ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಕಂಟಕ: ನೀರು ಬರುವ ಮುನ್ನವೇ ಪೈಪ್ಗಳ ಕಳ್ಳತನ
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮೇವುಂಡಿ, ಡಂಬಳ, ಪೇಠಾಲೂರು, ಜಂತ್ಲಿ ಶಿರೂರು ಸೇರಿದಂತೆ ನಾನಾ ಭಾಗದ ರೈತರ ಜಮೀನಿನಲ್ಲಿ ಲಕ್ಷಾಂತರ ಮೌಲ್ಯದ ಅಪಾರ ಪೈಪಗಳು ಇಡಲಾಗಿದೆ. ಆದ್ರೆ, ಪೈಪ್ ಗಳು ರಾತ್ರೋ ರಾತ್ರಿ ಮಂಗಮಾಯವಾಗುತ್ತಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಹನಿ ನೀರಾವರಿ ಪೈಪ್ ಕಳೆದ ವರ್ಷಗಳಿಂದ ಆಗಾಗ ಕಳ್ಳತನವಾಗುತ್ತಿವೆ.
ಗದಗ, ನವೆಂಬರ್ 25: ಜಿಲ್ಲೆಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ (Shingatalur Etha Irrigation Project) ಜಾರಿ ಮಾಡಲಾಗಿದೆ. ಹೀಗಾಗಿ ಈ ಭಾಗದ ರೈತರು ಒಣ ಬೇಸಾಯ ಮಾಡುವ ರೈತರು ನಮ್ಮ ಜಮೀನುಗಳು ಹಸಿರಿನಿಂದ ಕಂಗೊಳಿಸುತ್ತವೆ. ನಮ್ಮ ಬಡತನ ನಿವಾರಣೆ ಆಗುತ್ತೆ ಅಂತ ಹತ್ತಾರು ಕನಸು ಕಂಡಿದ್ದಾರೆ. ಆದರೆ ರೈತರ ಜಮೀನುಗಳಿಗೆ ನೀರು ಹರಿಯುವ ಮುನ್ನವೇ ವಿಘ್ನ ಶುರುವಾಗಿದೆ. ಹನಿ ನೀರಾವರಿ ಮೂಲಕ ನೀರಾವರಿ ಮಾಡುವ ಮಹತ್ವಾಕಾಂಕ್ಷೆ ಯೋಜನೆ. ಆದರೆ ನೀರು ಬರುವ ಮುನ್ನವೇ ಹನಿ ನೀರಾವರಿ ಪೈಪ್ ಕಳ್ಳತನವಾಗುತ್ತಿವೆ.
ಮುಂಡರಗಿ ತಾಲೂಕಿನ ಮೇವುಂಡಿ, ಡಂಬಳ, ಪೇಠಾಲೂರು, ಜಂತ್ಲಿ ಶಿರೂರು ಸೇರಿದಂತೆ ನಾನಾ ಭಾಗದ ರೈತರ ಜಮೀನಿನಲ್ಲಿ ಲಕ್ಷಾಂತರ ಮೌಲ್ಯದ ಅಪಾರ ಪೈಪಗಳು ಇಡಲಾಗಿದೆ. ಆದರೆ ಪೈಪ್ಗಳು ರಾತ್ರೋ ರಾತ್ರಿ ಮಂಗಮಾಯವಾಗುತ್ತಿವೆ. ದೂರು ನೀಡಲು ಹೋದರೆ ಪೊಲೀಸರು ಕೇರ್ ಮಾಡುತ್ತಿಲ್ಲ ಅಂತ ಕಿಡಿಕಾರಿದ್ದಾರೆ. ಹೀಗಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್ ಕಳೆದುಕೊಂಡು ಅನ್ನದಾತರು ಹೈರಾಣಾಗಿದ್ದಾರೆ.
ಇದನ್ನೂ ಓದಿ: ಗದಗ: ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಿ ಗುತ್ತಿಗೆದಾರ ಎಸ್ಕೇಪ್; ಓಡಾಡಲು ಸೂಕ್ತ ಮಾರ್ಗವಿಲ್ಲದೆ ರೈತರು ಕಂಗಾಲು
ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್ನಿಂದ, ರೈತರ ಜಮೀನಿಗೆ ನೀರು ಒದಗಿಸುವ ಯೋಜನೆಯಾಗಿದ್ದು, ಬಳ್ಳಾರಿ, ಕೊಪ್ಪಳ ಹಾಗೂ ಗದಗ, ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ಭಾಗದ ಸಾವಿರಾರು ರೈತರು ಲಾಭ ಪಡೆದುಕೊಳ್ಳುತ್ತಾರೆ. ಆದರೆ ಈವಾಗ ನೀರಾವರಿ ಇಲಾಖೆ ರೈತರ ಜಮೀನಿಗೆ ಪೈಪ್ ಅಳವಡಿಸಿ, ರೈತರ ಜಮೀನಿನ ವಿಸ್ತರಣೆಗೆ ತಕ್ಕಂತೆ, ಹನಿ ನೀರಾವರಿ ಪೈಪ್ ನೀಡ್ತಾಯಿದೆ.
