ಅದ್ದೂರಿಯಾಗಿ ಆರಂಭವಾದ 6 ತಿಂಗಳಿಗೆ ನಿಂತ ಕೆಂಪೇಗೌಡ ಏರ್ಪೋರ್ಟ್ ರೈಲು; ಲಾಕ್ಡೌನ್ ಮುಗಿದರೂ ಸಂಚಾರ ಸ್ಥಗಿತ
ಬಸ್ಸಿನಲ್ಲಿ 250 ಮತ್ತು ಟ್ಯಾಕ್ಸಿಯಲ್ಲಿ 800 ರೂಪಾಯಿ ಕೊಟ್ಟು ಏರ್ಪೋರ್ಟ್ಗೆ ಬರಬೇಕು. ಏರ್ಪೋರ್ಟ್ ಮತ್ತು ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ತೆರಳುತ್ತಿದ್ದ ರೈಲು ಈಗ ಸ್ಥಗಿತವಾಗಿದೆ. ಮತ್ತೆ ಏರ್ಪೋರ್ಟ್ಗೆ ರೈಲು ಸೇವೆ ಆರಂಭಿಸುವಂತೆ ಉದ್ಯೋಗಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು: ಲಕ್ಷ ಲಕ್ಷ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಹೈಟೆಕ್ ಕೆಂಪೇಗೌಡ ಏರ್ಪೋರ್ಟ್ ರೈಲು ವ್ಯರ್ಥವೆಂಬಂತೆ ಭಾಸವಾಗುತ್ತಿದೆ. ಇದಕ್ಕೆ ಕಾರಣ ಅದ್ದೂರಿಯಾಗಿ ಆರಂಭವಾದ ಆರು ತಿಂಗಳಿಗೆ ಕೆಂಪೇಗೌಡ ಏರ್ಪೋಟ್ ರೈಲು ನಿಂತಿದೆ. ಲಾಕ್ಡೌನ್ ಕಾರಣದಿಂದ ರೈಲು ವ್ಯವಸ್ಥೆ ನಿಲ್ಲಿಸಲಾಗಿತ್ತು. ಆದರೆ ಈಗ ಲಾಕ್ಡೌನ್ ಮುಗಿದಿದ್ದು, ಜನ ಜೀವನ ಎಂದಿನಂತೆ ಸಾಗುತ್ತಿದೆ. ಆದರೂ ಕೂಡ ರೈಲು ಸಂಚಾರ ಮಾತ್ರ ಆರಂಭವಾಗಿಲ್ಲ.
ಟ್ಯಾಕ್ಸಿ, ಬಸ್ಗಿಂತ ಕಡಿಮೆ ದರದಲ್ಲಿ ಏರ್ಪೋರ್ಟ್ಗೆ ಬರಲು ಆರಂಭವಾಗಿದ್ದ ರೈಲು ಈಗ ನಿಂತಿದೆ. ಕೇವಲ 10 ರೂಪಾಯಿಗೆ ಮೆಜೆಸ್ಟಿಕ್ ನಿಂದ ಏರ್ಪೋರ್ಟ್ಗೆ ಪ್ರಯಾಣಿಕರನ್ನು ಕರೆ ತರಲಾಗುತ್ತಿತ್ತು. ಏರ್ಪೋರ್ಟ್ಗೆ ಕೆಲಸಕ್ಕೆ ಬರುವ ಉದ್ಯೋಗಿಗಳಿಗೆ ಈ ರೈಲು ಪ್ರಯಾಣ ಅನುಕೂಲಕರವಾಗಿತ್ತು. ಆದರೆ ಇದೀಗ ರೈಲು ಸ್ಥಗಿತಗೊಂಡ ಕಾರಣ ನೂರಾರು ರೂಪಾಯಿ ಹಣ ಖರ್ಚು ಮಾಡಿ ಬರಬೇಕಾದ ಪರಿಸ್ಥಿತಿ ಸಾರ್ವಜನಿಕರಲ್ಲಿ ನಿರ್ಮಾಣವಾಗಿದೆ.
ಬಸ್ಸಿನಲ್ಲಿ 250 ಮತ್ತು ಟ್ಯಾಕ್ಸಿಯಲ್ಲಿ 800 ರೂಪಾಯಿ ಕೊಟ್ಟು ಏರ್ಪೋರ್ಟ್ಗೆ ಬರಬೇಕು. ಏರ್ಪೋರ್ಟ್ ಮತ್ತು ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ತೆರಳುತ್ತಿದ್ದ ರೈಲು ಈಗ ಸ್ಥಗಿತವಾಗಿದೆ. ಮತ್ತೆ ಏರ್ಪೋರ್ಟ್ಗೆ ರೈಲು ಸೇವೆ ಆರಂಭಿಸುವಂತೆ ಉದ್ಯೋಗಿಗಳು ಮನವಿ ಮಾಡಿದ್ದಾರೆ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೈಲು ಪ್ರಯಾಣಕ್ಕೆ ಪ್ರಯಾಣಿಕರು ಒಲವು ತೋರದ ಹಿನ್ನೆಲೆಯಲ್ಲಿಯೂ ರೈಲು ಆರಂಭವಾಗಿಲ್ಲ ಎನ್ನುವುದನ್ನು ತಳ್ಳಿ ಹಾಕಿವಂತಿಲ್ಲ. ರೈಲು ಸಂಚರಿಸಲು ಪ್ರಯಾಣಿಕರ ಸಂಖ್ಯೆ ಕೂಡ ಮುಕ್ಯವಾಗಿರುತ್ತದೆ.
ಇದನ್ನೂ ಓದಿ:
Bharat Bandh ರೈತರಿಂದ ಹೆದ್ದಾರಿ, ರೈಲು ಮಾರ್ಗ ಬಂದ್; ದೆಹಲಿ,ಹರ್ಯಾಣ ಗಡಿಭಾಗದಲ್ಲಿ ಸಂಚಾರಕ್ಕೆ ಅಡ್ಡಿ
ರಾಮನಗರ, ಮಾಗಡಿ ಕಡೆಗೆ ನಮ್ಮ ಮೆಟ್ರೋ; 4ನೇ ಹಂತದಲ್ಲಿ ಬಿಡದಿಗೂ ಸಿಗಲಿದೆ ಮೆಟ್ರೋ ರೈಲು ಸಂಚಾರ ಭಾಗ್ಯ
Published On - 11:14 am, Wed, 29 September 21