ಶತಮಾನ ಕಂಡ ಗದಗ ಮುನ್ಸಿಪಲ್ ಪ್ರೌಢಶಾಲೆ ಅವ್ಯವಸ್ಥೆಯ ಆಗರ, ಮುರುಕುಲ ಕೊಠಡಿಯಲ್ಲಿ ಮಕ್ಕಳಿಗೆ ಪಾಠ

ಗದಗ ನಗರದ ಹೃದಯ ಭಾಗದಲ್ಲಿರುವ ನಗರಸಭೆಯ ಮುನ್ಸಿಪಲ್ ಪ್ರೌಢಶಾಲೆ ಹೀನಾಯ ಸ್ಥಿತಿಗೆ ತಲುಪಿದೆ. ನಗರಸಭೆಯ ಪಕ್ಕದಲ್ಲಿಯೇ ಇದ್ದರೂ, ಮುನ್ಸಿಪಲ್ ಕಮಿಟಿಯ ಅಧ್ಯಕ್ಷರಾಗಲಿ ಅಥವಾ ನಗರಸಭೆ ಅಧ್ಯಕ್ಷರಾಗಲಿ ಈ ಶಾಲೆ ಕಡೆ ತಿರುಗಿ ನೋಡುತ್ತಿಲ್ಲ.

ಶತಮಾನ ಕಂಡ ಗದಗ ಮುನ್ಸಿಪಲ್ ಪ್ರೌಢಶಾಲೆ ಅವ್ಯವಸ್ಥೆಯ ಆಗರ, ಮುರುಕುಲ ಕೊಠಡಿಯಲ್ಲಿ ಮಕ್ಕಳಿಗೆ ಪಾಠ
ಗದಗ ಮುನ್ಸಿಪಲ್ ಪ್ರೌಢಶಾಲೆ
Follow us
| Updated By: ವಿವೇಕ ಬಿರಾದಾರ

Updated on: Nov 19, 2023 | 10:53 AM

ಗದಗ ನ.19: ಅದು ಶತಮಾನೋತ್ಸವ ಕಂಡ ಶಾಲೆ. ಈಗ ಆ ಶಾಲೆ ಸ್ಥಿತಿ ನೋಡಿದರೇ ಅಯ್ಯೋ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಎಂಥಾ ಸ್ಥಿತಿಗೆ ತಲುಪಿದೆ ಅಂತ ಗೋತ್ತಾಗುತ್ತೆ. ಇಲ್ಲಿ ಓದಿದ ಬಹುತೇಕರು ಇಂದು ರಾಜಕೀಯದಲ್ಲಿ, ಸಂಗೀತ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ, ಇಂತಹ ಐತಿಹಾಸಿಕ ಶಾಲೆ ಗದಗ (Gadag) ನಗರಸಭೆಯ ನಿರ್ಲಕ್ಷದಿಂದ ಅವ್ಯವಸ್ಥೆಯ ಆಗರವಾಗಿದೆ. ಬಡ ಮಕ್ಕಳ ಶಿಕ್ಷಣಕ್ಕೆ ಇಲ್ಲಿ ಕೊಡಲಿ ಪೆಟ್ಟು ಬಿಳುತ್ತಿದೆ. ಹೀಗಾಗಿ ಸ್ಥಳೀಯ ಶಾಸಕರೂ ಆದ ಕಾನೂನು ಸಚಿವ ಎಚ್ ಕೆ ಪಾಟೀಲ್ (HK Patil)​ ಅವರು ಶತಮಾನ ಕಂಡ ಈ ಶಾಲೆಯತ್ತ ಕಣ್ತೆರೆದು ನೋಡಬೇಕು ಅಂತ ಮಕ್ಕಳು ಒತ್ತಾಯಿಸಿದ್ದಾರೆ.

ದಶಕದ ಹಿಂದೆ ತುಂಬಿ ತುಳುಕುತ್ತಿದ್ದ ಶಾಲೆ, ಈಗ ಮಕ್ಕಳಿಲ್ಲದೇ ಭೀಕೋ ಎನ್ನುತ್ತಿದೆ. ಶತಮಾನ ಕಂಡ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ಯಾವಾಗ ಕುಸಿದು ಬಿಳುತ್ತೋ ಅನ್ನೋ ಸ್ಥಿತಿ ತಲುಪಿದೆ. ಇಂಥ ಹದಗೆಟ್ಟ ಕಟ್ಟಡದಲ್ಲೇ ಬಡ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ಹೌದು ಗದಗ ನಗರದ ಹೃದಯ ಭಾಗದಲ್ಲಿರುವ ನಗರಸಭೆಯ ಮುನ್ಸಿಪಲ್ ಪ್ರೌಢಶಾಲೆ ಹೀನಾಯ ಸ್ಥಿತಿಗೆ ತಲುಪಿದೆ. ನಗರಸಭೆಯ ಪಕ್ಕದಲ್ಲಿಯೇ ಇದ್ದರೂ, ಮುನ್ಸಿಪಲ್ ಕಮಿಟಿಯ ಅಧ್ಯಕ್ಷರಾಗಲಿ ಅಥವಾ ನಗರಸಭೆ ಅಧ್ಯಕ್ಷರಾಗಲಿ ಈ ಶಾಲೆ ಕಡೆ ತಿರುಗಿ ನೋಡುತ್ತಿಲ್ಲ.

