ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿ ಫೋಬಿಯಾ, ಲೋಕಸಭೆ ಚುನಾವಣೆಯಲ್ಲಿ ಅಂತ್ಯ ಸಂಸ್ಕಾರ ಆಗಲಿದೆ: ಜೆಡಿಎಸ್​​ ವಾಗ್ದಾಳಿ

ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್​​ಗಳ ಆವಿಷ್ಕಾರದಲ್ಲಿ ತೊಡಗಿದೆ. ತುಷ್ಟೀಕರಣ ಮಾಡುತ್ತಲೇ ಕಾಶ್ಮೀರಕ್ಕೆ ಮರಣಶಾಸನ ಬರೆದಿದ್ದ ಹೇಯ ಪಕ್ಷವು ಈಗ ಆತ್ಮಗೌರವ ಎಂದು ಹಲುಬುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.

ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿ ಫೋಬಿಯಾ, ಲೋಕಸಭೆ ಚುನಾವಣೆಯಲ್ಲಿ ಅಂತ್ಯ ಸಂಸ್ಕಾರ ಆಗಲಿದೆ: ಜೆಡಿಎಸ್​​ ವಾಗ್ದಾಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Oct 20, 2023 | 4:51 PM

ಬೆಂಗಳೂರು, ಅಕ್ಟೋಬರ್ 20: ಜಿನ್ನಾ ಜೀನ್ಸಿನ ಕಾಂಗ್ರೆಸ್ (Congress) ಪಕ್ಷಕ್ಕೆ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಫೋಬಿಯಾ ಶುರುವಾಗಿದೆ. ಆ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಅಂತ್ಯ ಸಂಸ್ಕಾರ ಆಗಲಿದೆ ಎಂದು ಜೆಡಿಎಸ್​ ವಾಗ್ದಾಳಿ ನಡೆಸಿದೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸರಣಿ ಪೋಸ್ಟ್​ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ಜೆಡಿಎಸ್, ತುಷ್ಟೀಕರಣ ಮಾಡುತ್ತಲೇ ಕಾಶ್ಮೀರಕ್ಕೆ ಮರಣಶಾಸನ ಬರೆದಿದ್ದ ಹೇಯ ಪಕ್ಷವು ಈಗ ಆತ್ಮಗೌರವ ಎಂದು ಹಲುಬುತ್ತಿದೆ ಎಂದು ಟೀಕಿಸಿದೆ.

‘ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್​​ಗಳ ಆವಿಷ್ಕಾರದಲ್ಲಿ ತೊಡಗಿದೆ. ತುಷ್ಟೀಕರಣ ಮಾಡುತ್ತಲೇ ಕಾಶ್ಮೀರಕ್ಕೆ ಮರಣಶಾಸನ ಬರೆದಿದ್ದ ಹೇಯ ಪಕ್ಷವು ಈಗ ಆತ್ಮಗೌರವ ಎಂದು ಹಲುಬುತ್ತಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲ್, ನೇತಾಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ.ನರಂಹರಾವ್ ಸೇರಿ ಅನೇಕ ಮಹಾಪುರುಷರ ಕೀರ್ತಿಗೆ ಗ್ರಹಣ ಹಿಡಿಸಿ ಆತ್ಮರತಿ ಮಾಡಿಕೊಂಡ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಅಂತ್ಯ ಸಂಸ್ಕಾರ ಆಗಲಿದೆ’ ಎಂದು ಜೆಡಿಎಸ್ ಕಿಡಿ ಕಾರಿದೆ.

