೆದಿದ್ದ ರಾಜ್ಯ ಸರ್ಕಾರದ ಬಜೆಟ್ ಅಧಿವೇಶನದ ಸಮಯದಲ್ಲಿ ಸಚಿವಾಲಯ ಸಿಬ್ಬಂದಿ, ಅಧಿಕಾರಿ, ಸಿಬ್ಬಂದಿಗೆ ಮಾಡಿದ್ದ ವೆಚ್ಚ ಬಹಿರಂಗಗೊಂಡಿದೆ.
ಆರ್ಟಿಐ ಕಾಯ್ದೆಯಡಿ ಕೋಲಾರ ಮೂಲದ ಆರ್ಟಿಐ ಕಾರ್ಯಕರ್ತ ಕೆ.ಸಿ.ರಾಜಣ್ಣ ಮಾಹಿತಿ ಕೇಳಿದ್ದರು. ಇದಕ್ಕೆ ಸಚಿವಾಲಯದ ಅಧೀನ ಕಾರ್ಯದರ್ಶಿ ಜಯಶೀಲ ಎಂ.ಎಸ್ ಮಾಹಿತಿ ನೀಡಿದ್ದು, ಊಟ, ಉಪಚಾರ, ಪ್ರಯಾಣ ಭತ್ಯೆಗೆ ಬರೊಬ್ಬರಿ 95,97,000 ಹಣ ಖರ್ಚಾಗಿದೆ. ಉಳಿದಂತೆ ಲೋಕೋಪಯೋಗಿ ಇಲಾಖೆ, ತೋಟಗಾರಿಕಾ ಇಲಾಖೆ, ವೈದ್ಯಾಧಿಕಾರಿ, ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಗೆ ಖರ್ಚು ವೆಚ್ಚದ ಹಣ ಕೊಡುವುದು ಇನ್ನೂ ಬಾಕಿ ಇದೆ ಎಂದು ತಿಳಿಸಿದ್ದಾರೆ.
- ಸಭಾಧ್ಯಕ್ಷರ ಆಪ್ತ ಸಿಬ್ಬಂದಿ ಶಾಖೆ – 1,71,000 ಲಕ್ಷ ರೂ.
- ವಿಧಾನಸಭೆ ಸಚಿವಾಯದ ಅಧಿಕಾರಿ/ನೌಕರರು – 92,98, 500 ಲಕ್ಷ ರೂ
- ನಿಯೋಜನೆಗೊಂಡಿರುವ ಅಧಿಕಾರಿ/ನೌಕರರು – 1,27, 500 ಲಕ್ಷ ರೂ.
ಒಟ್ಟು 95, 97, 000 ಲಕ್ಷ ರೂ ಖರ್ಚು ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 am, Sun, 1 October 23