AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ ಅಂಗವಾಗಿ ಗದಗದಲ್ಲಿ ನಡೆದ ಅದ್ಧೂರಿ ಸಾಮೂಹಿಕ ಸೀಮಂತ ಕಾರ್ಯ

ನವರಾತ್ರಿ ಅಂಗವಾಗಿ ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 25 ಗರ್ಭಿಣಿ ಮಹಿಳೆಯರಿಗೆ ಅದ್ಧೂರಿ ಸಾಮೂಹಿಕ ಸೀಮಂತ ವಿಶೇಷ ಕಾರ್ಯಕ್ರಮ ಮಾಡಲಾಗಿದೆ. ಸಂಪ್ರದಾಯದ ಪ್ರಕಾರವೇ ವೇದಿಕೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿದ್ದು, ಗ್ರಾಮದಲ್ಲಿ ಹಬ್ಬದ, ಸಂಭ್ರಮದ ವಾತಾವರಣವೇ ನಿರ್ಮಾಣವಾಗಿತ್ತು.

ನವರಾತ್ರಿ ಅಂಗವಾಗಿ ಗದಗದಲ್ಲಿ ನಡೆದ ಅದ್ಧೂರಿ ಸಾಮೂಹಿಕ ಸೀಮಂತ ಕಾರ್ಯ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Oct 21, 2023 | 7:30 PM

Share

ಗದಗ, ಅ.21: ತವರು ಮನೆಯಲ್ಲಿ ಮಹಿಳೆಯರಿಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡುವುದು ಸಹಜ. ಆದರೆ, ನವರಾತ್ರಿ (Navaratri) ಅಂಗವಾಗಿ ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 25 ಗರ್ಭಿಣಿ ಮಹಿಳೆಯರಿಗೆ ಅದ್ಧೂರಿ ಸಾಮೂಹಿಕ ಸೀಮಂತ (Baby Shower) ವಿಶೇಷ ಕಾರ್ಯಕ್ರಮ ಮಾಡಲಾಗಿದೆ.

ಗ್ರಾಮದ ದಂಡಿನ ದುರ್ಗಾದೇವಿ ಸೇವಾ ಸಮಿತಿ, 23ನೇ ವಾರ್ಷಿಕೋತ್ಸವ ಹಾಗೂ ನವರಾತ್ರಿ ಉತ್ಸವದ ಅಂಗವಾಗಿ ದಂಡಿನ ದುರ್ಗಾದೇವಿ ಸೇವಾ ಸಮಿತಿಯ ಆಶ್ರಯದಲ್ಲಿ ಹಾಗೂ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀಶಕ್ತಿ ಸಂಘಗಳು ಮತ್ತು ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಿಂದಾಗಿ ಲಕ್ಕುಂಡಿ ಗ್ರಾಮದಲ್ಲಿ ಹಬ್ಬದ, ಸಂಭ್ರಮದ ವಾತಾವರಣವೇ ನಿರ್ಮಾಣವಾಗಿತ್ತು. ಗರ್ಭಿಣಿ ಮಹಿಳೆಯರು ಹಸಿರು ಸೀರೆಯುಟ್ಟು ಕಂಗೊಳಿಸಿದರು. ಸಂಪ್ರದಾಯದ ಪ್ರಕಾರವೇ ವೇದಿಕೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು.

ಇದನ್ನೂ ಓದಿ: ಮೈಸೂರಲ್ಲಿ ನವರಾತ್ರಿ ಸಂಭ್ರಮ, ಕರಾವಳಿಯಲ್ಲಿ ದಾಂಡಿಯಾ ಕಿಚ್ಚು: ಎಲ್ಲೆಲ್ಲಿ ಹೇಗಿದೆ ದಸರಾ ಸಂಭ್ರಮ?

ಲಕ್ಕುಂಡಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದ ಬೃಹತ್ ವೇದಿಯಲ್ಲಿ 25 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಯಿತು. ಸಂಪ್ರದಾಯದ ಪ್ರಕಾರ ಅರಿಶಿನ, ಕುಂಕುಮ, ಬಳೆ, ಉತ್ತತ್ತಿ ಕುಪ್ಪಸದೊಂದಿಗೆ ಗರ್ಭಿಣಿಯರಿಗೆ ಉಡಿ ತುಂಬಿ ಆರತಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸೋಬಾನ ಪದ ಕೂಡ ಹಾಡಲಾಯಿತು. ಸಂಘಟಕರಿಂದಲೇ ಹಸಿರು ಸೀರೆ, ಬಳೆ, ಹೂವು, ಉಡಿ ತುಂಬುವ ವಸ್ತುಗಳು ನೀಡಲಾಯಿತು. ಗರ್ಭಿಣಿ ಮಹಿಳೆಯರ ಕುಟುಂಬಸ್ಥರಿಂದ ನೈಯಾಪೈಸೆ ಪಡೆಯದೇ ಸಮಿತಿ ವತಿಯಿಂದ ಉಚಿತವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಭಾವೈಕ್ಯತೆಯ ಸೀಮಂತ ಕಾರ್ಯಕ್ರಮ

