ಈ ಸಲ ಕಪ್ ನಮ್ದೇ; ಚಾಮುಂಡಿಬೆಟ್ಟದಲ್ಲಿ ಆರ್​ಸಿಬಿ ಅಭಿಮಾನಿಗಳಿಂದ ಪೂಜೆ, ವಿಡಿಯೋ ವೈರಲ್

Ee Sala Cup Namde: ಇಂದು ಮುಂಜಾನೆ ಚಳಿಯಲ್ಲೇ ಎದ್ದು ಆರ್ಸಿಬಿ ಅಭಿಮಾನಿಗಳು ಮೈಸೂರಿನ ಚಾಮುಂಡಿ ಬೆಟ್ಟದ ಗೋಪುರದ ಬಳಿ ಆರ್ಸಿಬಿ ಫ್ಲ್ಯಾಗ್ ಹಾರಿಸಿ ನಾಡ ದೇವತೆಗೆ ಕರ್ಪೂರ ಬೆಳಗಿ ತೆಂಗಿನ ಕಾಯಿ ಹೊಡೆದು ಈ ಸಲ ಕಪ್ ನಮ್ದೆ ಎಂದು ಕೂಗುತ್ತ ಪೂಜೆ ಸಲ್ಲಿಸಿದ್ದಾರೆ.

ಈ ಸಲ ಕಪ್ ನಮ್ದೇ; ಚಾಮುಂಡಿಬೆಟ್ಟದಲ್ಲಿ ಆರ್​ಸಿಬಿ ಅಭಿಮಾನಿಗಳಿಂದ ಪೂಜೆ, ವಿಡಿಯೋ ವೈರಲ್
ಈ ಸಲ ಕಪ್ ನಮ್ದೆ; ಚಾಮುಂಡಿಬೆಟ್ಟದಲ್ಲಿ ಆರ್ಸಿಬಿ ಅಭಿಮಾನಿಗಳಿಂದ ಪೂಜೆ, ವಿಡಿಯೋ ವೈರಲ್
Follow us
TV9 Web
| Updated By: ಆಯೇಷಾ ಬಾನು

Updated on:Sep 29, 2021 | 8:39 AM

ಮೈಸೂರು: ಈ ಸಲ ಕಪ್ ನಮ್ದೇ(Ee Sala Cup Namde) ಈ ಡೈಲಾಗ್ ಮೂಲಕ ಆರ್ಸಿಬಿ ಫ್ಯಾನ್ಸ್‌ಗಳು ಒಂದಲ್ಲ ಒಂದು ರೀತಿ ಹವಾ ಎಬ್ಬಿಸುತ್ತಲೇ ಇರುತ್ತಾರೆ. ಇದೀಗ ಮೈಸೂರಿನ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಆರ್ಸಿಬಿ ಫ್ಯಾನ್ಸ್‌ಗಳು ತೆರಳಿ ತಾಯಿಗೆ ಪೂಜೆ ಸಲ್ಲಿಸಿ ಈ ಸಲ ಕಪ್ ಗೆಲ್ಲಿಸುವಂತೆ ಪ್ರಾರ್ಥಿಸಿದ್ದಾರೆ.

ಇಂದು ಮುಂಜಾನೆ ಚಳಿಯಲ್ಲೇ ಎದ್ದು ಆರ್ಸಿಬಿ ಅಭಿಮಾನಿಗಳು ಮೈಸೂರಿನ ಚಾಮುಂಡಿ ಬೆಟ್ಟದ ಗೋಪುರದ ಬಳಿ ಆರ್ಸಿಬಿ ಫ್ಲ್ಯಾಗ್ ಹಾರಿಸಿ ನಾಡ ದೇವತೆಗೆ ಕರ್ಪೂರ ಬೆಳಗಿ ತೆಂಗಿನ ಕಾಯಿ ಹೊಡೆದು ಈ ಸಲ ಕಪ್ ನಮ್ದೆ ಎಂದು ಕೂಗುತ್ತ ಪೂಜೆ ಸಲ್ಲಿಸಿದ್ದಾರೆ. ಸದ್ಯ ಪೂಜೆಯ ವಿಡಿಯೋ ಸಖತ್ ವೈರಲ್ ಆಗಿದೆ.

ಆರ್ಸಿಬಿ ಫ್ಲ್ಯಾಗ್ ಹಿಡಿದು ಮಂಗಳಾರತಿ ಮಾಡಿ ಈಡುಗಾಯಿ ಹೊಡೆದ ಆರ್ಸಿಬಿ ಫ್ಯಾನ್ಸ್‌ಗಳು ಚಿಕ್ಕದೊಂದು ಕಪ್‌ನ್ನು ಗೋಪುರಕ್ಕೆ ತೋರಿಸಿ ತಾಯಿ ಕೋಪ ಬಿಡು ಕಪ್ ಗೆಲ್ಲಿಸು ಅಂತಾ ಪ್ರಾರ್ಥಿಸಿದ್ದಾರೆ. ನಮ್ಮನ್ನು ನೋಡಿ ಹೊಟ್ಟೆ ಉರ್ಕೊಳ್ಳವರೆಲ್ಲ ಈ ಸತಿ ಉಜ್ಕೋ ಬೇಕು ಬಾಯಿ. ಸೋತ್ರು, ಗೆದ್ರು ಅಂಕಲ್ ಮಕ್ಳು ನಾವು ಹೇಳೋದೊಂದೆ ಈ ಸಲ ಕಪ್ ನಮ್ದೆ ಎಂದು ಕೂಗಿ ಈಡುಗಾಯಿ ಹೊಡೆದು ಈ ಸಲವಾದರೂ ಆರ್ಸಿಬಿ ಗೆಲ್ಲಿಸುವಂತೆ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: IPL 2021: ಕಳೆದ ಐಪಿಎಲ್​ನಲ್ಲಿ ಕೊಹ್ಲಿ- ಡಿವಿಲಿಯರ್ಸ್​ ಪರಾಕ್ರಮ ನೆನಪಿಸಿ ರಾಜಸ್ಥಾನದ ಕಾಲೆಳೆದ ಆರ್​ಸಿಬಿ ಅಭಿಮಾನಿಗಳು

IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್

Published On - 8:01 am, Wed, 29 September 21