ಪೊಲೀಸ್ ಆಫೀಸರ್ಸ್ ಹೆಸರಲ್ಲೇ ಆನ್ಲೈನ್ ಮಾರಾಟ‌ ದಂಧೆ: 55 ಸಾವಿರ ರೂ. ಕಳೆದುಕೊಂಡ ವ್ಯಕ್ತಿ

ಆನ್ ಲೈನ್ ವಂಚಕರು ಸೆಲಿಬ್ರಿಟಿಗಳ ಹೆಸರಲ್ಲಿ ವಂಚನೆ ಮಾಡಿ ಜನರಿಗೆ ಲಕ್ಷ ಲಕ್ಷ ರೂ. ವಂಚನೆ ಮಾಡಿದ್ದಾರೆ. ಆದರೆ ಇದೀಗ ಪೊಲೀಸ್ ಐಪಿಎಸ್ ಹಾಗೂ ಮಿಲ್ಟ್ರಿ ಅಧಿಕಾರಿಗಳ ಹೆಸರಲ್ಲೇ ಆನ್ಲೈನ್ ಮಾರಾಟ‌ ದಂಧೆ ನಡೆಸಿರುವಂತಹ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಕರ್ನಾಟಕದ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ ಹಾಗೂ‌ ಸಿಆರ್‌ಪಿಎಫ್ ಯೋಧನ ಹೆಸರಲ್ಲಿ ಮೋಸ ವಂಚನೆ ಮಾಡಲಾಗಿದೆ.

ಪೊಲೀಸ್ ಆಫೀಸರ್ಸ್ ಹೆಸರಲ್ಲೇ ಆನ್ಲೈನ್ ಮಾರಾಟ‌ ದಂಧೆ: 55 ಸಾವಿರ ರೂ. ಕಳೆದುಕೊಂಡ ವ್ಯಕ್ತಿ
ಮೋಸಗೊಳಗಾದ ರಮೇಶ ಹತ್ತಿಕಾಳ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2023 | 5:39 PM

ಗದಗ, ನವೆಂಬರ್​ 20: ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರಲ್ಲಿ ಆನ್‌ಲೈನ್‌ಲ್ಲಿ ವಂಚನೆ (Online fraud) ಮಾಡಿ ಹಣ ವಸೂಲಿ ಮಾಡೋದನ್ನು ಕೇಳಿದ್ದೇವೆ. ಆದರೆ ಈಗ ಆನ್ ಲೈನ್ ವಂಚಕರು ಐಪಿಎಸ್, ಮಿಲ್ಟ್ರಿ ಅಧಿಕಾರಿಗಳನ್ನು ಬಿಟ್ಟಿಲ್ಲ. ಈದೀಗ ಐಪಿಎಸ್ ಹಾಗೂ ಮಿಲ್ಟ್ರಿ ಅಧಿಕಾರಿಗಳ ಹೆಸರಲ್ಲಿ ಓರ್ವ ವ್ಯಕ್ತಿಗೆ ಸಾವಿರಾರೂ ರೂಪಾಯಿ ಪಂಗನಾಮ ಹಾಕಿದ್ದಾರೆ. ಚೆನ್ನಾಗಿ ಇಂಗ್ಲೀಷ್​​ನಲ್ಲಿ ಮಾತನಾಡಿ ವಂಚನೆ ಮಾಡಿದ್ದು, ವಂಚನೆಗೆ ಬಲಿಯಾದ ವ್ಯಕ್ತಿ ಹಣ ಕಳೆದುಕೊಂಡು ಈಗ ಒದ್ದಾಡುತ್ತಿದ್ದಾರೆ. ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