ಕಳೆದ 3-4 ವರ್ಷಗಳ ಹಿಂದೆಯೇ ಗಾಳಿ-ಮಳೆಯ ಆರ್ಭಟಕ್ಕೆ ಮೇಲ್ಚಾವಣಿಗಳು ಹಾರಿಹೋಗಿವೆ. ಇವುಗಳನ್ನು ದುರಸ್ಥಿಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಇಂದಿಗೂ ಕೈ ಹಾಕುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಜೀವ ಭಯದಲ್ಲೇ ಪ್ರತಿನಿತ್ಯ ಪಾಠ ಕೇಳುವಂತ ದುಸ್ಥಿತಿ ಬಂದಿದೆ. ಮಳೆ ಬಂದರೆ ಮಕ್ಕಳ ಪಾಠಕ್ಕೆ ಕೊಕ್ಕೆ ಬೀಳುತ್ತೆ. ಶಾಲೆಯ ಕೊಠಡಿಗಳಲ್ಲಿ ಕುಳಿತು ಮೇಲೆ ನೋಡಿದರೆ ಆಕಾಶ ಕಾಣುತ್ತೆ. ಅಲ್ಲಲ್ಲಿ ಮೇಲ್ಛಾವಣಿಗಳು ಹಾರಿ ಹೋಗಿವೆ. ಸರ್ಕಾರದ ಅಧೀನದ ಶಾಲೆಯ ಕಟ್ಟಡವೇ ಹೀಗಿದೆಯಂದರೇ ಬಡ ಮಕ್ಕಳಿಗೆ ಎಂಥಾ ಗುಣಮಟ್ಟದ ಶಿಕ್ಷಣ ಸಿಗುತ್ತೆ ಎಂಬುವುದನ್ನು ನೀವೇ ಊಹಿಸಬಹುದು.

ಮಳೆ ಬಂದರೆ ನಮಗೆ ಪಾಠ ಕೇಳಲು ತುಂಬಾ ತೊಂದರೆ ಆಗುತ್ತದೆ. ನಮ್ಮ ಡ್ರಾಯಿಂಗ್ ಕೊಠಡಿ ಸಂಪೂರ್ಣವಾಗಿ ಹಾಳಾಗಿದೆ. ಕೂಡಲೇ ಸಂಬಂಧಪಟ್ಟವರು ಕಟ್ಟಡವನ್ನು ಸರಿಪಡಿಸಿ ನಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಅಂತ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ.

ದಶಕದ ಹಿಂದೆ ಮುನ್ಸಿಪಲ್ ಶಾಲೆ ಅಂದರೇ ಹೆಸರಾಗಿತ್ತು. ಆದರೆ, ಈಗ ಈ ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಮೂಲಭೂತ ಸೌಕರ್ಯ ಇಲ್ಲ. ಹದಗೆಟ್ಟ ಕಟ್ಟಡ, ಶಿಕ್ಷಕರ ಕೊರತೆ ಹೀಗಾಗಿ ಸಮಸ್ಯೆಗಳ ಆಗರದಲ್ಲಿ ಮುಳುಗಿ ಹೋದ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದೇ ಒದ್ದಾಡುತ್ತಿದ್ದಾರೆ. ಪ್ರೌಡ ಶಾಲೆಗೆ ವಿಶಾಲವಾದ ಮೈದಾನವಿದ್ದರೂ ಅದು ಕುಡುಕರ ಅಡ್ಡೆಯಾಗಿ ಬದಲಾಗಿದೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಸ್ವಚ್ಛಂದವಾಗಿದ್ದ ಮೈದಾನದಲ್ಲಿ ವಾಯು ವಿಹಾರಕ್ಕೆಂದು ಸಾರ್ವಜನಿಕರು ಆಗಮಿಸುತ್ತಿದ್ದರು. ಸಾಯಂಕಾಲ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಇತ್ತೀಚಿನ ದಿನಗಳಲ್ಲಿ ಕುಡುಕರ ದರ್ಶನವಾಗುತ್ತಿದ್ದರಿಂದ ವಾಯು ವಿಹಾರಿಗಳ ಸಂಖ್ಯೆಯು ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಮೈದಾನದ ಸುತ್ತಲೂ ಗಿಡ-ಗಂಟಿಗಳು ಬೆಳೆದಿವೆ. ಇಷ್ಟೆಲ್ಲಾ ಅವ್ಯವಸ್ಥೆ ಕಣ್ಣ ಮುಂದೆ ಇದ್ದರೂ ನಗರಸಭೆಯ ಆಡಳಿತ ಕಣ್ಣು ತೆರೆಯುತ್ತಿಲ್ಲ ಎನ್ನುವುದು ವಿಷಾದದ ಸಂಗತಿ.

