ವಿಹೆಚ್ಪಿ ವಿರೋಧದ ನಡುವೆ ದಾಂಡಿಯಾ ನೃತ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಮಂಗಳೂರು ಪೊಲೀಸರು
ದಾಂಡಿಯಾ ನೃತ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ದುರ್ಗವಾಹಿನಿ ಸಂಘಟನೆ ಮನವಿ ಮಾಡಿತ್ತು. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುಮತಿ ನೀಡುವ ಒಮ್ಮತಕ್ಕೆ ಬರಲಾಗಿದೆ. ಅದರಂತೆ, ದಾಂಡಿಯಾ ನೃತ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು, ಅ.20: ದಾಂಡಿಯಾ ನೃತ್ಯ ಕಾರ್ಯಕ್ರಮಕ್ಕೆ ಮಂಗಳೂರು ಪೊಲೀಸರು ಅನುಮತಿ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಈ ಬಗ್ಗೆ ಮಂಗಳೂರು (Mangaluru) ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮಕ್ಕೆ ಅಸ್ತು ಎನ್ನಲಾಗಿದೆ. ಹೀಗಾಗಿ ದಾಂಡಿಯಾ ನೃತ್ತ ಕಾರ್ಯಕ್ರಮಕ್ಕೆ ಪೊಲೀಸರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಅದರಂತೆ, ಉತ್ತರ ಭಾರತದಿಂದ ದಾಂಡಿಯಾ ನೃತ್ಯ ಕಲಾವಿದರು ಆಗಮಿಸಿದ್ದಾರೆ. ಇಂದಿನಿಂದ 4 ದಿನ ಮಂಗಳೂರಿನ 23 ಕಡೆ ದಾಂಡಿಯಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಸ್ಮಾರ್ಟಿ ಸಿಟಿ ಮಂಗಳೂರಿಗೆ ರಸ್ತೆಗಳ ಅಗೆತದ ಕಪ್ಪು ಚುಕ್ಕೆ: ಗೇಲ್ ಪೈಪ್‌ಲೈನ್, ಬಿಎಸ್ಎನ್ಎಲ್ ಸೇರಿ ಹಲವು ಇಲಾಖೆಗಳಿಂದ ಅಧ್ವಾನ
ನವರಾತ್ರಿಯ ಸಂದರ್ಭದಲಲ್ಇ ಉತ್ತರ ಭಾರತದಲ್ಲಿ ನಡೆಯುವಂತಹ ದಾಂಡಿಯಾ ನೃತ್ಯ (ಗರ್ಬ) ಹೆಸರಿನಲ್ಲಿ ಮಂಗಳೂರಿನಲ್ಲಿ ಕೆಲವೊಂದು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಇದಕ್ಕೆ ಎಲ್ಲಾ ಯುವಕ ಯುವತಿಯರು ಮುಕ್ತವಾಗಿ ಭಾಗವಹಿಸುವಂತೆ ಆಮಂತ್ರಣ ಹಂಚಿಕೊಂಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ಅಲ್ಲದೆ, ದಾಂಡಿಯಾ ನೃತ್ಯ ಜಗನ್ಮಾತೆ ದುರ್ಗಾದೇವಿ ಹೆಸರಿನಲ್ಲಿ ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕಳೆದ ವರ್ಷಗಳಲ್ಲಿ ನಡೆದ ಇಂತಹ ಕಾರ್ಯಕ್ರಮದಲ್ಲಿ ಡ್ರಗ್ಸ್, ಮಾಧಕ ವಸ್ತು ದ್ರವ್ಯ ಸೇವನೆ, ಅಸಭ್ಯ ನೃತ್ಯಗಳ ಬಗ್ಗೆ ದೂರುಗಳು ಬಂದಿದ್ದವು. ಅಲ್ಲದೆ, ಧಾರ್ಮಿಕ ಕಾರ್ಯಕ್ರಮ ಈ ರೀತಿಯಲ್ಲಿ ನಡೆದರೆ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದಾಗಿ ಪತ್ರದಲ್ಲಿ ಮನವಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