ಹಣಕ್ಕಾಗಿ ವಕೀಲನ ಅಪಹರಣ, 9 ಆರೋಪಿಗಳನ್ನು ಬಂಧಿಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು
ಕಿಡ್ನಾಪ್ ಮಾಹಿತಿ ಬಂದ ಐದಾರು ಗಂಟೆಯಲ್ಲೇ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಹಾಡಹಗಲೇ 2 ಫಾರ್ಚ್ಯೂನರ್ ಕಾರಿನಲ್ಲಿ ವಕೀಲನ ಅಪಹರಣ ಮಾಡಲಾಗಿತ್ತು. ಬಳಿಕ ಬ್ಯಾಡರಹಳ್ಳಿ ಬಳಿಯ ಡಿ ಗ್ರೂಪ್ ಲೇಔಟ್‌ನಲ್ಲಿ ಸಿದ್ದೇಶ್ ಎಂಬಾತನ ಫೈನಾನ್ಸ್ ಕಚೇರಿಯಲ್ಲಿ ವಕೀಲನನ್ನು ಇಟ್ಟಿದ್ದರು.
ಬೆಂಗಳೂರು: ಟೆಕ್ಕಿ ಕಿಡ್ನಾಪ್(Kidnap) ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ. ಹಣಕ್ಕಾಗಿ ವಕೀಲನನ್ನು ಅಪಹರಿಸಿದ್ದು ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರುಣ್‌ಕುಮಾರ್, ಯುವರಾಜ್, ನರೇಶ್, ಅಶೋಕ್, ಯುಗಾನಂದ್, ನೆಲ್ಸನ್ ಕುಮಾರ್, ಸಂಜಯ್, ಸಿದ್ದೇಶ್, ವಿಜಯ್ ಕುಮಾರ್ ಬಂಧಿತ ಆರೋಪಿಗಳು.
ಕಿಡ್ನಾಪ್ ಮಾಹಿತಿ ಬಂದ ಐದಾರು ಗಂಟೆಯಲ್ಲೇ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಹಾಡಹಗಲೇ 2 ಫಾರ್ಚ್ಯೂನರ್ ಕಾರಿನಲ್ಲಿ ವಕೀಲನ ಅಪಹರಣ ಮಾಡಲಾಗಿತ್ತು. ಬಳಿಕ ಬ್ಯಾಡರಹಳ್ಳಿ ಬಳಿಯ ಡಿ ಗ್ರೂಪ್ ಲೇಔಟ್‌ನಲ್ಲಿ ಸಿದ್ದೇಶ್ ಎಂಬಾತನ ಫೈನಾನ್ಸ್ ಕಚೇರಿಯಲ್ಲಿ ವಕೀಲನನ್ನು ಇಟ್ಟಿದ್ದರು. ಬಳಿಕ ₹10 ಲಕ್ಷ ನೀಡಲು ವಕೀಲನ ಕುಟುಂಬಸ್ಥರಿಗೆ ಕರೆ ಮಾಡಿ ಡಿಮ್ಯಾಂಡ್ ಮಾಡಿದ್ದಾರೆ. ಕುಟುಂಬಸ್ಥರು ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಮುಂದಾದ ಪೊಲೀಸರು ದೂರು ದಾಖಲಾದ ಕೇವಲ ಐದಾರು ಗಂಟೆಯಲ್ಲೇ 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಫೈನಾನ್ಸ್ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ವಕೀಲನನ್ನು ರಕ್ಷಿಸುವುದರ ಜೊತೆ ಆರೋಪಿಗಳನ್ನು ಬಂಧಿಸಿದ್ದಾರೆ.
ಹಣಕ್ಕಾಗಿ ಟೆಕ್ಕಿ ಕಿಡ್ನಾಪ್ ಕೆಲ ದಿನಗಳ ಹಿಂದೆ ಹಣದ ಆಸೆಯಿಂದ ಟೆಕ್ಕಿಗಳು ಇನ್ನೊರ್ವ ಟೆಕ್ಕಿಯನ್ನು ಕಿಡ್ನ್ಯಾಪ್ (Kidnap) ಮಾಡಿದ್ದ ಘಟನೆ ನಡೆದಿತ್ತು. ಸದ್ಯ ಕಿಡ್ನ್ಯಾಪ್ ಆಗಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಕಿಡ್ನ್ಯಾಪ್ ಆಗಿದ್ದ ಟೆಕ್ಕಿ ವಿನೀತ್ ವರ್ಧನ್ ಎಂಬುವವರನ್ನು ರಕ್ಷಣೆ ಮಾಡಲಾಗಿದೆ. ಚೆನ್ನೈನಲ್ಲಿ ಬೆಂಗಳೂರು ಪೊಲೀಸರು ವಿನೀತ್ನ ರಕ್ಷಣೆ ಮಾಡಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಕೋರಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು.
ಹಣದ ವಿಚಾರಕ್ಕೆ ವಿನೀತ್ ವರ್ಧನ್ನ ಕಿಡ್ನ್ಯಾಪ್ ಆಗಿತ್ತು. ಎಡ್ವಿನ್ ಪ್ರಶಾಂತ್ ಮತ್ತು ಆತನ ಟೀಮ್ ವಿನೀತ್ನ ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪರ್ಸ್ 50 ಕಿಲೋಮೀಟರ್ ಕ್ರಮಿಸಿ ಫೋನ್ ಕರೆ ಮಾಡಿದ್ದರು. ಫೋನ್ ಕರೆ ಮಾಡಿದ ಬಳಿಕ ಸ್ವಿಚ್ ಆಫ್ ಮಾಡುತ್ತಿದ್ದರು. ಫಾಸ್ಟ್ಟ್ಯಾಗ್ ಮೂಲಕ ಕಿಡ್ನ್ಯಾಪರ್ಸ್ ಸುಳಿವು ಪತ್ತೆಯಾಗಿತ್ತು. ಕೋರಮಂಗಲ ಪೊಲೀಸರು ಕಾರ್ಯಚರಣೆ ನಡೆಸಿ ಎಡ್ವಿನ್ ಪ್ರಶಾಂತ್, ಸಂತೋಷ್, ಅರಿವೇಗಲನ್ ಬಂಧಿಸಿದ್ದಾರೆ.
ಇದನ್ನೂ ಓದಿ: ಟೆಕ್ಕಿಗಳಿಂದಲೇ ಟೆಕ್ಕಿ ಕಿಡ್ನ್ಯಾಪ್! ಆರೋಪಿಗಳಿಗೆ ಹಣ ನೀಡಿ ಬಂಧಿಸಿದ ಬೆಂಗಳೂರು ಪೊಲೀಸರು