ಜಮೀನಿನಲ್ಲಿಟ್ಟ ಹನಿ ನೀರಾವರಿ ಪೈಪ್ ಕಳ್ಳತನವಾಗುತ್ತಿವೆ. ರೈತರು ಬೇಡ ಅಂದ್ರೂ ಇಟ್ಟು ಹೋಗ್ತಾಯಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ. ಅಧಿಕಾರಿಗಳು ಪೈಪ್ ಕೊಟ್ಟು ಹೋದ ತಕ್ಷಣ ಪೈಪ್ ಗಳು ಕಳ್ಳತನವಾಗ್ತಾಯಿವೆ. ಹೀಗಾಗಿ ಈ ಕಳ್ಳತನ ಪ್ರಕರಣದಲ್ಲಿ ನೀರಾವರಿ ಇಲಾಖೆಗಳು ಶಾಮೀಲಾಗಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ: ಗದಗ: ನಿರ್ವಹಣೆ ಇಲ್ಲದೇ ಹಳ್ಳಹಿಡಿದ ಕೋಟಿ ವೆಚ್ಚದ ಸಿಂಥೆಟಿಕ್ ಟ್ರ್ಯಾಕ್; ಕ್ರೀಡಾ ಇಲಾಖೆ ನಿರ್ಲಕ್ಷ್ಯಕ್ಕೆ ಅಥ್ಲೀಟ್ಗಳ ಆಕ್ರೋಶ
ಜಮೀನಿಗೆ ನೀರು ಬಂದಿಲ್ಲಾ, ಈಗಾಗಲೇ ಪೈಪ್ ಕಳ್ಳತನವಾಗದ್ರೆ, ನಾಳೆ ನೀರಾವರಿ ಮಾಡೋದು ಹೇಗೆ ಎನ್ನುವ ಪ್ರಶ್ನೇ ರೈತರು ಮಾಡ್ತಾಯಿದ್ದಾರೆ. ಪೈಪ್ ಅಳವಡಿಸುವ ಕಂಪನಿ ಹಾಗೂ ಪೊಲೀಸರ ಗಮನಕ್ಕೆ ತಂದ್ರು ಪ್ರಯೋಜನವಾಗುತ್ತಿಲ್ಲಾ, ದೂರು ಸ್ವೀಕಾರ ಮಾಡ್ತಾಯಿಲ್ಲಾ, ಅಷ್ಟೇ ಅಲ್ಲ ಕಳ್ಳರನ್ನು ಸಾಕ್ಷಿ ಸಮೇತ ಮುಂಡರಗಿ ಪೊಲೀಸ್ರಿಗೆ ಮಾಹಿತಿ ನೀಡಿದ್ರೂ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಪೊಲೀಸ್ ನೀರಾವರಿ ಇಲಾಖೆ ಅಧಿಕಾರಿಗಳು ಶಾಮೀಲಅಗಿದ್ದಾರೆ ಅಂತ ರೈತರು ಕಿಡಿಕಾರಿದ್ದಾರೆ. ಹೀಗಾಗಿ ನಮ್ಮಗೆ ರಕ್ಷಣೆ ಇಲ್ಲದಂತಾಗಿದೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಡರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ಹನಿ ನೀರಾವರಿ ಪೈಪ್ ಕಳ್ಳತನವಾಗಿವೆ. ಆದರೆ ಪೊಲೀಸರು ಕ್ರಮ ಕೈಗೊಳುತ್ತಿಲ್ಲ ಎಂದು ರೈತರು ಆರೋಪಿಸಲಾಗಿದೆ. ಪೊಲೀಸ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳು ನೀರಿನ ಪೈಪ್ ಕಳ್ಳತನ ಪ್ರಕಣಗಳಿಗೆ ಬ್ರೇಕ್ ಹಾಕಿ, ರೈತರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.