ಗದಗ: ಮಗು ಜತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ ಯತ್ನ ಪ್ರಕರಣ; ಮಲಪ್ರಭಾ ನದಿಯಲ್ಲಿ ಮಗುವಿನ ಶವ ಪತ್ತೆ

| Updated By: preethi shettigar

Updated on: Oct 01, 2021 | 1:17 PM

ಅಗ್ನಿಶಾಮಕ ದಳ ಮತ್ತು ಎನ್​ಡಿಆರ್​ಎಫ್​ ತಂಡ ಮಗುವಿನ ಶವವನ್ನು ಹೊರತೆಗೆದಿದ್ದಾರೆ. ಕೊರೊನಾದಿಂದ ಪತಿ ಸಂಗಮೇಶ ಸಾವು ಹಿನ್ನೆಲೆ ಖಿನ್ನತೆಗೆ ಒಳಗಾಗಿದ್ದ ಉಮಾದೇವಿ, ಶ್ರೇಷ್ಠಾ ಜತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಇಬ್ಬರು ಹೆಣ್ಣು ಮಕ್ಕಳು ಕೂಡ ಪರಾಗಿದ್ದರು.

ಗದಗ: ಮಗು ಜತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ ಯತ್ನ ಪ್ರಕರಣ; ಮಲಪ್ರಭಾ ನದಿಯಲ್ಲಿ ಮಗುವಿನ ಶವ ಪತ್ತೆ
ಕುರುವಿನಕೊಪ್ಪಳ ಗ್ರಾಮದ ಬಳಿ ಮಗು ಶ್ರೇಷ್ಠಾ ಶವ ಪತ್ತೆ
Follow us on

ಗದಗ: ಮಗು ಜತೆ ನದಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 3 ದಿನಗಳ ನಂತರ ನದಿಯಲ್ಲಿ ಶ್ರೇಷ್ಠಾ(4) ಮೃತದೇಹ ಪತ್ತೆಯಾಗಿದೆ. ಸೆ.29ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ನದಿಗೆ ತಾಯಿ ಮತ್ತು ಮಗು ಹಾರಿದ್ದರು. ಅದೃಷ್ಟವಶಾತ್ ತಾಯಿ ನದಿಯ ಉಮಾದೇವಿಯನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಇಂದು ಕುರುವಿನಕೊಪ್ಪಳ ಗ್ರಾಮದ ಬಳಿ ಮಗು ಶ್ರೇಷ್ಠಾ ಶವ ಪತ್ತೆಯಾಗಿದೆ.

ಅಗ್ನಿಶಾಮಕ ದಳ ಮತ್ತು ಎನ್​ಡಿಆರ್​ಎಫ್​ ತಂಡ ಮಗುವಿನ ಶವವನ್ನು ಹೊರತೆಗೆದಿದ್ದಾರೆ. ಕೊರೊನಾದಿಂದ ಪತಿ ಸಂಗಮೇಶ ಸಾವು ಹಿನ್ನೆಲೆ ಖಿನ್ನತೆಗೆ ಒಳಗಾಗಿದ್ದ ಉಮಾದೇವಿ, ಶ್ರೇಷ್ಠಾ ಜತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಇಬ್ಬರು ಹೆಣ್ಣು ಮಕ್ಕಳು ಪರಾಗಿದ್ದರು.

ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರು
ಹೊಸ ಮನೆ ಕಟ್ಟಲು ಮಾಡಿದ್ದ ಸುಮಾರು 20 ಲಕ್ಷ ರೂಪಾಯಿ ಸಾಲ ಮತ್ತು ಪತಿ ಕೊರೊನಾದಿಂದ ಮೃತಪಟ್ಟಿದ ಬಳಿಕ ಧೃತಿಗೆಟ್ಟಿದ್ದ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಸೆ. 29 ರಂದು ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾಜಾ ವರದಿಗಳು ತಿಳಿಸಿವೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ಮಲಪ್ರಭಾ ನದಿಗೆ ಮಕ್ಕಳ ಜತೆ ನದಿಗೆ ಹಾರಿದ್ದ ಮಹಿಳೆ ಉಮಾದೇವಿ ಮುಳ್ಳಿನ ಪೊದೆಯಲ್ಲಿ ಸಿಲುಕಿದ್ದು, ಸಾವಂಚಿನಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಂದ ಮಹಿಳೆಯ ರಕ್ಷಣೆಯಾಗಿದೆ. ಈ ಮಧ್ಯೆ, ನೀರುಪಾಲಾಗಿರುವ ಮಗುವಿಗಾಗಿ ಶೋಧ ಕಾರ್ಯ ಮುಂದಿವರಿದಿತ್ತು.

ರಾತ್ರೀಯಿಡಿ ನಡುಗುವ ಚಳಿಯಲ್ಲಿ ಗಿಡದಲ್ಲಿ ಸಿಲುಕಿದ್ದ ಎಂಟು ಗಂಟೆ ಹೋರಾಟದ ಬಳಿಕ ಉಮಾದೇವಿ ಬದುಕಿ ಬಂದಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆರು ಗಂಟೆ ಕಾರ್ಯಾಚಾರಣೆ ನಡೆಸಿ ಮಹಿಳೆಗಾಗಿ ಶೋಧ ಮಾಡಿದ್ದರು. ಈ ಮಧ್ಯೆ ಮಗುವಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದರು.

ಸೆ.29 ರಂದು ನಸುಕಿನ ಜಾವ ಮಗುವಿನೊಂದಿಗೆ ನದಿಗೆ ಹಾರಿದ್ದ ತಾಯಿ ಕುರುವಿನಕೊಪ್ಪ ಗ್ರಾಮದ ಬಳಿ ಮುಳ್ಳಿನ ಗಿಡದಲ್ಲಿ ಸಿಲುಕಿದ್ದರು. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.

ಇದನ್ನೂ ಓದಿ:
ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರು, ಮಗುವಿಗಾಗಿ ಶೋಧ

ಕೊವಿಡ್‌ಗೆ ಪತಿ ಬಲಿ: ಮಗಳಿಗೆ ನೇಣು ಬಿಗಿದು ಪತ್ನಿಯೂ ಆತ್ಮಹತ್ಯೆಗೆ ಯತ್ನ, 12 ವರ್ಷದ ಮಗಳು ಸಾವು

Published On - 1:10 pm, Fri, 1 October 21