ಬಳ್ಳಾರಿ ದಂಗಲ್ಗೆ ರೋಚಕ ಟ್ವಿಸ್ಟ್: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿಯಲ್ಲಿ ಬ್ಯಾನರ್ ವಿವಾದದ ಹಿನ್ನೆಲೆಯಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜನಾರ್ದನ ರೆಡ್ಡಿ ನಿವಾಸದ ಆವರಣದಲ್ಲಿ 50ಕ್ಕೂ ಹೆಚ್ಚು ದೊಣ್ಣೆಗಳು ಪತ್ತೆಯಾಗಿವೆ. ಗಲಾಟೆ ವೇಳೆ ಜನಾರ್ದನ ರೆಡ್ಡಿ ಬೆಂಬಲಿಗರೂ ದೊಣ್ಣೆ ಮೂಲಕ ಹಲ್ಲೆ ನಡೆಸಿದ್ದಾರೆ. ಬಳಿಕ ದೊಣ್ಣೆಗಳನ್ನು ಮನೆ ಬಳಿ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ.
ಬಳ್ಳಾರಿ, ಜನವರಿ 05: ಬ್ಯಾನರ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಆವರಣದಲ್ಲಿ 50ಕ್ಕೂ ಹೆಚ್ಚು ದೊಣ್ಣೆಗಳು ಪತ್ತೆಯಾಗಿವೆ. ಗಲಾಟೆಯ ಸಂದರ್ಭದಲ್ಲಿ ರೆಡ್ಡಿ ಬೆಂಬಲಿಗರಿಂದ ದೊಣ್ಣೆಗಳ ಬಳಕೆ ಮಾಡಿರುವ ಆರೋಪ ಕೇಳಿಬಂದಿತ್ತು. ಅದಕ್ಕೆ ಪೂರಕವೆಂಬಂತೆ ಈಗ ರಾಶಿ ರಾಶಿ ದೊಣ್ಣೆಗಳು ಪತ್ತೆಯಾಗಿವೆ. ಕೇವಲ ಭರತ್ ರೆಡ್ಡಿ ಬೆಂಬಲಿಗರು ಮಾತ್ರವಲ್ಲದೇ ಜನಾರ್ದನ ರೆಡ್ಡಿ ಕಡೆಯವರಿಂದಲೂ ಹಲ್ಲೆ ನಡೆದಿದೆ. ಕಾಂಗ್ರೆಸ್ನವರು ಕಲ್ಲೆಸೆದರೆ, ಬಿಜೆಪಿಯವರು ದೊಣ್ಣೆಗಳಿಂದ ಹೊಡೆದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
