ಬೈಲಹೊಂಗಲ: ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಬೈಲಹೊಂಗಲದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಫಾಸ್ಟ್ ಫುಡ್ ಅಂಗಡಿಯೊಂದಕ್ಕೆ ನುಗ್ಗಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತದ ಕಾರಣ ಹಾಗೂ ಚಾಲಕನ ತಪ್ಪು ನಿರ್ಲಕ್ಷ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವಿಡಿಯೋ ಇಲ್ಲಿದೆ.
ಬೆಳಗಾವಿ, ಜನವರಿ 5: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಭಾರೀ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪಟ್ಟಣದ ಸಾಯಿಮಂದಿರದ ಸಮೀಪ ಕಬ್ಬು ತುಂಬಿದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಫಾಸ್ಟ್ ಫುಡ್ ಅಂಗಡಿಯೊಂದಕ್ಕೆ ನುಗ್ಗಿದೆ. ಘಟನೆ ನಡೆಯುವ ವೇಳೆ ಅಂಗಡಿಯಲ್ಲಿ ಇದ್ದ ಜನರು ಕ್ಷಣಾರ್ಧದಲ್ಲಿ ಹೊರಗೆ ಓಡಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಟ್ರ್ಯಾಕ್ಟರ್ ಅಂಗಡಿಗೆ ನುಗ್ಗಿದ್ದರಿಂದ ಫಾಸ್ಟ್ ಫುಡ್ ಅಂಗಡಿಯೊಳಗಿದ್ದ ವಸ್ತುಗಳು ಹಾಗೂ ಉಪಕರಣಗಳಿಗೆ ಗಣನೀಯ ಹಾನಿಯಾಗಿದೆ.