ಮೋಸ ಹೋಗುವ ಜನ ಎಲ್ಲಿವರೆಗೆ ಇರ್ತಾರೋ ಅಲ್ಲಿವರೆಗೆ ಮೋಸ ಮಾಡೋ ಜನ ಇದ್ದೇ ಇರ್ತಾರೆ ಅನ್ನೋ ಗಾದಿ ಮಾತು ಕೇಳರ್ತೀರಾ. ಆನ್ ಲೈನ್ ವಂಚನೆ ಇದೇ ಮೊದಲಲ್ಲ. ಸಾಕಷ್ಟು ಆನ್ ಲೈನ್ ವಂಚನೆ ಪ್ರಕರಣ ನಡೀತಾನೇ ಇವೆ. ಆದ್ರೂ ಜನ್ರು ಎಚ್ಚೆತ್ತುಕೊಂಡಿಲ್ಲ. ಅದ್ರಲ್ಲೂ ಬುದ್ಧಿವಂತರೇ ಈ ಆನ್ ಲೈನ್ ವಂಚನೆ ಬಲಿಯಾಗ್ತಾಯಿರೋ ವಿಶೇಷ. ಆನ್ ಲೈನ್ ವಂಚಕರು ಸೆಲಿಬ್ರಿಟಿಗಳ ಹೆಸ್ರಲ್ಲಿ ವಂಚನೆ ಮಾಡಿ ಜನ್ರಿಗೆ ಲಕ್ಷ ಲಕ್ಷ ವಂಚನೆ ಮಾಡಿದ್ದಾರೆ. ಆದ್ರೆ, ಇದೀಗ ಪೊಲೀಸ್ ಐಪಿಎಸ್ ಹಾಗೂ ಮಿಲ್ಟ್ರಿ ಅಧಿಕಾರಿಗಳ ಹೆಸರಲ್ಲೇ ಆನ್ಲೈನ್ ಮಾರಾಟ‌ ದಂಧೆ ನಡೆಸಿದ್ದಾರೆ.

ಇದನ್ನೂ ಓದಿ: ಆನ್​​​​ಲೈನ್​​​​ ಮೋಸ: 300 ರೂ. ಲಿಪ್‌ಸ್ಟಿಕ್​​ಗೆ 1 ಲಕ್ಷ ರೂ. ಕಳೆದುಕೊಂಡ ವೈದ್ಯೆ

ಗದಗ ಜಿಲ್ಲೆಯಲ್ಲೊಂದು‌ ಅಂಥದ್ದೊಂದು ಪ್ರಕರಣ‌ ಬೆಳಕಿಗೆ ಬಂದಿದೆ. ಕರ್ನಾಟಕದ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ ಹಾಗೂ‌ ಸಿಆರ್‌ಪಿಎಫ್ ಯೋಧನ ಹೆಸರಲ್ಲಿ ಮೋಸ ವಂಚನೆ ಮಾಡಲಾಗಿದೆ. ಈ ವಂಚನೆ ಬಲಿಯಾದವ್ರೇ ಗದಗನ ಬೆಟಗೇರಿಯ ರಮೇಶ ಹತ್ತಿಕಾಳ. 55,000 ರೂಪಾಯಿ ಪಂಗನಾಮ ಹಾಕಿದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ಫೇಸ್ಬುಕ್ ಮೂಲಕ ರಮೇಶ ಎಂಬುವರನ್ನು ವಂಚನೆ ಮಾಡಿದ್ದಾರೆ. ನವೆಂಬರ್ 7 ರಂದು ರವಿ ಚೆನ್ನಣ್ಣವರ IPS ಹೆಸರಿನ ಫೆಸ್ಬುಕ್ ಐಡಿಯಿಂದ ರಮೇಶವರಿಗೆ ಮೆಸೆಜ್ ಬಂದಿದೆ.

ನನ್ನ ಫ್ರೆಂಡ್ CRPF ಯೋಧ ಸಂತೋಷಕುಮಾರಗೆ ಟ್ರಾನ್ಸಫರ್ ಆಗಿದೆ. ಹೀಗಾಗಿ ಅವರು ಕಡಿಮೆ ಬೆಲೆಗೆ ತಮ್ಮ ಫರ್ನಿಚರ್ ಮಾರಾಟ ಮಾಡ್ತಿದ್ದಾರೆ ಅಂತ ಮೇಸೆಜ್ ಬಂದಿದೆ. ಆದ್ರೆ, ಬೇಡ ಸರ್ ನನ್ನ ಬಳಿ ಸಾಕಷ್ಟು ಫರ್ನಿಚರ್ ಇದೆ ಎಂದಿದ್ದಾರೆ. ಯಾರಿಗಾದ್ರೂ ಮಾರಾಟ ಮಾಡಿಸಿ ಅಂತ ಹೇಳಿದ್ದಾರೆ. ಇದೆಲ್ಲವೂ ಆಗಿದ್ದು, ಫೇಸ್ಬುಕ್ ಮೇಸೆಜ್ ನಲ್ಲಿ. ಮೊದ್ಲಿನಿಂದಲೂ ರವಿ ಚೆನ್ನಣ್ಣವರ ಪರಿಚಯ ಹೀಗಾಗಿ ಅವ್ರ ಮೇಲಿನ ಗೌರವದಿಂದ ಒಪ್ಪಿಕೊಂಡೇ. ಅಷ್ಟರಲ್ಲೇ ಸಿಆರ್ಪಿಎಫ್ ಯೂಧ ಎನ್ನಲಾದ ಸಂತೋಷ್ ಫೋನ್ ಮಾಡಿ ರಮೇಶ ಜೊತೆ ಮಾತನಾಡಿದ್ದಾರೆ.