ಅಂಗಿ ಹರಿದುಕೊಂಡು, ರಾತ್ರಿ ವೇಳೆ ತೂರಾಡಿಕೊಂಡು ಯಾರು ಓಡಾಡುತ್ತಿದ್ದಾರೆ ಎನ್ನುವುದನ್ನು ಮಾಧ್ಯಮಗಳೇ ತೋರಿಸಿವೆ. ಕೆಲ ದಿನ ಕಾಯಿರಿ, ಅಂಗಿ ಹರಿದುಕೊಳ್ಳುವ ಸ್ಥಿತಿ ಯಾರಿಗೆ ಕಾದಿದೆಯೋ ನೋಡೋಣ. 135 ಶಾಸಕರಿದ್ದಾರೆ ಎಂದು ಬೀಗಿದ್ದೇ ಬಂತು. ಈಗ ಒಂದು ಪಾರ್ಟಿ, ಹತ್ತಾರು ಬಣ ಎನ್ನುವ ಕಾಂಗ್ರೆಸ್ ನ ಬುಡವೇ ಬಿದ್ದುಹೋಗುವ ಪರಿಸ್ಥಿತಿ ಸೃಷ್ಟಿ ಆಗುತ್ತಿದೆ. ಹತಾಶೆ, ಮತಿಭ್ರಮಣೆ ಯಾರಿಗೆ..? ಅರ್ಥವಾಗದಷ್ಟು ಅಜ್ಞಾನವೇ ನಿಮಗೆ ಎಂದು ಜೆಡಿಎಸ್ ಪ್ರಶ್ನಿಸಿದೆ.

ಜಾತ್ಯತೀತ ಎನ್ನುತ್ತ ಒಕ್ಕಲಿಗರನ್ನು ಎತ್ತಿಕಟ್ಟುವ ನೀಚ ಪ್ರಯತ್ನಕ್ಕೂ ಕೈ ಹಾಕಿದೆ ಕಾಂಗ್ರೆಸ್. ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು, ಸಂಸ್ಕೃತಿಹೀನರು ಎನ್ನುವ ಕೊಳಕು ಹೇಳಿಕೆ ಹಿಂದೆ ಇದೇ ಕಾಂಗ್ರೆಸ್ಸಿನ ಟೂಲ್ ಕಿಟ್ ಷಡ್ಯಂತ್ರ ಅಡಗಿದೆ. ಆ ಭಾಗವಾಗಿ ಒಕ್ಕಲಿಗರ ಕುಲದೈವ ಶ್ರೀ ಭೈರವೇಶ್ವರ ದೇವರನ್ನು, ಪರಮಪೂಜ್ಯ ಶ್ರೀಗಳನ್ನು ಎಳೆದು ತಂದಿರುವುದು ಅಕ್ಷಮ್ಯ ಹಾಗೂ ಒಕ್ಕಲಿಗರನ್ನು ಕೆಣಕುವ ದುಷ್ಟ ಹುನ್ನಾರವಲ್ಲದೆ ಬೇರೇನೂ ಅಲ್ಲ ಎಂದು ದಳ ಟೀಕಿಸಿದೆ.

ಅಲ್ಪಸಂಖ್ಯಾತರನ್ನು ತನ್ನ ರಾಜಕೀಯ ಲಾಭಕ್ಕಾಗಿ ಎತ್ತಿಕಟ್ಟುತ್ತಾ ಬಹುಸಂಖ್ಯಾತರ ವಿರುದ್ಧ ಛೂ ಬಿಡುತ್ತಿರುವುದು ಕೂಡ ಕಾಂಗ್ರೆಸ್ ಕಿಡಿಗೇಡಿ ಟೂಲ್ ಕಿಟ್ ನ ಒಳಸಂಚು. ಅವರನ್ನು ತನ್ನ ಸ್ವಾರ್ಥಕ್ಕಾಗಿ ಸಮಾಜದಿಂದಲೇ ಪ್ರತ್ಯೇಕಿಸುವ ಕೀಳು ರಾಜಕೀಯ ಮಾಡುತ್ತಿದೆ. ಆರೋಗ್ಯಕರ ಸಮಾಜಕ್ಕೆ ಕೊಳಕುಮಂಡಲದಂತೆ ತನ್ನ ಕೆನ್ನಾಲಿಗೆ ಮೂಲಕ ವಿಷಪ್ರಾಶನ ಮಾಡುತ್ತಿದೆ. ಕುಮಾರಸ್ವಾಮಿ ಅವರು ಟೋಪಿ ಧರಿಸಿದರು, ಮಸೀದಿಗೆ ಹೋದರು, ಬಿರಿಯಾನಿ ತಿಂದರು. ಇದೇನೋ ಸರಿ. ಆದರೆ, ತುರ್ತು ಪರಿಸ್ಥಿತಿ ವೇಳೆ ಸಂಜಯಗಾಂಧಿ ಮಾಡಿದ್ದನ್ನು ಕುಮಾರಸ್ವಾಮಿ ಅವರು ಮಾಡಿದ್ದಾರೆಯೇ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಲೀಗ್ ಅನ್ನು ಎತ್ತಿಕಟ್ಟಿ ದೇಶ ಒಡೆದ ದೇಶದ್ರೋಹವನ್ನು ಅವರು ಎಸಗಿದ್ದಾರೆಯೇ? ಹಾಗಾದರೆ, ನಿಮ್ಮ ಅರ್ಥದಲ್ಲಿ ಶಿರದ ಮೇಲೆ ಮುಸ್ಲಿಮರು ಧರಿಸುವ ಟೋಪಿ ಮಕ್ಮಲ್ ಟೋಪಿಯೇ? ಮುಸ್ಲಿಮರ ಟೋಪಿಗೂ ಅಪಮಾನ ಮಾಡಿದೆ ಕಾಂಗ್ರೆಸ್ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ತಿಹಾರ್ ಜೈಲುಹಕ್ಕಿಯನ್ನೇ ಅಧ್ಯಕ್ಷ ಎಂಬ ಗತಿಗೆಟ್ಟ ಕಾಂಗ್ರೆಸ್: ಜೆಡಿಸ್ ವ್ಯಂಗ್ಯ

