ಬಿರುಸಿನ ನಡಿಗೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ; ಸಿಎಂ ನಡಿಗೆ ಕಂಡು ವಾಕರ್ಸ್ ಫುಲ್ ಖುಷ್
ಆರೋಗ್ಯ ಕಾಪಾಡಿಕೊಳ್ಳಲು ನಡಿಗೆ ಮುಖ್ಯ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಜನರಲ್ಲಿ ಸ್ಪೂರ್ತಿ ತುಂಬಲು ಸುಧಾಕರ್ ಈ ಕಾರ್ಯಕ್ರಮ ಮಾಡಿದ್ದಾರೆ. ಇನ್ಮುಂದೆ ಇವತ್ತಿನಿಂದ ನಾನು ಕೂಡ ಪ್ರತಿನಿತ್ಯ ವಾಕ್ ಮಾಡುತ್ತೇನೆ.
ಬೆಂಗಳೂರು: ವಿಶ್ವ ಹೃದಯ ದಿನಾಚರಣೆಗೆ (World Heart Day) ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಚಾಲನೆ ನೀಡಿದರು. ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ಕಂಠೀರವ ಸ್ಟೇಡಿಯಂವರೆಗೆ ಬಿರುಸಿನ ನಡಿಗೆಗೆ ಚಾಲನೆ ನೀಡಿದ ಸಿಎಂ, ಇವತ್ತು ಸಿಎಂ ವಿಶ್ವ ಹೃದಯದ ದಿನ. ಹೃದಯದಿಂದ ಬಾಂಧವ್ಯ ಬೆಸೆಯೋಣ ಅನ್ನೋ ಘೋಷವಾಕ್ಯದಡಿ ಬಿರುಸಿನ ನಡಿಗೆ (Walk) ಮಾಡೋಣ. ಆರೋಗ್ಯ ಕಾಪಾಡಿಕೊಳ್ಳಲು ನಡಿಗೆ ಬಹಳ ಮುಖ್ಯ. ಪ್ರತಿ ದಿನ ಅರ್ಧ ಗಂಟೆಯಾದ್ರು ಬಿರುಸಿನ ನಡಿಗೆ ಮಾಡಿ. ಈ ಮೂಲಕ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳೋಣ ಅಂತ ಹೇಳಿದರು.
ಆರೋಗ್ಯ ಕಾಪಾಡಿಕೊಳ್ಳಲು ನಡಿಗೆ ಮುಖ್ಯ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಜನರಲ್ಲಿ ಸ್ಪೂರ್ತಿ ತುಂಬಲು ಸುಧಾಕರ್ ಈ ಕಾರ್ಯಕ್ರಮ ಮಾಡಿದ್ದಾರೆ. ಇನ್ಮುಂದೆ ಇವತ್ತಿನಿಂದ ನಾನು ಕೂಡ ಪ್ರತಿನಿತ್ಯ ವಾಕ್ ಮಾಡುತ್ತೇನೆ. ವಾಕರಲ್ಲಾದರೂ ವಾಕ್ ಮಾಡುತ್ತೇನೆ. ಹೃದಯ ಸದಾ ಬಡಿದುಕೊಳ್ಳುತ್ತೆ. ಅದನ್ನು ಆರೋಗ್ಯವಾಗಿರಿಸಿ, ನಾವೂ ಆರೋಗ್ಯವಾಗಿರಲು ವಾಕ್ ಮಾಡೋಣ ಅಂತಾ ಸಿಎಂ ಬೊಮ್ಮಾಯಿ ಸಲಹೆ ನೀಡಿದರು
ಇನ್ನು ಕಾರ್ಯಕ್ರಮದಲ್ಲಿ ದಿನಕ್ಕೆ 30 ನಿಮಿಷ ವಾಕ್ ಮಾಡೋದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಪ್ರತಿಜ್ಞೆ ಸ್ವೀಕಾರ ಮಾಡಿದರು. ಕಾರ್ಯಕ್ರಮದ ವೇಳೆ ಕಬ್ಬನ್ ಪಾರ್ಕ್ನಲ್ಲಿ ಮುಖ್ಯಮಂತ್ರಿ ವಾಕ್ ಮಾಡಿದರು. ಸಿಎಂ ವಾಕ್ ನೋಡಿ ವಾಕರ್ಸ್ ಫುಲ್ ಖುಷ್ ಆದರು. ಬಿರುಸಿನ ನಡಿಗೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದಿನನಿತ್ಯ ವಾಕ್ ಮಾಡಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹೃದಯ ಆರೋಗ್ಯ ಚೆನ್ನಾಗಿದ್ದರೆ ಸಂಪೂರ್ಣ ಆರೋಗ್ಯ ಚೆನ್ನಾಗಿರುತ್ತದೆ. ಹೃದಯ ಆಘಾತವಾದಾಗ ಗೋಲ್ಡನ್ ಹವರ್ ಅಂತಾ ಇರುತ್ತದೆ. ಅದರ ಬಗ್ಗೆ ತಿಳಿದುಕೊಂಡಿರಬೇಕು ಅಂತ ಹೇಳಿದರು.
ಇದನ್ನೂ ಓದಿ
Karnataka Dam Water Level: ನಿಲ್ಲದ ಮಳೆ ಅಬ್ಬರ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಗೃಹ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ; ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು
(Basavaraj Bommai inaugurated to World Heart Day programme in Bengaluru)