ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ; ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು
ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ, ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು. ಮೈಸೂರಿನ ಬೋಗಾದಿಯಲ್ಲಿ ಘಟನೆ ನಡೆದಿದೆ. ಬೋಗಾದಿ ನಿವಾಸಿ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಮಾದೇವಿ (62) ನೇಣಿಗೆ ಶರಣಾದವರು.
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಅತ್ತೆ ಮತ್ತೆ ಸೊಸೆ ಕಿತ್ತಾಟ ನಡೆಸಿದ್ದು ಸೊಸೆಗೆ ಅತ್ತೆ ಚಾಕುವಿನಿಂದ ಚುಚ್ಚಿದ್ದಾರೆ. ಬಳಿಕ ಚಾಕು ಚುಚ್ಚಿದ ವಿಚಾರ ಎಲ್ಲರಿಗೂ ತಿಳಿಯಿತೆಂದು ಅಂಜಿದ ಅತ್ತೆ ನೇಣಿಗೆ ಶರಣಾಗಿದ್ದಾರೆ. ಮೈಸೂರಿನ ಬೋಗಾದಿಯಲ್ಲಿ ಈ ಘಟನೆ ನಡೆದಿದೆ. ಬೋಗಾದಿ ನಿವಾಸಿ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಮಾದೇವಿ (62) ನೇಣಿಗೆ ಶರಣಾದವರು.
ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆಯ ನಡುವೆ ಮಾತಿಗೆ ಮಾತು ಬೆಳೆದಿತ್ತು. ಆ ಕೋಪದಲ್ಲಿ ಸೊಸೆ ವೇದಾವತಿಗೆ ಅತ್ತೆ ಮಾದೇವಿ ಚಾಕುವಿನಿಂದ ಚುಚ್ಚಿದ್ದರು. ಆಕೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು, ಹೊರಗಡೆಯಿದ್ದ ಮಗ ಕೂಡ ಓಡಿ ಬಂದಿದ್ದರು.
ಗಾಯಗೊಂಡ ವೇದಾವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಸೆಯನ್ನು ಆಸ್ಪತ್ರೆಗೆ ಕರೆದೊಯ್ದು ವೇಳೆ ಅತ್ತೆ ಮಾದೇವಿ ಪೊಲೀಸರಿಗೆ ಹೆದರಿ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರು, ಮಗುವಿಗಾಗಿ ಶೋಧ
ಇದನ್ನೂ ಓದಿ: ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಆರ್ಡರ್ ಮಾಡಿದ್ದು ಮೈಸೂರು ಜಿಲ್ಲಾಧಿಕಾರಿ; ತಹಶೀಲ್ದಾರ್ ಅಲ್ಲ!
Published On - 1:32 pm, Wed, 29 September 21