ತಿಹಾರ್ ಜೈಲುಹಕ್ಕಿಯನ್ನೇ ಅಧ್ಯಕ್ಷ ಎಂದು ಒಪ್ಪಿಕೊಂಡಿರುವ ಗತಿಗೆಟ್ಟ, ನೀತಿಗೆಟ್ಟ ಕಾಂಗ್ರೆಸ್, ಮೈತ್ರಿ ಬಗ್ಗೆ ಭಸ್ಮಾಸುರ ಕಥೆ ಹೇಳುತ್ತಿದೆ. ಇವತ್ತು ಅಕ್ಕಪಕ್ಕ ಕೂರಿಸಿಕೊಂಡಿರುವ ಮೈತ್ರಿಪಕ್ಷಗಳ ನಾಯಕರಿಗೆ ಕೊಟ್ಟಿದ್ದ ಕಿರುಕುಳ ಜಗದ್ವಿಖ್ಯಾತಿ. ಕರುಣಾನಿಧಿ ಅವರ ಸರಕಾರವನ್ನೇ ವಜಾ ಮಾಡಿ, ಈಗ ಅವರ ಮಗ ಸ್ಟಾಲಿನ್ ಜತೆಯೂ ಲಜ್ಜೆ ಇಲ್ಲದೆ ಅಡ್ಜಸ್ಟ್ ಮಾಡಿಕೊಂಡು, ಅವರಿಗೆ ಕಾವೇರಿ ಹಿತವನ್ನು ಅಡವಿಟ್ಟ ಕಾಂಗ್ರೆಸ್ ಬಗ್ಗೆ ಬೀದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಲೇವಡಿ ಮಾಡಿದೆ.

ನಿಯತ್ತಿನ ಬಗ್ಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಇರುವ ವಿರುದ್ಧ ಪದಗಳಲ್ಲಿ ನಿಯತ್ತು ಕೂಡ ಒಂದು. ನೀತಿ, ನಿಯತ್ತು ಎಂದರೆ ಅದಕ್ಕೆ ಗಾವುದ ದೂರ. ಚರಿತ್ರೆ ಬಿಚ್ಚಿಟ್ಟರೆ ಕಾಂಗ್ರೆಸ್ ಮುಖವೇ ಕೊಳಕುಮಂಡಲದಂತೆ ಮುದುಡಿಕೊಳ್ಳುತ್ತಿದೆ. ಎಷ್ಟೋ ಪ್ರಾದೇಶಿಕ ಪಕ್ಷಗಳನ್ನು ಹಸ್ತಪಕ್ಷ ಆಪೋಶನ ತೆಗುಕೊಂಡಿದ್ದೇ ಒಂದು ಅಮರಚಿತ್ರ ಕಥೆ. ಪರಕೀಯ ವಿಚಾರಧಾರೆ ಮೂಲಕ ಈಗಲೂ ಬ್ರಿಟಿಷ್ ಗುಲಾಮಿ ಮನಃಸ್ಥಿತಿಯಲ್ಲಿದೆ ಕಾಂಗ್ರೆಸ್. ದುರಂತಕ್ಕೆ ಈಗ ಇನ್ನೊಬ್ಬರ ಆತ್ಮಸಾಕ್ಷಿ ಬಗ್ಗೆ ಅಲವತ್ತುಕೊಳ್ಳುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.

