Gadag News: ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಾಯಿ; ಸಾವಿನಲ್ಲೂ ಒಂದಾದ ತಾಯಿ ಮಗ

| Updated By: ವಿವೇಕ ಬಿರಾದಾರ

Updated on: Dec 30, 2022 | 9:12 PM

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಮಗನ ಸಾವಿನ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

Gadag News: ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಾಯಿ; ಸಾವಿನಲ್ಲೂ ಒಂದಾದ ತಾಯಿ ಮಗ
ಬಸಮ್ಮ ಅಂದಾನಯ್ಯ ಪೂಜಾರ್, ಶಿವರುದ್ರಯ್ಯ ಅಂದಾನಯ್ಯ ಪೂಜಾರ್
Follow us on

ಗದಗ: ತನ್ನ ಮಕ್ಕಳಿಗೆ ಸ್ವಲ್ಪ ನೋವಾದರೆ ಸಾಕು ತಾಯಿ ಬಹಳ ಮರಗುತ್ತಾಳೆ. ತಾಯಿಯ ಕರಳು ಹಾಗೇ, ಮಕ್ಕಳು ಎಷ್ಟೇ ದೊಡ್ಡವರಾದರು ಹೆತ್ತ ಕರಳಿಗೆ ಸಣ್ಣ ಮಕ್ಕಳು. ಪುತ್ರ ಶೋಕಂ ನಿರಂತರಂ ಎಂಬಂತೆ ತಂದೆ-ತಾಯಿ ಕಣ್ಮುಂದೆ ಮಕ್ಕಳು ಸಾವನ್ನಪ್ಪಬಾರದೆನ್ನುತ್ತಾರೆ. ಆದರೆ ಗದಗ (Gadag) ಜಿಲ್ಲೆಯ ಗಜೇಂದ್ರಗಡ (Gajendragad) ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಮಗನ (Son) ಸಾವಿನ ಸುದ್ದಿ ಕೇಳಿ ತಾಯಿ (Mother) ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಇದರೊಂದಿಗೆ ತಾಯಿ, ಮಗ ಸಾವಿನಲ್ಲೂ ಒಂದಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಶಿವರುದ್ರಯ್ಯ ಅಂದಾನಯ್ಯ ಪೂಜಾರ್ (38) ಮೃತಪಟ್ಟಿದ್ದರು. ಮಗನ ಸಾವಿನ ಸುದ್ದಿ ಕೇಳಿ, ಬಸಮ್ಮ ಅಂದಾನಯ್ಯ ಪೂಜಾರ್ (68) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಾಯಿ ಹಾಗೂ ಮಗನ ಸಾವಿನಿಂದ ಇಡೀ ಗ್ರಾಮದಲ್ಲಿ ಶೋಕ ಸಾಗರದಲ್ಲಿ ಮುಳಗಿದೆ. ತಾಯಿ ಹಾಗೂ ಮಗನ ಶವಗಳಿಗೆ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:08 pm, Fri, 30 December 22