ಮಿಲ್ಟ್ರಿ ಫೋಟೋ ಬಂದಿರೋದ್ರಿಂದ ನಂಬಿದ್ದಾರೆ. ರವಿ ಚೆನ್ನಣ್ಣವರ ಹೇಳಿದ್ದಾರೆ 80 ಸಾವಿರದಲ್ಲಿ ಎಲ್ಲ ಫರ್ನಿಚರ್ ಕೊಡ್ತೀನಿ ಎಂದಿದ್ದಾರೆ. ದೀಪಾವಳಿ ಹಬ್ಬದ ಇದೆ. ಈಗ ಆಗಲ್ಲ ಅಂದೆ. ಆದ್ರೂ ಅರ್ಜೆಂಟ್ ಮಾಡಿದ್ರಿಂದ 20ಸಾವಿರ ಹಣ ಗೂಗಲ್ ಪೇ ಮೂಲಕ ಹಣ ಹಾಕಿದ್ದೇನೆ. 30 ಸಾವಿರ ಆಮೇಲೆ 5 ಸಾವಿರ ಹಾಕಿದೆ. ಆಮೇಲೆ ನಾನೂ ಮೋಸ ಹೋಗಿರೋದು ಅನುಮಾನ ಬಂದಿದೆ. ತಕ್ಷಣ ನಾನೂ ಗದಗ ಸೈಬರ್ ಕ್ರೈಂ ಠಾಣೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿನ ಸೈಬರ್​ ಕ್ರೈಂ ಪ್ರಕರಣಗಳ ಪತ್ತೆಗೆ ನಾಲ್ವರು ಡಿಸಿಪಿಗಳ ನೇಮಕ

ಆನ್ ಲೈನ್ ವಂಚನಕರು ರಮೇಶ್ ಜೊತೆಯೂ ವಾಟ್ಸಪ್​ನಲ್ಲಿ ಚಾಟಿಂಗ್ ಮಾಡಿದ್ದಾರೆ. ದೂರು ನೀಡಿದ್ರೂ ಗದಗ ಸೈಬರ್ ಪೊಲೀಸ್ರು ನಿರ್ಲಕ್ಷ್ಯ ತೋರಿದ್ದಾರೆ. ಸಕಾಲಕ್ಕೆ ದೂರು ದಾಖಲು ಮಾಡಿಕೊಳ್ಳಲು ವಿಳಂಬ ಮಾಡಿದ್ದಾರೆ. ಆ ಆನ್ಲೈನ್ ವಂಚಕ ಇವತ್ತಿಗೂ ನನಗೆ ಫೋನ್ ಮಾಡ್ತಾಯಿದ್ದಾರೆ. ಆದರೆ ದೂರು ನೀಡಿದ್ರೂ ವಂಚನ ಪತ್ತೆ ಹಚ್ಚುವ ಕೆಲಸ ಮಾಡ್ತಾಯಿಲ್ಲ ಅಂತ ಕಿಡಿಕಾರಿದ್ದಾರೆ. ರವಿ ಚೆನ್ನಣ್ಣವರ ಮೇಸೆಜ್​ನಲ್ಲಿ ನಿಮಗೆ ಅವರ ನಂಬರ್ ಕೊಡ್ತಿನಿ, ವ್ಯವಹಾರ ಮಾತಾಡಿಕೊಳ್ಳಿ‌ ಅಂತ ಮೆಸೆಜ್ ಮಾಡಿದ್ದರು.

ಗದಗದ ರಮೇಶ ಜೊತೆಗೆ ಫೇಕ್ ರವಿ ಚೆನ್ನಣ್ಣವರ ಹಾಗೂ CRPF ಸಂತೋಷ ಇವತ್ತಿಗೂ ವಾಟ್ಸಪ್ ಚಾಟಿಂಗ್ ಮಾಡ್ತಾಯಿದ್ದಾರೆ. ಹಾಗೋ, ಹೀಗೋ‌‌ ನಂಬಿಸಿ ರಮೇಶವರಿಂದ 55 ಸಾವಿರ ರೂ‌ ಆನ್ಲೈನ್‌ ಪೇಮೆಂಟ್ ವಸೂಲಿ ಮಾಡಿದ್ದಾರೆ. ಆದರೆ‌ ಫರ್ನಿಚರ್ ಗೆ ರೇಟ್ ಫಿಕ್ಸ್‌ ಮಾಡಿದ್ದು‌ ಮಾತ್ರ 80 ಸಾವಿರ ಬಾಕಿ ಹಣ ಹಾಕಿ ನಿಮ್ಮ ಫರ್ನಿಚರ್ ಕಳಿಸ್ತೀವಿ ಅಂತ ಇವತ್ತಿಗೂ ಫೋನ್ ಮಾಡ್ತಾಯಿದ್ದಾರೆ.

