ಬಿಜೆಪಿ ಸಮಾವೇಶದಲ್ಲಿ ಕೂಲ್‌ಡ್ರಿಂಕ್ಸ್‌, ನೀರು ಕೊಂಡೊಯ್ದ ಜನ: ವ್ಯಾಪಾರಿಯ ನಷ್ಟ ಭರಿಸಿ ಮಾನವೀಯತೆ ಮೆರೆದ ಪ್ರತಾಪ್ ಸಿಂಹ

ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಅವರ ಸಮಾವೇಶದ ವೇಳೆ ತಂಪು ಪಾನೀಯದ ವಾಹನದ ಮೇಲೆ ಮುಗಿಬಿದ್ದು, ಕೂಲ್​ ಡ್ರಿಂಕ್ಸ್​ ಕುಡಿದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿದ್ದ ಸಮೀರ್​ ಹಸನ್​ ಸಾಬ್​ ಅವರಿಗೆ ಸಂಸದ ಪ್ರತಾಪ್ ಸಿಂಹ ಅವರು ಹಣ ಪಾವತಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಿಜೆಪಿ ಸಮಾವೇಶದಲ್ಲಿ ಕೂಲ್‌ಡ್ರಿಂಕ್ಸ್‌, ನೀರು ಕೊಂಡೊಯ್ದ ಜನ: ವ್ಯಾಪಾರಿಯ ನಷ್ಟ ಭರಿಸಿ ಮಾನವೀಯತೆ ಮೆರೆದ ಪ್ರತಾಪ್ ಸಿಂಹ

Updated on: May 01, 2023 | 8:03 AM

ಬೆಂಗಳೂರು: ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಅಮಿತ್ ಶಾ(Amit Shah) ಸಮಾವೇಶದ ವೇಳೆ ಜನರ ಗುಂಪು ತಂಪು ಪಾನೀಯ (Cool Drinks) ವಾಹನದ ಮೇಲೆ ಮುಗಿಬಿದ್ದು, ಕೂಲ್ ಡ್ರಿಂಕ್ಸ್ ಕುಡಿದಿದ್ದರು. ಇದರಿಂದ ಸಮೀರ್ ಹಸನ್ ಸಾಬ್​ಗೆ ನಷ್ಟವಾಗಿ ಕಣ್ಣೀರಿಟ್ಟಿದ್ದರು. ಈ ಸುದ್ದಿ ತಿಳಿದು ಸಂಸದ ಪ್ರತಾಪ್ ಸಿಂಹ (Pratap Simha), ನಷ್ಟ ಅನುಭವಿಸಿದ್ದ ವ್ಯಾಪಾರಿ ಸಮೀರ್​ಗೆ ಹಣ ಸಂದಾಯ ಮಾಡಿದ್ದಾರೆ. ಹಣ ಸಂದಾಯ ಮಾಡಿರುವ ಬಗ್ಗೆ ಟ್ವೀಟ್‌ನಲ್ಲಿ ಸ್ಪಷ್ಟನೆ ನೀಡಿದ್ದು, Sorry Brother ಎಂದು ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ಬಡ ವ್ಯಾಪಾರಿಗೆ ಹಣ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನು ಇವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ: ಗದಗ: ಚುನಾವಣಾ ಪ್ರಚಾರದಲ್ಲಿ ಕೂಲ್ ಡ್ರಿಂಕ್ಸ್ ಮಾರಾಟಕ್ಕೆ ಬಂದ ವ್ಯಾಪಾರಿಗೆ ಭಾರೀ ನಷ್ಟ; ಕಾರಣ ಏನು ಗೊತ್ತಾ?


ಲಕ್ಷ್ಮೇಶ್ವರದಲ್ಲಿ ಅಮಿತ್ ಶಾ ಸಮಾವೇಶಕ್ಕೆ ಬದಿದ್ದ ಜನರಿಗೆ ಕಾರ್ಯಕ್ರಮದ ಆಯೋಜಕರು ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಬಿಸಿಲಿನ ಬೇಗೆಗೆ ಜನ ಬೇಸತ್ತು ಹೋಗಿದ್ದರು. ಜನರಿಗೆ ತುಂಬ ಬಾಯಾರಿಕೆ ಆಗಿದ್ದುಮ ನೀರಿಗಾಗಿ ಪರದಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಸಮೀರ್ ಹಸನ್​ ಸಾವ್ ಎನ್ನುವಾತ ಕೂಲ್ ಡ್ರಿಂಕ್ಸ್​ ಇರುವ ವಾಹನ ಸಮಾವೇಶದ ಬಳಿ ವ್ಯಾಪಾರಕ್ಕೆ ಬಂದಿದ್ದ. ಬಿಜೆಪಿಯವರೇ ಕೂಲ್​ ಡ್ರಿಂಕ್ಸ್ ತರಿಸಿದ್ದಾರೆ ಎಂದು ಜನ ಸಮೀರ್​ ವಾಹನಕ್ಕೆ ಮುಗಿಬಿದ್ದು, ಕೂಲ್​ ಡ್ರಿಂಕ್ಸ್, ಜ್ಯೂಸ್, ನೀರಿನ ಬಾಟಲ್​ ತಗೆದುಕೊಂಡು ಹೋಗಿದ್ದರು. ಇದರಿಂದ ಸುಮಾರ್ 35 ಸಾವಿರ ರೂಪಾಯಿ ನಷ್ಟವಾಯ್ತು ಎಂದು ಸಮೀರ್​ ಕಣ್ಣೀರಿಟ್ಟಿದ್ದ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್ ಆಗಿತ್ತು.

ಇದೀಗ ಮೈಸೂರು ಸಂಸದ ಪ್ರತಾಪ್ ಸಿಂಹ, ವ್ಯಾಪಾರಿ ಸಮೀರ್​ ಅಕೌಂಟ್​ಗೆ 35 ಸಾವಿರ ರೂಪಾಯಿ ಟ್ರಾನ್ಸ್​ಫರ್ ಮಾಡಿದ್ದಾರೆ. ಈ ಮೂಲಕ ಪ್ರತಾಪ್ ಸಿಂಹ್ ಮಾನವೀಯತೆ ಮರೆದಿದ್ದಾರೆ. ಇನ್ನು ಸಂಸದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Published On - 7:58 am, Mon, 1 May 23