Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಣಸಿನಕಾಯಿ ಕಳ್ಳತನ: ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಮೆಣಸಿನಕಾಯಿ ಕದ್ದ ಇಬ್ಬರು ಕಳ್ಳರನ್ನು ದೇವಸ್ಥಾನದ ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೆಣಸಿನಕಾಯಿ ಮೂಟೆ ಹೊರಿಸಿ ಗ್ರಾಮಸ್ಥರಿಂದ ಮೆರವಣಿಗೆ ಮಾಡಿದ್ದಾರೆ. ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದ ಹಿನ್ನೆಲೆಯಲ್ಲಿ ಕಳ್ಳತನ ಕೃತ್ಯವೆಸಗಿದ್ದಾರೆ.

ಮೆಣಸಿನಕಾಯಿ ಕಳ್ಳತನ: ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ
ಕಳ್ಳರಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 26, 2023 | 2:56 PM

ಗದಗ, ನವೆಂಬರ್​​ 26: ಮೆಣಸಿನಕಾಯಿ ಕದ್ದ ಇಬ್ಬರು ಕಳ್ಳರನ್ನು (thieves) ದೇವಸ್ಥಾನದ ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯತ್ತಿನಹಳ್ಳಿ ಗ್ರಾಮದ ಶಿವು ಮತ್ತು ಮಂಜುನಾಥ್​ ನನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಕಳ್ಳರಿಗೆ ಮೆಣಸಿನಕಾಯಿ ಮೂಟೆ ಹೊರಿಸಿ ಗ್ರಾಮಸ್ಥರಿಂದ ಮೆರವಣಿಗೆ ಮಾಡಿದ್ದಾರೆ. ಕಳ್ಳನ ಹೆಗಲ ಮೇಲೆ ಇನ್ನೊಬ್ಬ ಕಳ್ಳನನ್ನ ಕೂರಿಸಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದ ಹಿನ್ನೆಲೆಯಲ್ಲಿ ಕಳ್ಳತನ ಮಾಡಿದ್ದಾರೆ

ತಡರಾತ್ರಿ ದೇವಸ್ಥಾನದ ಹುಂಡಿಗೆ ಕನ್ನ: ಲಕ್ಷಾಂತರ ರೂ. ದೋಚಿ ಪರಾರಿ

ದಾವಣಗೆರೆ: ತಡರಾತ್ರಿ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ್ದು, ಲಕ್ಷಾಂತರ ರೂಪಾಯಿ ದೋಚಿ ಪರಾರಿ ಆಗಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ‌ಪೆನ್ನ ಸಮುದ್ರ ಗ್ರಾಮದ ಮಹಾರುದ್ರೇಶ್ವರ ಸ್ವಾಮೀ‌ದೇವಸ್ಥಾನದಲ್ಲಿ ನಡೆದಿದೆ. ದೇವಸ್ಥಾನದ ಬೀಗ ಮುರುದು ಒಳನುಗ್ಗಿ, ಗರ್ಭಗುಡಿ ಮುಖ್ಯ ಬಾಗಿಲಿಗೆ ಇಟ್ಟ ಸ್ಟೀಲ್ ಹುಂಡು ಒಡೆದು ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ: ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಕಂಟಕ: ನೀರು ಬರುವ ಮುನ್ನವೇ ಪೈಪ್​ಗಳ ಕಳ್ಳತನ

ಪ್ರತಿವರ್ಷ ಜಾತ್ರೆಗೊಮ್ಮೆ ಹುಂಡಿ ಓಪನ್ ಮಾಡುತ್ತಿದ್ದ ದೇವಸ್ಥಾನ ಸಮಿತಿ. ಇನ್ನೇನು ಕೆಲ ದಿನಗಳಲ್ಲಿ ಜಾತ್ರೆ ಇತ್ತು. ಕನಿಷ್ಟ ಐದರಿಂದ ಆರು ಲಕ್ಷ ರೂ. ಇರುವ ಸಾಧ್ಯತೆ ಇತ್ತು ಎನ್ನಲಾಗಿದೆ. ಕಳ್ಳರ ಚಲನವಲನ ದೇವಸ್ಥಾನದ ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಚನ್ನಗಿರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಿಸಿ ಟಿವಿ ವಿಡಿಯೋ ವಶಕ್ಕೆ ಪಡೆದಿದ್ದಾರೆ.

ಕಾಳಸಂತೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಮಾರಾಟ

ಮೈಸೂರು: ಯರಗನಹಳ್ಳಿ ಸೇರಿದಂತೆ ಮೈಸೂರಿನ ಹಲವು ಕಡೆ ಎಗ್ಗಿಲ್ಲದೆ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: ಪೊಲೀಸ್ ಆಫೀಸರ್ಸ್ ಹೆಸರಲ್ಲೇ ಆನ್ಲೈನ್ ಮಾರಾಟ‌ ದಂಧೆ: 55 ಸಾವಿರ ರೂ. ಕಳೆದುಕೊಂಡ ವ್ಯಕ್ತಿ

ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಕೋರರು ಮಕ್ಕಳನ್ನು ಮನೆ ಮನೆಗೆ ಕಳುಹಿಸಿ ಅನ್ನಭಾಗ್ಯ ಅಕ್ಕಿಯನ್ನು ಖರೀದಿ ಮಾಡುತ್ತಿದ್ದಾರೆ. 15 ರಿಂದ 16 ರೂಪಾಯಿಗೆ ಅಕ್ಕಿ ಖರೀದಿ ಮಾಡಿ ಅದನ್ನು ಪಾಲಿಶ್ ಮಾಡಿಸಿ ಬರೋಬ್ಬರಿ 60 ರಿಂದ 70 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ‌. ದ್ವಿಚಕ್ರ ವಾಹನ ಆಟೋದಲ್ಲಿ ಬಂದು ಪಡಿತರ ಅಕ್ಕಿಯನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ನಾವು ಕೊಡುವುದಿಲ್ಲ ಅಂದರೂ ಬಲವಂತ ಮಾಡುತ್ತಾರೆ ಅನ್ನೋದು ಮೈಸೂರಿನ ಮಹಿಳೆಯರ ಆರೋಪಿಸಿದ್ದಾರೆ. ಬಡವರಿಗೆ ಅನುಕೂಲವಾಗಲಿ ಅಂತಾ ಜಾರಿಗೆ ತಂದ ಯೋಜನೆ ಸಿಎಂ ತವರು ಜಿಲ್ಲೆಯಲ್ಲೇ ಉಪಯೋಗಕ್ಕಿಂತ ದುರುಪಯೋಗ ಆಗ್ತಾ ಇರೋದು ಮಾತ್ರ ದುರಂತ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.