ಹಾಸನ: ಕಾಡಾನೆಗಳ ಉಪಟಳ, ಎಚ್ಚರಿಕೆ ನೀಡಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗ್ರಾಮಸ್ಥರಿಂದ ಹಲ್ಲೆ
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಳವಾದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಕ್ಕೆ ಹೋಗಬೇಡಿ ಎಂದು ತಡೆದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬೇಲೂರು ತಾಲೂಕಿನ ಬಿಕ್ಕೋಡು-ಕೆಸಗೋಡು ರಸ್ತೆಯಲ್ಲಿ ಘಟನೆ ನಡೆದಿದೆ.
ಹಾಸನ ನ.25: ಜಿಲ್ಲೆಯಲ್ಲಿ ಕಾಡಾನೆಗಳ (Elephant) ಉಪಟಳ ಹೆಚ್ಚಳವಾದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಕ್ಕೆ ಹೋಗಬೇಡಿ ಎಂದು ತಡೆದ ಅರಣ್ಯ ಇಲಾಖೆ (Forest Department) ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬೇಲೂರು ತಾಲೂಕಿನ ಬಿಕ್ಕೋಡು-ಕೆಸಗೋಡು ರಸ್ತೆಯಲ್ಲಿ ಘಟನೆ ನಡೆದಿದೆ. ಆರ್‌ಆರ್‌ಟಿ ಹಾಗೂ ಈಟಿಎಫ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ. ಅಲ್ಲದೆ ಅರಣ್ಯ ಇಲಾಖೆಯ ಜೀಪ್ ಚಕ್ರದ ಗಾಳಿ ತೆಗೆಯಲು ಜನರು ಮುಂದಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಆನೆಗಳ ಬಗ್ಗೆ ಎಚ್ಚರಿಕೆ ನೀಡುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದುರ್ವರ್ತನೆ ತೋರುತ್ತಾರೆ. ಅಲ್ಲದೆ ನಮ್ಮನ್ನು ಏಕವಚನದಲ್ಲಿ ನಿಂದಿಸುತ್ತಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಇದೇ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ಹಾಸನ: ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಆಪರೇಷನ್ ಯಶಸ್ವಿ
ಕಾಡಾನೆ ಹಾವಳಿ: ಲಕ್ಷಾಂತರ ಮೌಲ್ಯದ ಭತ್ತ, ಕಬ್ಬು ನಾಶ
ಹಾವೇರಿ: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದೆ. ಆನೆಗಳ ಉಪಟಳ ಹಾನಗಲ್ ತಾಲುಕಿನ ಹಲವು ಗ್ರಾಮಗಳ ಜನರು ಬೇಸತ್ತು ಹೋಗಿದ್ದಾರೆ. ಗೊಂದಿ ಗ್ರಾಮದ ರವೀಂದ್ರಗೌಡ ಪಾಟೀಲ್ ಎಂಬ ರೈತನ ಜಮೀನಿಗೆ ನಾಲ್ಕು ಆನೆಗಳು ದಾಳಿ ಮಾಡಿದ್ದು, ಕಟಾವಿಗೆ ಬಂದ ಲಕ್ಷಾಂತರ ಮೌಲ್ಯದ ಭತ್ತ, ಕಬ್ಬು ನಾಶ ಮಾಡಿವೆ. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ನಾಲ್ಕು ಆನೆಗಳ ಹಿಂಡು ಗ್ರಾಮಕ್ಕೆ ಪ್ರವೇಶಿಸಿವೆ. ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