ಮುಂಡರಗಿ ಪುರಸಭೆಯಲ್ಲಿ ರಾತ್ರಿ ವೇಳೆ ಅಧ್ಯಕ್ಷೆ ಹಾಗೂ ಪತಿ ಅಂಧಾ ದರ್ಬಾರ್! ಏನಿದು ಪ್ರಕರಣ?

| Updated By: ಸಾಧು ಶ್ರೀನಾಥ್​

Updated on: Oct 19, 2022 | 12:43 PM

Mundaragi municipality: ಈ ಘಟನೆಯ ಬಳಿಕ ಕಂಪ್ಯೂಟರ್ ಉತಾರ ತಗೆದುಕೊಳ್ಳಲು ರಾತ್ರಿ ವೇಳೆ ಕಳ್ಳ ದಾರಿ ಹಿಡಿದ್ರಾ ಅಧ್ಯಕ್ಷೆ ಕವಿತಾ ಹಾಗೂ ಪತಿ ಅಂದಪ್ಪ? ಎಂದು ವಿರೋಧ ಪಕ್ಷದ ನಾಯಕ-ಕಾಂಗ್ರೆಸ್ಸಿನ ನಾಗರಾಜ್ ಆರೋಪ ಮಾಡಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳವಂತೆಯೂ ಒತ್ತಾಯ ಮಾಡಿದ್ದಾರೆ.

ಮುಂಡರಗಿ ಪುರಸಭೆಯಲ್ಲಿ ರಾತ್ರಿ ವೇಳೆ ಅಧ್ಯಕ್ಷೆ ಹಾಗೂ ಪತಿ ಅಂಧಾ ದರ್ಬಾರ್! ಏನಿದು ಪ್ರಕರಣ?
ಮುಂಡರಗಿ ಪುರಸಭೆಯಲ್ಲಿ ರಾತ್ರಿ ವೇಳೆ ಅಧ್ಯಕ್ಷೆ ಹಾಗೂ ಪತಿ ಅಂಧಾ ದರ್ಬಾರ್! ಏನಿದು ಪ್ರಕರಣ?
Follow us on

ಗದಗ: ಗದಗದಲ್ಲಿ ಜಿಲ್ಲಾಡಳಿತ ಹಳಿ ತಪ್ಪಿದೆ. ಸರ್ಕಾರಿ ಕಚೇರಿಯಲ್ಲಿ ರಾತ್ರಿ ವೇಳೆ ಅಂಧಾ ದರ್ಬಾರ್ ನಡೆದಿರುವ ಪ್ರಸಂಗ ಕಂಡುಬಂದಿದೆ. ಜಿಲ್ಲೆಯ ಪುರಸಭೆಯೊಂದರಲ್ಲಿ ಅಧ್ಯಕ್ಷೆ ಹಾಗೂ ಪತಿ ಅಂಧಾ ದರ್ಬಾರ್ ನಡೆಸಿದ್ದಾರೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಪುರಸಭೆ ಕಚೇರಿಗೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಮತ್ತು ಆಕೆಯ ಪತಿ ಅಂದಪ್ಪಾ ಉಳ್ಳಾಗಡ್ಡಿ ಅಕ್ಟೋಬರ್ 14 ರ ರಾತ್ರಿ 10.45 ರಲ್ಲಿ ಸರ್ಕಾರಿ ಕಚೇರಿಗೆ ಎಂಟ್ರಿ ಕೊಟ್ಟಿದ್ದಾರೆ. ಅಧ್ಯಕ್ಷೆಗೆ ಪುರಸಭೆಯ ಮೂವರು ಸಿಬ್ಬಂದಿ ಸಹ ಸಾಥ್ ನೀಡಿದ್ದಾರೆ. ಈ ಮಧ್ಯೆ, ಪುರಸಭೆಯಲ್ಲಿ ಕಂಪ್ಯೂಟರ್ ಆನ್ ಮಾಡಿ ಉತಾರ ಪಡೆದಿರುವ ಆರೋಪ ಕೇಳಿಬಂದಿದೆ. ಗಮನಾರ್ಹವೆಂದರೆ ದಂಪತಿಯ ಈ ದರ್ಬಾರ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪುರಸಭೆಯ ಕಂಪ್ಯೂಟರ್ ಆನ್ ಮಾಡಿ ಕೆಲಸ ಮಾಡಲು ಮುಂದಾಗಿರುವ ಸಿಸಿ ಟಿವಿ ವಿಡಿಯೋ ದೃಶ್ಯಗಳು ಈಗ ಫುಲ್ ವೈರಲ್ ಆಗಿವೆ. ಪುರಸಭೆ ಕಚೇರಿಯ ಬೀಗ ತೆಗೆಸಿದ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಹಾಗೂ ಪತಿ ಅಂದಪ್ಪ ಉಳ್ಳಾಗಡ್ಡಿ ಅವರಿಬ್ಬರೂ ಪುರಸಭೆ ರೆವೆನ್ಯೂ ಇನ್ಸ್​ಪೆಕ್ಟರ್​ ಬಸವರಾಜ್, ಕಂಪ್ಯೂಟರ್ ಆಪರೇಟರುಗಳಾದ ಗಣೇಶ, ರವಿ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿಗೆ ಸಾಥ್ ನೀಡಿದ ಪುರಸಭೆ ಸಿಬ್ಬಂದಿ.

