ಮೈಸೂರಲ್ಲಿ ನವರಾತ್ರಿ ಸಂಭ್ರಮ, ಕರಾವಳಿಯಲ್ಲಿ ದಾಂಡಿಯಾ ಕಿಚ್ಚು: ಎಲ್ಲೆಲ್ಲಿ ಹೇಗಿದೆ ದಸರಾ ಸಂಭ್ರಮ?

ಮೈಸೂರಿನ ಸೋನಾರ್ ಸ್ಟ್ರೀಟ್​​​ನಲ್ಲಿರೋ ಅರ್ಜುನ ಅವಧೂತ ಗುರುಗಳ ಮನೆಯಲ್ಲೂ ಸರಸ್ವತಿ ಪೂಜೆ ಸಂಭ್ರಮ ಜೋರಾಗಿತ್ತು. ಅತ್ತ ಫೋರ್ಟ್ ಮೊಹಲ್ಲಾದ ಶಂಕರ ಮಠದ ಶ್ರೀ ಶಾರದಾಂಬೆ ದೇಗುಲದಲ್ಲೂ ಶಾರದೆಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಶ್ವೇತ ವರ್ಣದ ರೇಷ್ಮೆ ಸೀರೆ ತೊಡಿಸಿ, ಅಲಂಕಾರ ಮಾಡಲಾಗಿತ್ತು.

ಮೈಸೂರಲ್ಲಿ ನವರಾತ್ರಿ ಸಂಭ್ರಮ, ಕರಾವಳಿಯಲ್ಲಿ ದಾಂಡಿಯಾ ಕಿಚ್ಚು: ಎಲ್ಲೆಲ್ಲಿ ಹೇಗಿದೆ ದಸರಾ ಸಂಭ್ರಮ?
ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಪೂಜೆ
Follow us
TV9 Web
| Updated By: Ganapathi Sharma

Updated on: Oct 21, 2023 | 9:59 AM

ಬೆಂಗಳೂರು, ಅಕ್ಟೋಬರ್ 21: ಮೈಸೂರಲ್ಲಿ ನವರಾತ್ರಿಯ (Navratri) ಸಂಭ್ರಮ ಮನೆ ಮಾಡಿದೆ. ವಿದ್ಯಾ ದೇವತೆ ಸರಸ್ವತಿ ಪೂಜೆ ಶುಕ್ರವಾರ ನೆರವೇರಿತು. ಆದರೆ, ಕರಾವಳಿಯಲ್ಲಿ ನವರಾತ್ರಿಯ ದಾಂಡಿಯಾ ಕಿಚ್ಚು ಹಚ್ಚಿದೆ. ಹಿಂದೂಪರ ಹೋರಾಟಗಾರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೈಸೂರಲ್ಲಿ ವಿಶ್ವವಿಖ್ಯಾತ ನಾಡಹಬ್ಬ ದಸರೆಯ (Mysore Dasara) ಸಂಭ್ರಮ ಕಳೆಗಟ್ಟಿದೆ. ಜಂಬೂಸವಾರಿಗೆ ಇನ್ನೂ 3 ದಿನ ಬಾಕಿಯಿದ್ದು, ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಇದ್ರ ಜೊತೆ ನವರಾತ್ರಿ ಹಿನ್ನೆಲೆಯಲ್ಲಿ ನಿನ್ನೆ ವಿದ್ಯೆ ದೇವತೆ ಸರಸ್ವತಿ ಪೂಜೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಅರಮನೆ ಗುರುಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ದೇವಿಗೆ ನಮಿಸಿದರು. ಆದ್ಯವೀರ್ ಸಾಥ್​​ ನೀಡಿದ್ದು ವಿಶೇಷವಾಗಿತ್ತು.

ಮೈಸೂರಿನ ಸೋನಾರ್ ಸ್ಟ್ರೀಟ್​​​ನಲ್ಲಿರೋ ಅರ್ಜುನ ಅವಧೂತ ಗುರುಗಳ ಮನೆಯಲ್ಲೂ ಸರಸ್ವತಿ ಪೂಜೆ ಸಂಭ್ರಮ ಜೋರಾಗಿತ್ತು. ಅತ್ತ ಫೋರ್ಟ್ ಮೊಹಲ್ಲಾದ ಶಂಕರ ಮಠದ ಶ್ರೀ ಶಾರದಾಂಬೆ ದೇಗುಲದಲ್ಲೂ ಶಾರದೆಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಶ್ವೇತ ವರ್ಣದ ರೇಷ್ಮೆ ಸೀರೆ ತೊಡಿಸಿ, ಅಲಂಕಾರ ಮಾಡಲಾಗಿತ್ತು.

