AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕನ ಹಿಂದೆ ಬಿದ್ದು ಹೆಣವಾದ ಮೂರು ಮಕ್ಕಳ ತಾಯಿ: ಲವ್ವಿಡವ್ವಿ ಕೊಲೆಯಲ್ಲಿ ಅಂತ್ಯ

ಆಕೆ ಮೂರು ಮಕ್ಕಳ ತಾಯಿ. ಆದ್ರೆ, ಕೆಲ ಕಾರಣಾಂತರಗಳಿಂದ ತಾಳಿ ಕಟ್ಟಿದ ಗಂಡನಿಂದ ದೂರವಾಗಿದ್ದಳು. ಹೀಗಾಗಿ ಒಂಟಿಯಾಗಿದ್ದ ಮಹಿಳೆ ಯುವಕನೋರ್ವ ಪರಿಚಯವಾಗಿದ್ದು, ಬಳಿಕ ಆತನ ಜೊತೆ ಲವ್ವಿಡವ್ವಿ ಶುರು ಸಹ ಶುರುವಾಗಿದೆ. ಜೋಡಿ ಸುತ್ತಾಡಿ ಮಸ್ತ್ ಮಜಾ ಮಾಡಿದ್ದಾರೆ. ಆದ್ರೆ, ಖತರ್ನಾಕ್ ಆಂಟಿ ಆಟಕ್ಕೆ ಯುವಕ ವಿಲವಿಲ ಅಂದಿದ್ದಾನೆ. ಹೀಗಾಗಿ ರೊಚ್ಚಿಗೆದ್ದ ಯುವಕ ಮಹಿಳೆಯನ್ನೇ ಕೊಲೆ ಮಾಡಿದ್ದಾನೆ. ಇನ್ನು ಈ ಮೂರು ಮಕ್ಕಳ ತಾಯಿ ಪ್ರೇಮದ ಬಲೆಗೆ ಬಿದ್ದು, ಬಳಿಕ ಹೆಣವಾಗಿದ್ದು, ಈ ಕೊಲೆ‌ ರಹಸ್ಯ ಬಯಲಾಗಿದ್ದೇ ರೋಚಕ.

ಯುವಕನ ಹಿಂದೆ ಬಿದ್ದು ಹೆಣವಾದ ಮೂರು ಮಕ್ಕಳ ತಾಯಿ: ಲವ್ವಿಡವ್ವಿ ಕೊಲೆಯಲ್ಲಿ ಅಂತ್ಯ
ಸುನಿಲ್​-ಲಕ್ಷ್ಮೀ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: May 16, 2025 | 6:12 PM

Share

ಗದಗ, (ಮೇ 16): ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ (lakshmeshwar) ತಾಲೂಕಿನ ಸೂರಣಗಿ ಗ್ರಾಮದ ಬಳಿ ಅನಾಮಧೇಯ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಮಹಿಳೆಯ ಮೊಬೈಲ್ ಕಾಲ್ ಬೆನ್ನಟ್ಟಿದ ಪೊಲೀಸರೇ ಬಿಗ್ ಶಾಕ್ ಆಗಿದ್ದಾರೆ. ಇನ್ನು ಸಹಜ ಸಾವು ಎಂದುಕೊಂಡ ಕುಟುಂಬಸ್ಥರು ಸಹ ಈಗ ಕಂಗಾಲಾಗಿದ್ದಾರೆ. ಹೌದು….ಏಪ್ರಿಲ್ 23ರಂದು ಲಕ್ಷ್ಮೀ ಇಂಗಳಗಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು, ಮೊಬೈಲ್​​ ಕರೆಗಳ ಹಿಸ್ಟರಿ ಜಾಲಾಡಿದಾಗ ಕೊಲೆಯ ಹಿಂದೆ ಪ್ರೇಮ ಕಥೆಯ ವಾಸನೆ ಬಂದಿದೆ. ಲಕ್ಷ್ಮೇಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ತಂಡ ಚಾಣಾಕ್ಷಣದಿಂದ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಯುವಕಮೊಂದಿಗೆ ಮಹಿಳೆ ಲವ್ವಿಡವ್ವಿ ಹಾಗೂ ಕೊಲೆ ಕಹಾನಿ ಬಯಲಿಗೆ ಬಂದಿದೆ.