ವಿಶೇಷವಾಗಿ ಮುಸ್ಲಿಂ ಮಹಿಳೆಯು ಸಹ ಸೀಮಂತ ಮಾಡಿಸಿಕೊಂಡಿದ್ದು ವಿಶೇಷವಾಗಿತ್ತು. ಹೀಗಾಗಿ ಇದೊಂದು ಭಾವೈಕ್ಯತೆಯ ಬಿಂಬಿಸುವ ಸಾಮೂಹಿಕ ಸೀಮಂತ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ನವರಾತ್ರಿ ಹಬ್ಬದಲ್ಲಿ ಈ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಸೀಮಂತ ಮಾಡಿಸಿಕೊಂಡ ಗರ್ಭಿಣಿಯರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಭರ್ಜರಿ ಹೋಳಿಗೆ ಊಟ

ಇನ್ನು ಉತ್ತರ ಕರ್ನಾಟಕ ವಿಶೇಷ ಖಾದ್ಯವಾದ ಹೂರಣ ಹೋಳಿಗೆ, ರೊಟ್ಟಿ, ಪಾಯಸಾ, ಸಂಡಿಗೆ ಅನ್ನ, ಸಾರು ಊಟದ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಕರ್ನಾಟಕದ ಖಾದ್ಯಗಳ ನೋಡಿದ್ರೆ ಬಾಯಿಲ್ಲಿ ನೀರು ಬರುವಂತಿತ್ತು. ಹೋಳಿಗೆ ವಿಶೇಷ ಅಂದರೆ, ಅಂಗನವಾಡಿ ಶಿಕ್ಷಕಿಯರು, ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಘಗಳ ಸದಸ್ಯರೇ ಸಂಘದ ವತಿಯಿಂದ ಹೋಳಿಗೆ ಸೇರಿ ವಿವಿಧ ನಮೂನೆ ಖಾದ್ಯಗಳು ಮಾಡಿಕೊಂಡು ಬಂದಿದ್ದು ವಿಶೇಷ.

ಈ ಕಾರ್ಯಕ್ರಮ ಬೇಕಾಗುವ ಸೀರೆ, ಉಡಿ ತುಂಬು ವಸ್ತುಗಳು, ಊಟದ ವ್ಯವಸ್ಥೆ ಎಲ್ಲವೂ ದಾನಿಗಳು ನೀಡುತ್ತಾರೆ. ದೇವಿ ಸನ್ನಿಧಾನದಲ್ಲಿ ಅದ್ಧೂರಿ ಸೀಮಂತ ಕಾರ್ಯ ಮಾಡಿಸಿಕೊಂಡು ಗರ್ಭಿಣಿ ಮಹಿಳೆಯರು ಕಾರ್ಯಕ್ರಮದ ಬಳಿಕ ಭರ್ಜರಿ ಹೋಳಿಗೆ ಊಟ ಮಾಡಿ ತಮ್ಮ ಮನೆಗಳಿಗೆ ತೆರಳಿದ್ದರು. ಈ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಹೋಳಿಗೆ ಊಟ ಸವಿದರು.

ಸೀಮಂತ ಕಾರ್ಯಕ್ರಮ ಮಾತ್ರವಲ್ಲ. ಸೀಮಂತ ಕಾರ್ಯಕ್ರಮಕ್ಕೆ ಭರತನಾಟ್ಯ ಕಾರ್ಯಕ್ರಮ ಮೆರಗು ನೀಡಿತು. ವೇದಿಕೆ ಮೇಲೆ ಗರ್ಭಿಣಿಯರು ಹಸಿರು ಸೀರೆಯುಟ್ಟು ಕಂಗೊಳಸಿದರೆ, ಇತ್ತ ದೇವಿಯ ಕುರಿತು ಬಾಲಕಿಯರು ಭರತನಾಟ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