ಗದಗ ಸೈಬರ್ ಕ್ರೈಂ ಪೊಲೀಸ್ರು ದುಡ್ಡು ಮರಳಿ ಸಿಗೋದು ಗ್ಯಾರಂಟಿ ಇಟಕೊಬೇಡಿ‌ ಅಂತಿದ್ದಾರಂತೆ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಅವ್ರನ್ನು ಕೇಳಿದ್ರೆ, ನವೆಂಬರ್ 17 ದೂರು ದಾಖಲಾಗಿದೆ. ಆರ್ಮಿ, ಐಪಿಎಸ್ ಅಧಿಕಾರಿಗಳ ಹೆಸರಲ್ಲಿ ಫೇಕ್ ಅಕೌಂಟ್ ಕ್ರೇಟ್ ಮಾಡಿ, ಹಣ ಹಾಕಿಸಿಕೊಂಡು ಮೋಸ್ ಮಾಡಿದ್ದಾರೆ. ಈ ಕುರಿತು ತನಿಖೆ ಕೈಗೊಳ್ಳಾಗಿದೆ. ವಂಚಕರು ಫೇಕ್ ಮೊಬೈಲ್ ನಂಬರ್, ಅಕೌಂಟ್ ಉಪಯೋಗ ಮಾಡ್ತಾಯಿರೋದ್ರಿಂದ ಸ್ವಲ್ಪ ವಿಳಂಬ ಆಗುತ್ತೆ. ಈ ಕುರಿತು ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಆನ್ ಲೈನ್ ವಂಚಕರು ಇಷ್ಟು ದಿನ ಬೇರೆ ಬೇರೆ ಗಣ್ಯವ್ಯಕ್ತಿಗಳ ನಕಲಿ ಫೇಸ್ಬುಕ್ ಅಕೌಂಟ್ ಮಾಡಿ, ಬೇರೆ ಬೇರೆ ರೀತಿಯಲ್ಲಿ ವಂಚನೆ ಮಾಡ್ತಾಯಿದ್ರು. ಆದ್ರೆ, ಈಗ ಐಪಿಎಸ್ ಅಧಿಕಾರಿ ಹಾಗೂ ಮಿಲ್ಟ್ರಿ ಅಧಿಕಾರಿಗಳ ನಕಲಿ ಅಕೌಂಟ್ ಕ್ರೇಟ್ ಮಾಡಿ ವಂಚನೆ ಮಾಡಿದ್ದಾರೆ. ಹೀಗಾಗಿ ಆನ್ ಲೈನ್ ವಂಚಕರ ಬಗ್ಗೆ ಸಾರ್ವಜನಿಕರು ಅಲರ್ಟ್ ಆಗಿರಬೇಕು ಅಂತ ಎಎಸ್ಪಿ ಬಿ ಎಸ್ ನೇಮಗೌಡ ಎಚ್ಚರಿಕೆ ನೀಡಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದ್ರೂ ಜನ್ರು ಆನ್ ಲೈನ್ ಸೇರಿದಂತೆ ಬೇರೆ ಬೇರೆ ಮೋಸದ ಜಾಲಗಳಿಗೆ ಬಲಿಯಾಗ್ತಿರೋದು ವಿಪರ್ಯಾಸವೇ ಸರಿ. ಇನ್ನೂ ಉನ್ನತ ಪೊಲೀಸ್, ವಿಲ್ಟ್ರಿ ಅಧಿಕಾರಿಗಳ ಹೆಸ್ರಲ್ಲೂ ಈಗ ವಂನಚೆ ಜಾಲ ಎಕ್ಟಿವ್ ಆಗಿದೆ. ಹೀಗಾದ್ರೆ, ಆನ್ಲೈನ್ ವಂಚನೆಗೆ ಫುಲ್ ಸ್ಟಾಪ್ ಕಡಿವಾಣ ಯಾವಾಗ ಅನ್ನೋ ಪ್ರಶ್ನೆ ಸಾರ್ವಜನಿಕರ ಮಾಡ್ತಾಯಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.