ಆಡಳಿತ ಪಕ್ಷಕ್ಕೆ ಆಕ್ರೋಶ, ಹತಾಶೆ, ಆತಂಕ, ಅನುಕಂಪ ಇರಬೇಕು, ತಪ್ಪಲ್ಲ. ಆದರೆ, ಹೊಟ್ಟೆಯಲ್ಲಿರುವ ಅಸಹ್ಯವನ್ನೆಲ್ಲ ಬಾಯಲ್ಲಿ ಕಾರಿಕೊಳ್ಳುವ ವಿಕೃತಿ ಮಾತ್ರ ಇರಲೇಬಾರದು. ಹೀಗಂತ ಹೇಳಲು ನಾವು ಗಂಭೀರವಾಗಿ ವಿಷಾದಿಸುತ್ತೇವೆ. ನಾಮ ಹಾಕುವುದರಲ್ಲಿ ಕರ್ನಾಟಕ ಕಾಂಗ್ರೆಸ್ ಪರಮ ನಿಸ್ಸೀಮ; ಅದಕ್ಕೆ ಸಾವಿರದೆಂಟು ಉದಾಹರಣೆ ಕೊಡಬಹುದು. ಈಗ ಹೇಳಿ; ಕೊಳಕುಮಂಡಲ ಯಾವುದು? ಅದೇ ಕಾಂಗ್ರೆಸ್ ಅಲಿಯಾಸ್ ಕೊಳಕುಗ್ರೆಸ್ ಎಂದು ಜೆಡಿಎಸ್ ಕುಹಕವಾಡಿದೆ.

ಒಂದೆಡೆ ಆದಾಯ ತೆರಿಗೆಯವರಿಗೆ #SST, #YST ಬಾಬ್ತುಗಳ ಕಂತೆ ಕಂತೆ ಹಣ ಸಿಕ್ಕಿದೆ. ಸಿಎಂ, ಡಿಸಿಎಂ ಪಟಾಲಂ ಪರಿಶ್ರಮದಿಂದ ಬಾಚಿದ್ದ ಪಾಪದ ಹಣ ಕೈ ತಪ್ಪಿದೆ. ಐಟಿ, ಈಡಿ ಕುಣಿಕೆ ಯಾರಿಗೆಲ್ಲ ಬಿಗಿದುಕೊಳ್ಳಲಿದೆಯೋ ಗೊತ್ತಿಲ್ಲ. ಸಾಹುಕಾರ ಸಿವಕುಮಾರ ಸುಲ್ತಾನನಿಗೂ ಸಿಬಿಐ ಸಿಕ್ಕು ಬಿದ್ದಿದೆ. ಇದೆಲ್ಲಾ ಹೋಗಲಿ ಎಂದರೆ, ಕರ್ನಾಟಕ ಕಾಂಗ್ರೆಸ್ ಸರಕಾರಕ್ಕೆ 5 ತಿಂಗಳು ತುಂಬುವ ಮೊದಲೇ ಬೆಳಗಾವಿ ಜ್ವಾಲೆ ಭುಗಿಲೆದ್ದಿದೆ. ಅಂತಃಪುರದ ಕಲಹ ಹಾದಿಬೀದಿಗಳಲ್ಲಿ ಮೂರು ಕಾಸಿಗೆ ಬಿಕರಿಯಾಗುತ್ತಿದೆ. ಇನ್ನು ಕಕ್ಕಿಕೊಳ್ಳುವುದು ಬಿಟ್ಟರೆ ಇನ್ನೇನಿದೆ ಎಂದು ಜೆಡಿಎಸ್ ಪ್ರಶ್ನಿಸಿದೆ.