ಇದನ್ನೂ ಓದಿ: ಮೈಸೂರು: ವರುಣ ಅಸೆಂಬ್ಲಿ ಕ್ಷೇತ್ರದ 5 ಸರ್ಕಾರಿ ಶಾಲೆಗಳ ವಸ್ತುಸ್ಥಿತಿ ಟಿವಿ 9 ರಿಯಾಲಿಟಿ ಚೆಕ್ ನಲ್ಲಿ ಅನಾವರಣಗೊಂಡಿರುವುದು ಹೀಗೆ

ಈ ಬಗ್ಗೆ ಪ್ರಾಚಾರ್ಯ ಎಸ್ ಎಸ್ ಕುಲಕರ್ಣಿ ಮಾತನಾಡಿ ನಾವು ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದೇವೆ. ವ್ಯವಸ್ಥೆ ಸರಿಪಡಿಸುವ ಭರವಸೆಯನ್ನು ಮುನ್ಸಿಪಲ್ ಕಮಿಟಿ ಅಧ್ಯಕ್ಷರು ನೀಡಿದ್ದಾರೆ. ಈ ಹಿಂದಿನ ಅಧ್ಯಕ್ಷರು ದುರಸ್ಥಿಗೊಳಿಸುವ ಭರವಸೆ ನೀಡಿದ್ದರು. ಈಗ ಅಧ್ಯಕ್ಷರು ಬದಲಾಗಿದ್ದಾರೆ. ಅವರಿಗೂ ಕೂಡ ಇಲ್ಲಿನ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಅತೀ ಶೀಘ್ರದಲ್ಲಿ ಮುನ್ಸಿಪಲ್ ಪ್ರೌಢಶಾಲೆಯ ವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಕಂಡಿದ್ದಾರೆ. ಗಾಂಧೀ ಜಯಂತಿ ದಿನದಂದು ಬಿದಿ-ಬಿದಿಗಳಲ್ಲಿ ಕಸಗೂಡಿಸುತ್ತಾರೆ. ನಗರದಲ್ಲಿ ಸಚಿವರು, ನಗರಸಭೆ ಅಧ್ಯಕ್ಷರಆದಿಯಾಗಿ ಹಿರಿಯ ಕಾಂಗ್ರೆಸ್, ಬಿಜೆಪಿ ಮುಖಂಡರು ರಸ್ತೆಯಲ್ಲಿ ಕಸಗೂಡಿಸುತ್ತಾರೆ. ಆದರೆ, ಇವರೆಲ್ಲರೂ ಒಮ್ಮೆ ನಗರದ ಮುನ್ಸಿಪನ್ ಪ್ರೌಡ ಶಾಲೆ ಕಡೆ ನೋಡುವ ಅವಶ್ಯಕತೆ ಇದೆ.

ಇಲ್ಲಿ ವಾರಕ್ಕೊಮ್ಮೆ ಕಸಗೂಡಿಸಲಾತ್ತದೆ ಅದು ಕೂಡ ವಿದ್ಯಾರ್ಥಿಗಳು ಕಸಗೂಡಿಸಬೇಕು ಇಲ್ಲದಿದ್ದರೆ ಅಡುಗೆ ಸಹಾಯಕರು ಗೂಡಿಸಬೇಕು. ಇಂತಹ ಪರಿಸ್ಥಿತಿ ಶತಮಾನೋತ್ಸವ ಕಂಡ ಶಾಲೆಗೆ ಬಂದಿದ್ದು ದುರ್ದೈವದ ಸಂಗತಿ. ಇನ್ನಾದರು ಸ್ಥಳೀಯ ಶಾಸಕರೂ ಆದ ಸಚಿವ ಎಚ್ ಕೆ ಪಾಟೀಲರು ಈ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಅನಕೂಲ ಮಾಡುತ್ತಾರಾ ಅಂತ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