ಕಂಪ್ಯೂಟರ್ ಉತಾರ ತಗೆದುಕೊಳ್ಳಲು ರಾತ್ರಿ ವೇಳೆ ಕಳ್ಳ ದಾರಿ ಹಿಡಿದ್ರಾ ಅಧ್ಯಕ್ಷೆ ಕವಿತಾ ಹಾಗೂ ಪತಿ ಅಂದಪ್ಪ?

ಈ ಘಟನೆಯ ಬಳಿಕ ಕಂಪ್ಯೂಟರ್ ಉತಾರ ತಗೆದುಕೊಳ್ಳಲು ರಾತ್ರಿ ವೇಳೆ ಕಳ್ಳ ದಾರಿ ಹಿಡಿದ್ರಾ ಅಧ್ಯಕ್ಷೆ ಕವಿತಾ ಹಾಗೂ ಪತಿ ಅಂದಪ್ಪ? ಎಂದು ವಿರೋಧ ಪಕ್ಷದ ನಾಯಕ-ಕಾಂಗ್ರೆಸ್ಸಿನ ನಾಗರಾಜ್ ಆರೋಪ ಮಾಡಿದ್ದಾರೆ. ಅಧ್ಯಕ್ಷರು ಅಧಿಕಾರ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಅಂತಾ ಅವರು ಕಿಡಿಕಾರಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳವಂತೆಯೂ ಒತ್ತಾಯ ಮಾಡಿದ್ದಾರೆ.

ಪುರಸಭೆಯ ಮುಖ್ಯಾಧಿಕಾರಿ ಗಮನಕ್ಕೆ ತಾರದೇ ರಾತ್ರಿ ಎಂಟ್ರಿ ಕೊಟ್ಟರಾ? ಗದಗ ಜಿಲ್ಲಾಡಳಿತ ಕುಂಭಕರ್ಣ ನಿದ್ದೆಗೆ ಜಾರಿದೆಯಾ? ಸರ್ಕಾರಿ ಕಚೇರಿಗಳಿಗೆ ಸಂಬಂಧ ಇಲ್ಲದವರು ಎಂಟ್ರಿ ಕೊಟ್ಟರೂ ಡೋಂಟ್ ಕೇರ್ ಅಂತಾ ಸುಮ್ಮನಿದೆಯಾ ಜಿಲ್ಲಾಡಳಿತ? ಎಂಬ ಪ್ರಶ್ನೆಗಳು ಕಾಡತೊಡಗಿವೆ.

ಇನ್ನು ಪ್ರಕರಣದ ಬಗ್ಗೆ ಮುಖ್ಯಾಧಿಕಾರಿ ರಾಮನಗೌಡ ಪಾಟೀಲ್ ಅವರು ಪ್ರತಿಕ್ರಿಯಿಸಿದ್ದು, ನನ್ನ ಗಮನಕ್ಕೆ ತಾರದೇ ರಾತ್ರಿ ವೇಳೆ ಕಚೇರಿಗೆ ಹೋಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಆದರೆ ಹಾಗೆ ಮಾಡಿರುವುದು ತಪ್ಪು. ನಮ್ಮ ಸಿಬ್ಬಂದಿಗೆ ನೋಟಿಸ್ ನೀಡುತ್ತೇನೆ. ಸಿಬ್ಬಂದಿ ಹಾಗೂ ಅಧ್ಯಕ್ಷೆ, ಹಾಗೂ ಅವರ ಪತಿಯ ಅಕ್ರಮ ಪ್ರವೇಶ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಈಗಾಗಲೇ ಅಪರ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ ಎಂದು ಟಿವಿ 9 ಗೆ ಮುಖ್ಯಾಧಿಕಾರಿ ರಾಮನಗೌಡ ಪಾಟೀಲ್ ಫೋನ್ ಮೂಲಕ ತಿಳಿಸಿದ್ದಾರೆ.