ಅದು 2025 ಏಪ್ರಿಲ್ 23 ರಂದು ಸೂರಣಗಿ ಗ್ರಾಮದ ದೊಡ್ಡೂರ ರಸ್ತೆಯ ಬಯಲು ಬಸವೇಶ್ವರ ದೇವಸ್ಥಾನ ಬಳಿ 35ವರ್ಷದ ಮಹಿಳೆ ಅನಾಮಧೆಯ ಶವ ಪತ್ತೆಯಾಗಿತ್ತು. ಮಹಿಳೆ ಶವಪತ್ತೆಯಾದ ಸುದ್ದಿ ಗ್ರಾಮದಲ್ಲಿ ಹಬ್ಬುತ್ತಿದ್ದಂತೆ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಗಾಬರಿಯಾದ ಸೂರಣಗಿ ಗ್ರಾಮಸ್ಥರು ತಕ್ಷಣ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಲಕ್ಷ್ಮೇಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ಮತ್ತು ತಂಡ ಪರಿಶೀಲನೆ ಮಾಡಿತ್ತು. ಆ ವೇಳೆ ಇದು ಸಹಜ ಸಾವಲ್ಲ ಪಕ್ಕಾ ಕೊಲೆ ಅನ್ನೋ ಅನುಮಾನ ಮೂಡಿತ್ತು.

ಇದನ್ನೂ ನೋಡಿ: ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಚಾಕುವಿನಿಂದ ಇರಿಯುತ್ತಿರುವ ಭಯಾನಕ ವಿಡಿಯೋ

ಆ ಒಂದು ಸುಳಿವಿನಿಂದ ಹಂತಕ ಪತ್ತೆ

ಬಳಿಕ ಪ್ರಕರಣ ತನಿಖೆ ಚುರುಕುಗೊಳಿಸಿದಾಗ ವಾರದ ಬಳಿಕ ಕೊಲೆಯಾದ ಮಹಿಳೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನೇಲೊಗಲ್ ಗ್ರಾಮದ ಲಕ್ಷ್ಮೀ ಇಂಗಳಗಿ ಅಂತ ಗೋತ್ತಾಗಿದೆ. ಆಗ ಮೃತಳ ಸಹೋದರಿ ಸಾವಿನಲ್ಲಿ ಅನುಮಾನ ಇದೆ ಎಂದು ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ತನಿಕೆ ಕೈಗೊಂಡ ಪೊಲೀಸರಿಗೆ ಅದೊಂದು ಫೋನ್​​ನ ಒಂದು ಸಣ್ಣ ಸುಳಿವು ಸಿಕ್ಕಿತ್ತು. ಅದೇ ಸುಳಿವಿನ ಮೇರೆ ತನಿಖೆ ನಡೆಸಿದ ಪೊಲಿಸರಿಗ ಹಂತಕ ಇತಿಹಾಸವೇ ಸಿಕ್ಕಿದೆ.

ಇದನ್ನೂ ಓದಿ
Image
ರಾಮನಗರದಲ್ಲಿ ಅಮಾನುಷ ಕೃತ್ಯ: ಅತ್ಯಾಚಾರ ಎಸಗಿ ಮೂಕ ಬಾಲಕಿ ಕೊಲೆ ಆರೋಪ
Image
9ನೇ ತರಗತಿ ಸ್ನೇಹಿತನನ್ನೇ ಇರಿದು ಕೊಂದ 6ನೇ ಕ್ಲಾಸ್ ಬಾಲಕ: ಪೊಲೀಸರೇ ಶಾಕ್​​
Image
ಮಗಳ ಸಾವಿಗೆ ಪ್ರತೀಕಾರ: ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಕೊಂದ!
Image
ಕಣ್ಮುಚ್ಚಿ ಬಿಡುವಷ್ಟರಲ್ಲೇ ಕಗ್ಗೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್!