ದಸರಾ ಮಹೋತ್ಸವದ 6ನೇ ದಿನ ರೈತ ದಸರಾ ಗಮನ ಸೆಳೀತಿದೆ. ವೀರಗಾಸೆ, ತಮಟೆ, ಕಂಸಾಳೆ ಮೆರವಣಿಗೆಗೆ ರಂಗು ನೀಡಿದವು. ಹಸಿರು ಪೇಟ ತೊಟ್ಟು ಸಚಿವ ಚಲುವರಾಯಸ್ವಾಮಿ, ಶಾಸಕರು ಎತ್ತಿನಗಾಡಿ ಏರಿದ್ರು. ಇನ್ನೂ ರಾತ್ರಿಯಾಗ್ತಿದ್ದಂತೆ ಜನರು ಅಂಬಾರಿ ಬಸ್​​​​ ಏರಿ ಮೈಸೂರು ನಗರವನ್ನ ರೌಂಡ್ಸ್​ ಹಾಕಿದರು.

ಅತ್ತ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆಬಿತ್ತು. ಕಳೆದ 3 ದಿನಗಳಿಂದ ಸೆಲೆಬ್ರೆಟಿಗಳಿಲ್ಲದೆ ಸಪ್ಪೆಯಾಗಿದ್ದ ಚಾಮರಾಜನಗರ ದಸರಾ ಕೊನೆಯಲ್ಲಿ ರಂಗು ಪಡೆದುಕೊಂಡಿತ್ತು. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣರ ಸುಮದುರ ಗಾನಕ್ಕೆ ಜನರು ಫುಲ್​​ ಫಿದಾ ಆದ್ರು. ರಾ ರ ರಕ್ಕಮ್ಮ ಸಾಂಗ್​​​​ಗೆ ಬಿಂದಾಸ್ ಸ್ಟೆಪ್ಸ್ ಹಾಕುವ ಮೂಲಕ ಯುವ ಜನತೆ ದಿಲ್ ಖುಷ್ ಆದರು.

ಕರಾವಳಿಯಲ್ಲೂ ಕಳೆಗಟ್ಟಿದ ಸಂಭ್ರಮ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ನಗರಿಯಲ್ಲಿಯೂ ನವರಾತ್ರಿ ಸಂಭ್ರಮ‌ ಜೋರಾಗಿದೆ. ಉತ್ಸವದ ನಿಮಿತ್ತ ನಿನ್ನೆ ದಾಂಡಿಯ ಹಾಗೂ ಗರ್ಬಾ ನೃತ್ಯವನ್ನು ಆಯೋಜಿಸಿದ್ದರು. ರಾಜಸ್ಥಾನ, ಗುಜರಾತ್, ಪಂಜಾಬ್​​ಗೆ ಸೀಮಿತ ಎನ್ನಲಾದ ದಾಂಡಿಯಾ, ಗರ್ಬಾ ನೃತ್ಯವನ್ನ ಜಾತಿ ಧರ್ಮ ಭೇದ ಭಾವವಿಲ್ಲದೇ ಮಹಿಳೆಯರು, ಮಕ್ಕಳು, ಪುರುಷರು ಒಟ್ಟಾಗಿ ಪಾಲ್ಗೊಂಡು ಸಂಭ್ರಮನಿಸಿದರು.

ಇದನ್ನೂ ಓದಿ: ವಿಹೆಚ್​ಪಿ ವಿರೋಧದ ನಡುವೆ ದಾಂಡಿಯಾ ನೃತ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಮಂಗಳೂರು ಪೊಲೀಸರು

ಮಂಗಳೂರಲ್ಲಿ ವಿವಾದ

ನವರಾತ್ರಿ ಸಂಭ್ರಮದಲ್ಲಿದ್ದ ಮಂಗಳೂರಲ್ಲಿ ವಿವಾದವೊಂದು ಭುಗಿಲೆದ್ದಿದೆ. ದಸರೆ ಸಂಭ್ರಮಕ್ಕಾಗಿ ನಗರದ ಪ್ರತಿಷ್ಠಿತ ಹೋಟೆಲ್, ಮಾಲ್​​ಗಳಲ್ಲಿ ದಾಂಡಿಯಾ ನೈಟ್ಸ್ ಇವೆಂಟ್ ಆಯೋಜಿಸಲಾಗುತ್ತದೆ. ಆದರೆ ಇಂತಹ ಇವೆಂಟ್​​ಗಳಿಗೆ ಕಡಿವಾಣ ಹಾಕಬೇಕು ಎಂದು ಹಿಂದೂ ಸಂಘಟನೆಗಳು ಅಗ್ರಹಿಸಿದ್ದು, ಹೋರಾಟದ ಎಚ್ಚರಿಕೆ ನೀಡಿವೆ. ಇದರಿಂದ ದಾಂಡಿಯಾ ನೈಟ್ಸ್ ಇವೆಂಟ್ ಕಾರ್ಯಕ್ರಮ ನಡೆಯುವ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯ ವ್ಯವಸ್ಥೆಯನ್ನೂ ಕಲ್ಪಿಸುವ ಕುರಿತು ಚಿಂತಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