‘ಕಾಂಗ್ರೆಸ್‌ ವಕ್ರರೇಖೆಗಳ ಹೊಲಸುಗುಚ್ಛ!’

ಕಾಂಗ್ರೆಸ್‌ ವಕ್ರರೇಖೆಗಳ ಹೊಲಸುಗುಚ್ಛ! ಅಷ್ಟಾವಕ್ರನ ಅಪರಾವತಾರಿ. ನಾಮ, ಪಂಗನಾಮ, ಉಂಡೆನಾಮಗಳೆಲ್ಲ ಅದರ ಆಜನ್ಮ ಆಸ್ತಿ. ಕೊಳಕು, ಹುಳಕು, ಥಳುಕು ಅದರ ಪೇಟೆಂಟು. ಭಾರತೀಯ ಅಸ್ಮಿತೆಯ ನೈಜ ಶತ್ರು, ದೇಶದ್ರೋಹಿಗಳ ಆಪ್ತಬಂಧು, ಹಸ್ತಿನಾವತಿಯಲ್ಲೇ ಅಡ್ರಸ್ಸಿಲ್ಲದ ಪಕ್ಷ, ಕರ್ನಾಟಕ ಜೋಡೋ ಬದಲು ಕಾವೇರಿ ತೋಡೋ ಎನ್ನುತ್ತಿದೆ. ಅನುಮಾನವೇಕೆ? ಕೊಳಕು ಮಂಡಲ, ಬಚ್ಚಲು ಬಾಯಿ ಎಂದರೆ ಅದು ಕಾಂಗ್ರೆಸ್ಸೇ. ಈಗ ನಾಲಿಗೆ. ನಾಲಿಗೆ ಎನ್ನುತ್ತಿದೆ, ಛೀ, ಹೇಸಿಗೆ. ಕಾಂಗ್ರೆಸ್ ನಾಲಿಗೆ ಗಬ್ಬೆದ್ದು ಬಹಳ ವರ್ಷವೇ ಆಗಿದೆ. ಜಾತ್ಯತೀತತೆ ಎನ್ನುವುದು ಆ ಕೊಳಕು ಪಕ್ಷದ ಥಳುಕು ಬಳಕಷ್ಟೇ. ಗೆಲ್ಲುವ ತನಕ ಜಾತ್ಯತೀತ, ಗೆದ್ದ ಮೇಲೆ ಜಾತಿಗಣಿತ! ಇದೇ ಅದರ ಮತ ಗಳಿಕೆಯ ಮೂಲ ಬಂಡವಾಳ. ತನ್ನ ಮುಖವನ್ನು ಕನ್ನಡಿಯಲ್ಲೂ ನೋಡಿಕೊಳ್ಳಲಾಗದ ದೈನೇಸಿ ಡರ್ಟಿಪಾರ್ಟಿ, ಪರರ ಹಂಗಿನಲ್ಲಿಯೆ ಬದುಕುವ ಪರಾವಲಂಬಿ! ಎಂದು ಜೆಡಿಎಸ್ ಕಿಡಿಕಾರಿದೆ.

