ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರು, ಮಗುವಿಗಾಗಿ ಶೋಧ
ಇದೀಗ ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾಜಾ ವರದಿಗಳು ತಿಳಿಸಿವೆ.
ಗದಗ: ಹೊಸ ಮನೆ ಕಟ್ಟಲು ಮಾಡಿದ್ದ ಸುಮಾರು 20 ಲಕ್ಷ ರೂಪಾಯಿ ಸಾಲ ಮತ್ತು ಪತಿ ಕೊರೊನಾದಿಂದ ಮೃತಪಟ್ಟಿದ ಬಳಿಕ ಧೃತಿಗೆಟ್ಟಿದ್ದ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾಜಾ ವರದಿಗಳು ತಿಳಿಸಿವೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ಮಲಪ್ರಭಾ ನದಿಗೆ ಮಕ್ಕಳ ಜತೆ ನದಿಗೆ ಹಾರಿದ್ದ ಮಹಿಳೆ ಉಮಾದೇವಿ ಮುಳ್ಳಿನ ಪೊದೆಯಲ್ಲಿ ಸಿಲುಕಿದ್ದು, ಸಾವಂಚಿನಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಂದ ಮಹಿಳೆಯ ರಕ್ಷಣೆಯಾಗಿದೆ. ಈ ಮಧ್ಯೆ, ನೀರುಪಾಲಾಗಿರುವ ಮಗುವಿಗಾಗಿ ಶೋಧ ಕಾರ್ಯ ಮುಂದಿವರಿದಿದೆ.
ರಾತ್ರೀಯಿಡಿ ನಡುಗುವ ಚಳಿಯಲ್ಲಿ ಗಿಡದಲ್ಲಿ ಸಿಲುಕಿದ್ದ ಎಂಟು ಗಂಟೆ ಹೋರಾಟದ ಬಳಿಕ ಉಮಾದೇವಿ ಬದುಕಿ ಬಂದಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆರು ಗಂಟೆ ಕಾರ್ಯಾಚಾರಣೆ ನಡೆಸಿ ಮಹಿಳೆಗಾಗಿ ಶೋಧ ಮಾಡಿದ್ದರು. ಈ ಮಧ್ಯೆ ಮಗುವಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇಂದು ನಸುಕಿನ ಜಾವ ಮಗುವಿನೊಂದಿಗೆ ನದಿಗೆ ಹಾರಿದ್ದ ತಾಯಿ ಕುರುವಿನಕೊಪ್ಪ ಗ್ರಾಮದ ಬಳಿ ಮುಳ್ಳಿನ ಗಿಡದಲ್ಲಿ ಸಿಲುಕಿದ್ದರು. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.
20 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಕುಟುಂಬದಲ್ಲಿ ನಡೀತು ದುರಂತ | Tv9kannada
ಇದನ್ನೂ ಓದಿ:
20 ಲಕ್ಷ ಸಾಲ ಮಾಡಿಕೊಂಡಿದ್ದ ಕುಟುಂಬದಲ್ಲಿ ದುರಂತ: ನದಿಗೆ ಹಾರಿ ತಾಯಿ-ಮಗು ಆತ್ಮಹತ್ಯೆ; ಇಬ್ಬರು ಮಕ್ಕಳು ಬಚಾವ್
(due to loan problems mother who jumped into malaprabha river at ron gadag saved)
Published On - 1:00 pm, Wed, 29 September 21