ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಆರ್ಡರ್ ಮಾಡಿದ್ದು ಮೈಸೂರು ಜಿಲ್ಲಾಧಿಕಾರಿ; ತಹಶೀಲ್ದಾರ್ ಅಲ್ಲ!
ಈ ಹಿಂದೆ ದೇಗುಲ ಬೀಳಿಸುವುದಕ್ಕೆ ಆರ್ಡರ್ ಮಾಡಿದ್ದು ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ಎಂದು ಭಾವಿಸಿ, ಸರ್ಕಾರ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿರುವುದು ಸೋಜಿಗವಾಗಿದೆ. ಅಷ್ಟೇ ಅಲ್ಲ; ದೇವಸ್ಥಾನ ಬೀಳಿಸುವುದು ಬೇಡವೆಂದು, ಅದನ್ನು ಉಳಿಸಿಕೊಳ್ಳಲು ತಮ್ಮ ಮೇಲಾಧಿಕಾರಿಯಾದ ಮೈಸೂರು ಡಿಸಿಗೆ, ತಹಶೀಲ್ದಾರ್ ಪಾಸಿಟಿವ್ ರಿಪೋರ್ಟ್ ಸಹ ಕೊಟ್ಟಿದ್ದರು.

ಮೈಸೂರು: ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿವಾದ ಹುತ್ತದೊಳಗಿನ ಹಾವಿನಂತೆ ಭುಸುಗುಡುತ್ತಲೇ ಇದೆ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ದೇವಾಲಯ ಬೀಳಿಸುವ ಸರಕಾರೀ ಕಾರ್ಯಚರಣೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನಂಜನಗೂಡು ಶಾಸಕ ಕೊಟ್ಟಿದ್ದಾರೆ. ಹುಚ್ಚಗಣಿ ದೇವಾಲಯ ತೆರವು ಮಾಡಲು ಡಿಸಿಯಿಂದಲೇ ಆರ್ಡರ್ ಆಗಿತ್ತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಅಲ್ಲಿಗೆ ಈ ಹಿಂದೆ ದೇಗುಲ ಬೀಳಿಸುವುದಕ್ಕೆ ಆರ್ಡರ್ ಮಾಡಿದ್ದು ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ಎಂದು ಭಾವಿಸಿ, ಸರ್ಕಾರ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿರುವುದು ಸೋಜಿಗವಾಗಿದೆ. ಅಷ್ಟೇ ಅಲ್ಲ; ದೇವಸ್ಥಾನ ಬೀಳಿಸುವುದು ಬೇಡವೆಂದು, ಅದನ್ನು ಉಳಿಸಿಕೊಳ್ಳಲು ತಮ್ಮ ಮೇಲಾಧಿಕಾರಿಯಾದ ಮೈಸೂರು ಡಿಸಿಗೆ, ತಹಶೀಲ್ದಾರ್ ಪಾಸಿಟಿವ್ ರಿಪೋರ್ಟ್ ಸಹ ಕೊಟ್ಟಿದ್ದರು.
ಅಷ್ಟೇ ಅಲ್ಲ; ತಹಶೀಲ್ದಾರ್ ಮೋಹನ್ ಕುಮಾರಿ ಅವರು ನೀಡಿದ್ದ ಪಾಸಿಟಿವ್ ರಿಪೋರ್ಟ್ ಕಂಡು ನೆಗೆಟೀವ್ ಆದ ಜಿಲ್ಲಾಧಿಕಾರಿ ಯಾವ ಆಧಾರದ ಮೇಲೆ ದೇವಸ್ಥಾನ ಉಳಿಸುತ್ತಿರಾ? ಎಂದು ಪ್ರಶ್ನಿಸಿದ್ದರಂತೆ. ಈ ವಿಚಾರವನ್ನು ಸ್ಥಳೀಯ ಶಾಸಕ ಹರ್ಷವರ್ಧನ್ ಬಹಿರಂಗಪಡಿಸಿದ್ದಾರೆ.
ಆಗ ಜಿಲ್ಲಾಧಿಕಾರಿಯ ಈ ದಿಢೀರ್ ಪ್ರಶ್ನೆ ಕೇಳಿ ತಬ್ಬಿಬ್ಬಾದ ತಹಶೀಲ್ದಾರ್ ಬಳಿ ಉತ್ತರ ಇರಲಿಲ್ಲ! ಎಲ್ಲಾ ಕಡೆ ದೇವಸ್ಥಾನ ತೆರವು ಮಾಡಿದ್ದೀವಿ. ಮಹದೇವಮ್ಮ ದೇವಸ್ಥಾನಕ್ಕೂ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲ. ಆದ್ದರಿಂದ ದೇವಸ್ಥಾನ ತೆರವು ಮಾಡಬೇಕು ಎಂದು ಡಿಸಿ ಆರ್ಡರ್ ಮಾಡಿದ್ದಾರೆ!
ಪ್ರಕರಣದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶಾಸಕ ಹರ್ಷವರ್ಧನ್, ಠಾಣಾ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 13 ದೇವಸ್ಥಾನಗಳನ್ನು ಉಳಿಸಲಾಯಿತು. ಮಹದೇವಮ್ಮ ದೇವಸ್ಥಾನವನ್ನು ಉಳಿಸುವಂತೆ ತಹಶೀಲ್ದಾರ್ ಗೆ ರಿಪೋಟ್೯ ಕಳುಹಿಸಿದ್ದೆ. ಅದರಂತೆ ತಹಶೀಲ್ದಾರ್ ಅವರು ಡಿಸಿಗೆ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದಾರೆ. ಆದರೆ, ಯಾವುದೇ ದಾಖಲಾತಿ ಇಲ್ಲದೇ ದೇವಸ್ಥಾನ ಹೇಗೆ ಉಳಿಸುತ್ತೀರಾ? ಎಂದು ಪ್ರಶ್ನಿಸಿ ದೇವಾಲಯ ತೆರವಿಗೆ ಡಿಸಿ ಆರ್ಡರ್ ಕೊಟ್ಟಿದ್ದಾರೆ. ತಹಶೀಲ್ದಾರ್ ಮೋಹನ್ ಕುಮಾರಿ ವರ್ಗಾವಣೆ ಮಾಡಿರುವುದಕ್ಕೆ ನನಗೂ ಬೇಸರವಿದೆ. ಈ ಸಂಬಂಧ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
(Nanjangud huchangi mahadevamma temple demolition order passed by mysore deputy commissioner)
Published On - 9:28 am, Wed, 29 September 21




