ಊರಿನ‌ ಜನರೇ ಶಾಲೆಗೆ ಜಾಗ ನೀಡಿದ್ದಾರೆ, ಆದ್ರೆ ಅದೇ ಗ್ರಾಮದ ಕೆಲ ಕುಟುಂಬಗಳು ಅಲ್ಲಿ ಮನೆ ನಿರ್ಮಾಣ ಮಾಡಿಕೊಂಡಿವೆ! ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Jan 02, 2024 | 10:38 AM

ಗ್ರಾಮಸ್ಥರೇ ಸೇರಿಕೊಂಡು ಒಂದೂವರೆ ಎಕರೆ ಜಮೀನನ್ನು ಈ ಹಿಂದೆ ಖರೀದಿ ಮಾಡಿ, ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಮೈದಾನಕ್ಕೆ ಬಿಟ್ಟು ಕೊಟ್ಟಿದ್ರು. ಆದ್ರೆ ಕೆಲವು ಜನ್ರು ಶಾಲೆಯ ಮೈದಾನವನ್ನೆ ಒತ್ತುವರಿ ಮಾಡಿಕೊಂಡು, ಮನೆಗಳನ್ನು ನಿರ್ಮಾಣ ಮಾಡಿದ್ದಾರೆ.

ಊರಿನ‌ ಜನರೇ ಶಾಲೆಗೆ ಜಾಗ ನೀಡಿದ್ದಾರೆ, ಆದ್ರೆ ಅದೇ ಗ್ರಾಮದ ಕೆಲ ಕುಟುಂಬಗಳು ಅಲ್ಲಿ ಮನೆ ನಿರ್ಮಾಣ ಮಾಡಿಕೊಂಡಿವೆ! ಎಲ್ಲಿ?
ಊರಿನ ಜನ ಶಾಲೆಗೆ ಅಂತಾ ನೀಡಿದ್ದ ಜಾಗದಲ್ಲಿ ಉಳಿದವರು ಏನು ಮಾಡಿದರು ಗೊತ್ತ?
Follow us on

ಮಕ್ಕಳ ಶಿಕ್ಷಣಕ್ಕಾಗಿ ಇಡೀ ಊರಿನ‌ ಜನ್ರು ಹಣ ಸಂಗ್ರಹ ಮಾಡಿ ಶಾಲೆಗೆ ಜಾಗ (land) ದಾನ‌ ಮಾಡಿದ್ದಾರೆ. ಆದ್ರೆ, ಇದೇ ಗ್ರಾಮದ ಕುಟುಂಬ ಸರ್ಕಾರಿ ಶಾಲೆಯ (Government Primary School) ಆ ಜಾಗವನ್ನೇ ನುಂಗಿ ಭರ್ಜರಿ ಮನೆ ನಿರ್ಮಾಣ ಮಾಡಿದೆ. ಇಷ್ಟೆಲ್ಲಾ ಅದ್ರೂ ಶಿಕ್ಷಣ ಇಲಾಖೆ ಗಪ್ ಚುಪ್ ಆಗಿದೆ! ಹೀಗಾಗಿ ದಾನ ನೀಡಿದ ಗ್ರಾಮದ ಜನ್ರು ಶಿಕ್ಷಣ ಇಲಾಖೆ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಶಾಲೆ ಉಳಿಸಿ ಅಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಸಿದ್ದಾರೆ. ಶಿಕ್ಷಣ ಇಲಾಖೆ ಗಮನಕ್ಕೆ ತಂದ್ರೂ ಕ್ಯಾರೇ ಎನ್ನುತ್ತಿಲ್ಲ ಅಂತ ಗ್ರಾಮಸ್ಥರು ಕೆಂಡವಾಗಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಇತ್ತ ಕಣ್ತೆರೆದು ನೋಡಬೇಕು ಅಂತ ಒತ್ತಾಯಿಸಿದ್ದಾರೆ.

ಶಾಲೆ ಮೈದಾನದ ಅತಿಕ್ರಮ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು. ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಗ್ರಾಮಸ್ಥರ ಆಕ್ರೋಶ. ಶಾಲೆ ಮೈದಾನದಲ್ಲಿ ಮನೆಗಳ ನಿರ್ಮಾಣ. ಅಧಿಕಾರಿಗಳ ಗಮನಕ್ಕೆ ತಂದ್ರೂ ಡೋಂಟ್ ಕೇರ್. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಲು ಸರ್ಕಾರ ಸಾಕಷ್ಟು ಪ್ರಯತ್ನ ಮಾಡ್ತಾಯಿದೆ. ಆದ್ರೆ, ಈ ಗ್ರಾಮದ ಕೆಲವರು ತಮ್ಮೂರಿಗೆ ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಕೆಲವರು ಮನೆಗಳ ಕಾಮಗಾರಿ ಆರಂಭ ಮಾಡಿದ್ದಾರೆ. ಹೌದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ (Adarahalli, Lakshmeshwar taluk, Gadga) ಆದರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಈ ದೃಶ್ಯಗಳು ಕಂಡಿವೆ.

