
ಗದಗ, ಮೇ 25: ಗದಗ (Gadag) ನಗರದ ಖಾನತೋಟ ಪ್ರದೇಶದ ಖಾನ್ ಸಾವಲಿ ದರ್ಗಾಕ್ಕೆ (Khan Savli Dargah) ಹಿಂದೂ, ಮುಸ್ಲಿಂ ಎನ್ನದೆ ಸರ್ವ ಧರ್ಮಿಯರು ಶ್ರದ್ಧಾ ಭಕ್ತಿಯಿಂದ ಹೋಗಿ ದರ್ಶನ ಪಡೆಯುತ್ತಾರೆ. ಅವರವರ ಸಂಪ್ರದಾಯದಂತೆ ಪೂಜೆ ಮಾಡುತ್ತಾರೆ. ಆದರೆ, ಈಗ ಖಾನ್ ಸಾವಲಿ ದರ್ಗಾ ಪಕ್ಕದಲ್ಲಿ, ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಇದು ಸ್ಥಳೀಯರ ಹಾಗೂ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸ್ಥಳದಲ್ಲಿ ಮಸೀದಿ ನಿರ್ಮಾಣವಾದರೆ, ನಾವು ದರ್ಗಾಕ್ಕೆ ಬರುವುದಿಲ್ಲ. ಆಗ ಒಂದು ಧರ್ಮದ ಜನರಿಗೆ ಮಾತ್ರ ದರ್ಗಾ ಸಮೀತವಾಗುತ್ತದೆ. ಹೀಗಾಗಿ, ಈ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಬಾರದು ಅಂತ ಪಟ್ಟು ಹಿಡದಿದ್ದಾರೆ.
ಸ್ಥಳೀಯರು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಮಸೀದಿ ನಿರ್ಮಾಣ ಮಾಡಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಇನ್ನು, ಖಾನತೋಟ ಪ್ರದೇಶದಲ್ಲಿನ ಖಾನ್ ಸಾವಲಿ ದರ್ಗಾಕ್ಕೆ ಸರ್ವ ಧರ್ಮಿಯರೂ ಹೋಗುತ್ತಿದ್ದೇವೆ. ಆದರೆ, ಈಗ ಮಸೀದಿ ನಿರ್ಮಾಣ ಮಾಡಿದರೆ, ನಮಗೆ ಹೋಗಲು ಆಗುವುದಿಲ್ಲ. ಮಸಿದಿ ಕಟ್ಟುವ ಸ್ಥಳದಲ್ಲಿ ಒಂದು ಮಂಗಲ ಕಾರ್ಯಾಲಯ ನಿರ್ಮಾಣ ಮಾಡಬೇಕು, ಆಗ ಹಿಂದೂ-ಮುಸ್ಲಿಂ ಎಲ್ಲರಿಗೂ ಅನುಕೂಲವಾಗುತ್ತದೆ. ಹಿಂದೂ-ಮುಸ್ಲಿಂ ಎಲ್ಲರನ್ನೂ ಸೇರಿಸಿಕೊಂಡು ಒಂದು ಟ್ರಸ್ಟ್ ರಚಿಸಿ. ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಹಿಂದೂ ಪರ ಸಂಘಟನೆಗಳು ಮುಖಂಡರು ಹೇಳಿದ್ದಾರೆ.
ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ನಗರಸಭೆ, ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ಅವರು ಏನಾದರೂ ಅವಕಾಶ ಮಾಡಿಕೊಟ್ಟರೆ ಖಾಲಿ ಜಾಗದಲ್ಲಿ ನಾವು ದೇವಸ್ಥಾನವನ್ನು ನಿರ್ಮಾಣ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪ ತಹಶೀಲ್ದಾರ್ ಅಮಾನತು
ಹತ್ತಾರು ವರ್ಷಗಳಿಂದ ಸರ್ವ ಧರ್ಮದ ಜನರು ಆರಾಧನೆ ಮಾಡುತ್ತಿದ್ದ, ದರ್ಗಾ ಪಕ್ಕದಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ. ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯ ಮಾಡಿದ್ದು, ನಗರಸಭೆ ಹಾಗೂ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕಾಗಿದೆ.