ಗೃಹ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ; ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು
ದಿನಗೂಲಿ ನೌಕರರ ಏಜೆನ್ಸಿ ಕೊಡಿಸುವುದಾಗಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ 4 ಕಂತುಗಳಲ್ಲಿ ಮಂಜುನಾಥ್ 15 ಲಕ್ಷ ರೂಪಾಯಿ ನೀಡಿದ್ದಾರೆ.
ಬೆಂಗಳೂರು: ಗೃಹ ಇಲಾಖೆಯಲ್ಲಿ ಸಹಾಯಕರ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 55 ಜನರಿಂದ 1.62 ಕೋಟಿ ರೂಪಾಯಿ ವಸೂಲಿ ಮಾಡಿ ವಂಚನೆ ಮಾಡಿರುವ ಅರೋಪ ಕೇಳಿ ಬಂದಿದ್ದು. ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀಲೇಖಾ, ರಾಧಾ ಉಮೇಶ್ ಮತ್ತು ಸಂಪತ್‌ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ.ಮಂಜುನಾಥ್ ದೂರು ನೀಡಿದ್ದು, ದೂರಿನನ್ವಯ ಎಫ್ಐಆರ್ (FIR) ದಾಖಲಿಸಲಾಗಿದೆ.
2019ರಲ್ಲಿ ರಾಧ ಉಮೇಶ್, ಕೆಪಿಸಿಸಿ ಕಾರ್ಮಿಕ ವಿಭಾಗ ಉಪಾಧ್ಯಕ್ಷೆ ಎಂದು ಪರಿಚಯ ಮಾಡಿಕೊಂಡಿದ್ದು, ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಪರಿಚಯವಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ದಿನಗೂಲಿ ನೌಕರರ ಏಜೆನ್ಸಿ ಕೊಡಿಸುವುದಾಗಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ 4 ಕಂತುಗಳಲ್ಲಿ ಮಂಜುನಾಥ್ 15 ಲಕ್ಷ ರೂಪಾಯಿ ನೀಡಿದ್ದಾರೆ.
ಗೃಹ ಇಲಾಖೆಯಲ್ಲಿ ಕಿರಿಯ, ಹಿರಿಯ ಮತ್ತು ಅಧೀಕ್ಷರ ಹುದ್ದೆಗೆ ನೇರ ನೇಮಕಾತಿ ನಡೆಯುತ್ತಿದೆ ಅಂದಿದ್ದ ಶ್ರೀಲೇಖಾ ಕೂಡ, ಆಗ 55 ಮಂದಿಯಿಂದ ಮೂವರು ಆರೋಪಿಗಳಿಗೂ 1.61 ಕೋಟಿ ರೂಪಾಯಿ ಸಂದಾಯ ಮಾಡಿದ್ದಾರೆ. ಸೆ.24 ರಂದು ಆರ್ಥಿಕ ಇಲಾಖೆ ಭೇಟಿ ವೇಳೆ ಅಸಲಿಯತ್ತು ಪತ್ತೆಯಾಗಿದೆ. ಅಲ್ಲದೇ ನೇಮಕಾತಿ ಆದೇಶ ಪ್ರಮಾಣ ಪತ್ರವನ್ನು ನೀಡಿದಾಗ ನಕಲಿ ಎನ್ನುವುದು ದೃಢವಾಗಿದೆ. ಹೀಗಾಗಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ವಿಧಾನಸೌಧ ಠಾಣೆ ಪೊಲೀಸರಿಂದ ಇಬ್ಬರ ಬಂಧನ ಗೃಹ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 55 ಜನರಿಂದ 1.62 ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ ಆರೋಪದಡಿ ಶ್ರೀಲೇಖಾ ಮತ್ತು ಸಂಪತ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಮಂಜುನಾಥ್ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಿದ್ದು, ಮೂವರು ಆರೋಪಿಗಳಲ್ಲಿ ಸದ್ಯ ಇಬ್ಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ನಕಲಿ ಕಲಾಕೃತಿ ಮಾರಾಟ ಮಾಡಿ 10 ಕೋಟಿ ವಂಚನೆ; ಕೇರಳ ಮೂಲದ ಯೂಟ್ಯೂಬರ್ ಮಾವುಂಗಲ್ ಬಂಧನ
ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕ್ಗೆ ವಂಚನೆ; ದಂಪತಿ ವಿರುದ್ಧ ದೂರು ದಾಖಲು
Published On - 7:27 am, Wed, 29 September 21