ಯುವಕನಿಗೆ ಹಣಕ್ಕಾಗಿ ಬ್ಲ್ಯಾಕ್​ಮೇಲ್

ಇನ್ನೂ ಕೊಲೆಯಾದ ಲಕ್ಷ್ಮೀಗೆ ಮೂವರು ಮಕ್ಕಳಿದ್ದಾರೆ. ಆದ್ರೆ ಗಂಡನಿಂದ ಲಕ್ಷ್ಮೀ ದೂರವಾಗಿದ್ದಳು ಬದುಕು ಸಾಗಿಸಲು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆ ವೇಳೆಯಲ್ಲಿ ಹಾವೇರಿ ಜಿಲ್ಲೆಯ ಸುನಿಲ್ ಎನ್ನುವ ಹದಿಹರೆಯದ ಯುವಕ ಪರಿಚಯವಾಗಿದ್ದು, ಇಬ್ಬರು ನಡುವೆ ಲವ್ ಆಗಿದೆ. ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧ ಸಹ ಬೆಳೆದಿತ್ತು. ಆದ್ರೆ 30 ವರ್ಷದ ಸುನೀಲ್ ಮದುವೆ ಮಾಡಲು ಅವರ ಕುಟುಂಬಸ್ಥರು ತಯಾರಿ ನಡೆಸಿದ್ದರು. ಅದೇ ವೇಲೆ ಲಕ್ಷ್ಮೀ 5 ಲಕ್ಷ ಹಣ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇಲ್ಲವಾದರೆ ನಮ್ಮ ಅನೈತಿಕ ಸಂಬಂಧ ವಿಷಯ ಬಹಿರಂಗ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಆರಂಭ ಮಾಡಿದ್ದಾಳೆ.

ಕಾರಿನಲ್ಲಿ ಕರೆದೊಯ್ದು ಹತ್ಯೆ

ಲಕ್ಷ್ಮೀಯ ಬ್ಲ್ಯಾಕ್​​ಮೇಲ್​ನಿಂದ ಕಂಗಾಲಾದ ಯುವಕ, ಸುನೀಲ್ ಗೆಳೆಯರಾದ ಸಿದ್ದಪ್ಪ, ನಟರಾಜ್, ರಮೇಶ ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದರಂತೆ ಏಪ್ರಿಲ್ 22 ರಂದು ಲಕ್ಷ್ಮೀಯನ್ನು ಕಾರಿನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಕೇಬಲ್ ವೈಯರಿನಿಂದ ಕುತ್ತಿಗೆಗೆ ಬಿಗಿದು ಕೊಲೆ‌‌‌‌ ಮಾಡಿದ್ದಾರೆ. ನಂತರ ಮೃತ ದೇಹವನ್ನು ಸೂರಣಗಿ ಬಳಿ ಎಸೆದು ಪರಾರಿಯಾಗಿದ್ದರು. ಸದ್ಯ ಪೊಲೀಸರು ಚಾಣಾಕ್ಷಣದಿಂದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಎಡೆಮುರಿಕಟ್ಟಿದ್ದಾರೆ. ಇನ್ನು ಕಾರು, ಮೊಬೈಲ್, ಕತ್ತು ಹಿಸುಕಲು ಬಳಸಿದ್ದ ಕೇಬಲ್ ವೈರ್​ ಅನ್ನು ವಶಕ್ಕೆ ಪಡೆದು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

ಒಟ್ಟಿನಲ್ಲಿ ಮೂರು ಮಕ್ಕಳ ತಾಯಿ ಮದುವೆ ಆಗದ ಯವಕನನ್ನು ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡಲು‌ ಹೋಗಿ ಹೆಣವಾಗಿದ್ದಾಳೆ. ಇನ್ನು ಮದುವೆ ಮಾಡಿಕೊಂಡು ಸುಂದರ ಜೀವನ ನಡೆಸಬೇಕಾದ ಯುವಕ, ಮಹಿಳೆ ಹಿಂದೆ ಬಿದ್ದು ಇದೀಗ ಜೈಲು ಸೇರಿದ್ದಾನೆ. ಹಾಗೇ ಸ್ನೇಹಿತನಿಗೆ ಸಹಾಯ ಮಾಡಲೂ ಹೋದ ಮೂವರು ಗೆಳೆಯಸರು ಸಹ ಜೈಲಿನಲ್ಲಿ ಮುದ್ದಿ ಮುರಿಯುವಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