ಆದರಹಳ್ಳಿ ಸರ್ಕಾರಿ ಶಾಲೆಯಲ್ಲಿ 650 ವಿದ್ಯಾರ್ಥಿಗಳು ಅಭ್ಯಾಸ ಮಾಡ್ತಾಯಿದ್ದಾರೆ. ಒಂದರಿಂದ‌, ಹತ್ತನೇಯ ತರಗತಿಯವರೆಗೆ ಮಕ್ಕಳು ಅಭ್ಯಾಸ ಮಾಡ್ತಾರೆ, ಸರಿಯಾದ ಕೊಠಡಿಗಳ ಸೌಕರ್ಯ ಇಲ್ಲದೇ ಪರದಾಡುತ್ತಿದ್ದಾರೆ. ಆದ್ರೆ, ಸರ್ಕಾರಿ ಶಾಲೆಯನ್ನು ಉಳಿಸಬೇಕಾದ ಗ್ರಾಮದ ಕೆಲವು ಜನ್ರು ಒತ್ತುವರಿ ಮಾಡಿಕೊಂಡು, ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ ಸಮರ್ಪಕವಾಗಿ ಆಟವಾಡಲು ಮೈದಾನ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅತಿಕ್ರಮಣವಾಗಿ ಕಟ್ಟಿದ ಮನೆ, ನಿರ್ಮಾಣ ಹಂತದ ಮನೆಗಳು, ತಿಪ್ಪೆ ಗುಂಡಿಗಳನ್ನ ತೆರವು ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದಾರೆ.

ಗ್ರಾಮದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಅಂತ ಇಡೀ ಗ್ರಾಮದ ಜನ್ರು ಹಣ ಸಂಗ್ರಹ ಮಾಡಿ ಶಾಲೆಗೆ ಜಾಗ ದಾನ ಮಾಡಿದ್ದಾರೆ. ಆದ್ರೆ ಶಿಕ್ಷಣ ಇಲಾಖೆ ಜನ ದಾನ ಮಾಡಿದ ಜಾಗ ಉಳಿಸಬೇಕಾದ ಶಿಕ್ಷಣ ಇನ್ನೂ ಶಾಲೆಯ ಮೈದಾನವನ್ನು ಒತ್ತುವರಿ ಮಾಡಿರುವುದಕ್ಕೆ ಶಾಲಾ ಮಕ್ಕಳ ಜೊತೆಗೆ ಸ್ಥಳೀಯರು ಸಾಥ್ ನೀಡಿದ್ದಾರೆ. ಸರ್ಕಾರಿ ಶಾಲೆಯ ಜಾಗವನ್ನು ತೆರವು ಮಾಡುವಂತೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳು ಕೇರ್ ಮಾಡಿಲ್ಲ.

ಒಂದೂವರೆ ಎಕರೆ ಜಾಗದ ಮೈದಾನದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಜಾಗವನ್ನು ತೆರವು ಮಾಡಬೇಕೆಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವ್ರ ಆದರಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ಸಮಸ್ಯೆಯನ್ನು ಹೇಳಿಕೊಂಡಿದ್ರು. ಆದ್ರೆ, ಈವರಿಗೆ ತೆರವು ಕಾರ್ಯ ಮಾತ್ರ ಆಗಿಲ್ಲಾ. ಹೀಗಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಸರ್ಕಾರಿ ಅತಿಕ್ರಮಣ ಮಾಡಿದ ಜಾಗವನ್ನು ತೆರವು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಬರ್ತ್‌ಡೇ ಆಚರಿಸಿಕೊಳ್ಳಲು ಬೈಕ್​ ಮೇಲೆ ತೆರಳುತ್ತಿದ್ದವರು ಅಪಘಾತಕ್ಕೆ ಬಲಿ

ಇನ್ನೂ ಗ್ರಾಮಸ್ಥರೇ ಸೇರಿಕೊಂಡು ಒಂದೂವರೆ ಎಕರೆ ಜಮೀನನ್ನು ಈ ಹಿಂದೆ ಖರೀದಿ ಮಾಡಿ, ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಮೈದಾನಕ್ಕೆ ಬಿಟ್ಟು ಕೊಟ್ಟಿದ್ರು. ಆದ್ರೆ ಕೆಲವು ಜನ್ರು ಶಾಲೆಯ ಮೈದಾನವನ್ನೆ ಒತ್ತುವರಿ ಮಾಡಿಕೊಂಡು, ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಇವರಿಂದ ಬಹಳ ಕಿರಿಕಿರಿ ಆಗ್ತಾಯಿದೆ. ಹಾಗೇ ಮೈದಾನ ಇಲ್ಲದೆ ಆಟಕ್ಕೂ ಕೊಕ್ಕೆ ಬಿದ್ದಿದೆ. ಇನ್ನಾದರೂ ಶಿಕ್ಷಣ ಸಚಿವರು ಹಾಗೂ ಸರ್ಕಾರ ಎಚ್ಚೆತ್ತುಕೊಂಡು, ಅತಿಕ್ರಮಣ ತೆರವು ಮಾಡಿ, ಮಕ್ಕಳ ಆಟ ಪಾಠಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:34 am, Tue, 2 January 24