ಗದಗ, ಮೇ.15: ಜಿಲ್ಲೆಯ ಮುಂಡರಗಿ(Mundaragi) ತಾಲೂಕಿನಲ್ಲಿ ಒಂದನೇ ಹಂತದ ಹನಿ ನೀರಾವರಿ ಯೋಜನೆ ವ್ಯಾಪ್ತಿಗೆ ಮುಂಡರಗಿ ತಾಲೂಕಿನ ಮೇವುಂಡಿ, ಡಂಬಳ, ತಾಮ್ರಗುಂಡಿ, ಚಿಕ್ಕವಡ್ಡಟ್ಟಿ, ಹಿರೇಮವಡ್ಡಟ್ಟಿ ಸೇರಿ ಹಲವು ಗ್ರಾಮಗಳು ಬರುತ್ತವೆ. ಹನಿ ನೀರಾವರಿ 1ನೇ ಹಂತ ಯೋಜನೆ ಪೂರ್ಣಗೊಂಡರೂ ರೈತರ ಜಮೀನುಗಳಿಗೆ ಮಾತ್ರ ಇನ್ನು ಹನಿ ನೀರು ಹರಿಯುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. 2800 ಕೋಟಿ ರೂ. ಖರ್ಚು ಮಾಡಿ ಯೋಜನೆ ಜಾರಿ ಮಾಡಿದ್ದಾರೆ. ಜೊತೆಗೆ ಪಂಪ್ ಹೌಸ್ಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಕೆ ಮಾಡಲಾಗಿದೆ. ಆದ್ರೆ, ರೈತರ ಜಮೀನುಗಳಿಗೆ ಮಾತ್ರ ನೀರು ಹರಿಯುತ್ತಿಲ್ಲ.
ಭೀಕರ ಬರಗಾಲದಲ್ಲಿ ಹನಿ ನೀರಾವರಿ ಯೋಜನೆಯ ಲಾಭ ಪಡೆದು ಬೆಳೆ ಬೆಳೆಯಬೇಕು ಅಂದುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ. ಹಮ್ಮಿಗಿ ಬ್ಯಾರೇಜ್ನಲ್ಲಿ 3.24ಟಿಎಂಸಿ ನೀರು ನಿಲ್ಲಿಸುವ ಕ್ರಮ ಆಗುತ್ತಿಲ್ಲ. ಹೀಗಾಗಿ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಜಮೀನುಗಳಿಗೆ ಹರಿ ಹರಿಯುತ್ತೆ. ಬದುಕು ಬಂಗಾರವಾಗುತ್ತೆ ಎಂದು ನೀರಾವರಿ ಯೋಜನೆಗೆ ನಮ್ಮ ಜಮೀನುಗಳನ್ನು ಕಳೆದುಕೊಂಡಿದ್ದೇವೆ. ಆದ್ರೆ, ನಮ್ಮ ಜಮೀನುಗಳಿಗೆ ಹನಿ ನೀರು ಬರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಕೋಲಾರ: ಯರಗೋಳ್ ನೀರಾವರಿ ಯೋಜನೆ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ
ಯೋಜನೆಗೆ ಭೂಮಿ ಕಳೆದುಕೊಂಡಿದ್ದು, ಮುಂಡರಗಿ ತಾಲೂಕಿನ ರೈತರು. ಅದ್ರೆ, ನೀರು ಹರಿಯುತ್ತಿರೋದು ಗದಗ-ಬೆಟಗೇರಿ ಅವಳಿ ನಗರದ ಭೀಷ್ಮ ಕೆರೆಗೆ. ಈ ಕುರಿತು ನೀರಾವರಿ ನಿಗಮದ ಅಧಿಕಾರಿಗಳು ಕೂಡ ರೈತರ ಬಗ್ಗೆ ಕಾಳಿಜಿ ವಹಿಸುತ್ತಿಲ್ಲ. ಹೀಗಾಗಿ ಈ ಹನಿ ನೀರಾವರಿ ಯೋಜನೆ ಹಳ್ಳಹಿಡಿದಿದೆಯಾ ಎನ್ನುವ ಅನುಮಾನ ರೈತರನ್ನು ಕಾಡುತ್ತಿದೆ ಅಂತಿದ್ದಾರೆ. ಹನಿ-ನೀರಾವರಿ ಯೋಜನೆ ಒಟ್ಟು 5 ಪ್ಯಾಕೇಜ್ಗಳಲ್ಲಿ ಯೋಜನೆ ಜಾರಿ ಮಾಡಲಾಗಿದೆ. ಒಟ್ಟು 1.07 ಲಕ್ಷ ಹೇಕ್ಟರ್ ನೀರಾವರಿ ಮಾಡುವ ಉದ್ದೇಶ ಯೋಜನೆಯದ್ದು, 20 ಸಾವಿರ ಹೇಕ್ಟೆರ್ ಹರಿಯುವ ನೀರಾವರಿ ಯೋಜನೆ. 87 ಸಾವಿರ ಹೇಕ್ಟರ್ ಹನಿ ನೀರಾವರಿ ಯೋಜನೆ ಮೂಲಕ ರೈತರ ಬಾಳು ಬಂಗಾರ ಮಾಡುವ ಉದ್ದೇಶ ಇದಾಗಿದೆ. 70 ಸಾವಿರ ಹೇಕ್ಟರ್ನಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೂ ನೀರು ಬರುತ್ತಿಲ್ಲ. ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಇತ್ತ ಜಮೀನು ಹೋಯ್ತು, ನೀರೂ ಇಲ್ಲದೇ ರೈತರು ಕಂಗಲಾಗಿದ್ದಾರೆ. ಪ್ರತಿಯೊಬ್ಬ ರೈತರ ಜಮೀನುಗಳಿಗೆ ನೀರು ಹರಿದಾಗ ಮಾತ್ರ ಯೋಜನೆ ಸಫಲವಾಗುತ್ತದೆ ಎನ್ನುವುದು ರೈತರ ವಾದ. ಆದ್ರೆ, ನೀರಾವರಿ ಇಲಾಖೆ ಅಧಿಕಾರಿಗಳ ಪ್ರಕಾರ ರೈತರ ಜಮೀನುಗಳಿಗೆ ನೀರು ಹರಿಸಲಾಗಿದೆ. ಸಾಕಷ್ಟು ರೈತರು ಯೋಜನೆ ಲಾಭ ಪಡೆದಿದ್ದಾರೆ ಅಂತಿದ್ದಾರೆ. ಕೆಲ ರೈತರಿಗೆ ಮಾತ್ರ ಸಮಸ್ಯೆಯಾಗಿದೆ ಅಂತಿದ್ದಾರೆ. ಏನೇ ಇರಲಿ ಸಂಪೂರ್ಣ ನೀರು ನಿಲ್ಲಿಸಿದ್ರೆ, ಬರಗಾಲದಲ್ಲಿ ರೈತರಿಗೆ ಈ ಯೋಜನೆ ತುಂಬಾ ಅನುಕೂಲ ಆಗುತ್ತಿತ್ತು ಎನ್ನುವುದು ಅನ್ನದಾತರ ವಾದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