ಸರಕಾರಗಳನ್ನು ಕೊಲ್ಲುವ, ಹೆಗಲು ಕೊಟ್ಟವರನ್ನೇ ಮೇಲೆತ್ತಿದ ಪಕ್ಷಗಳನ್ನೇ ಕೊಳಕುಮಂಡಲದಂತೆ ಕಚ್ಚುವ ಕೈ ಪಕ್ಷ ರಾಮಾಯಣ, ಮಹಾಭಾರತದಿಂದ ಎರವಲು ಪಡೆದದ್ದೇ ಅದೇ ಮಂಥರೆ, ಶಕುನಿಯ ಕುತಂತ್ರವನ್ನೇ. ಆಶ್ರಯ, ಅನ್ನ ಕೊಟ್ಟ ಪಕ್ಷಕ್ಕೇ ಕನ್ನ ಕೊರೆಯುವ, ಉಂಡ ಮನೆಗೇ ಎರಡನ್ನು ಬಗೆಯುವ ಮೀರ್‌ʼಸಾದಿಕರ ಆಡಂಬೋಲವೇ ಕಾಂಗ್ರೆಸ್. 75 ವರ್ಷದ ಈ ಪರದೇಸಿ ಪಕ್ಷದ್ದು ಸಮಾಜವಾದ, ಸಮತಾವಾದ, ಪ್ರಜಾಪ್ರಭುತ್ವವಾದ ಅಲ್ಲ, ಅದರದ್ದೇನಿದ್ದರೂ ‘ಮೀರುಸಾದಿಕವಾದ!’; ಆ ಹಸ್ತವಾಸಿ ಲೋಕವಿಖ್ಯಾತಿ. ಕಾಂಗ್ರೆಸ್ ತನಗಿರುವ ಬಿರುದು ಬಾವಲಿಗಳನ್ನು ಇನ್ನೊಬ್ಬರ ಹಣೆಗೆ ಕಟ್ಟುವ ಕೀಳು ಕಸುಬಿಗೆ ಕೈ ಹಾಕಿದೆ. ಗೋಮುಖವ್ಯಾಘ್ರವೇ ಈಗ ಕುಮಾರಸ್ವಾಮಿ ಅವರನ್ನು ಗೋಸುಂಬೆ ಎಂದು ನಿಂದಿಸುತ್ತಿದೆ. ಅಕ್ರಮ, ಅವ್ಯವಹಾರ, ಅನಾಚಾರ.. ಅಷ್ಟೇ ಅಲ್ಲ, ವಾಮಾಚಾರದ ವೀರನೇ ರಾಜ್ಯ ಕಾಂಗ್ರೆಸ್ ಸಾರಥಿ ಎಂದು ಜನತಾ ದಳ ಟೀಕಿಸಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಲಂಚಕ್ಕೂ ಟಿಪ್ಸ್​ಗೂ ವ್ಯತ್ಯಾಸವಿದೆ, ನಾನು ದುಡ್ಡು ಕೊಟ್ಟೇ ಕೆಲ್ಸ ಮಾಡ್ಸೋದೆಂದ ಶಾಸಕ ಟಿಡಿ ರಾಜೇಗೌಡ

ಜಾತ್ಯತೀತತೆ ತನ್ನದೇ ಗುತ್ತಿಗೆ ಎಂದು ಕರ್ಣಕಠೋರ ಸುಳ್ಳು ಹೇಳುತ್ತಾ ಅದನ್ನು ಬಿಹಾರದ ನಿತೀಶ್ ಕುಮಾರ್ ಅವರ ಮನೆ ಹಿತ್ತಲಲ್ಲಿ ಹೂತು ಸಮಾಧಿ ಮಾಡಿದೆ ಕಾಂಗ್ರೆಸ್. ಈಗ ಜಾತಿ-ಜಾತಿ ಎನ್ನುತ್ತಾ ಜಾತಿಗಣಿತ ಎಂಬ ಅಪಾಯಕಾರಿ ಆಟ ಆರಂಭಿಸಿ ಚುನಾವಣೆಗೆ ಮುನ್ನವೇ ಟೂಲ್ ಕಿಟ್ ರೆಡಿ ಮಾಡಿಟ್ಟಿದೆ. ಈ ದುಷ್ಟ ಟೂಲುಕಿಟ್ಟಿನ ಕಿರಾತಕ ಕಾರ್ಯಾಗಾರ ಇಟಲಿಯಲ್ಲಿದೆಯೋ ಅಥವಾ ಲುಲೂ ಮಾಲಿನ ಮೇಲಿದೆಯೋ? ರಾಜ್ಯವನ್ನು ತುಷ್ಟೀಕರಣದ ಬಿಸಿತುಪ್ಪದಲ್ಲಿ ಬೇಯಿಸಲು ನಡೆಯುತ್ತಿರುವ ಟೂಲ್ ಕಿಟ್ ಕಾರ್ಯಾಗಾರದಲ್ಲಿ ಕೋಮು ಕುಂಡ ಸಿದ್ಧಪಡಿಸಿದೆ ಕೈ ಪಕ್ಷ. ಶಿವಮೊಗ್ಗದಲ್ಲಿ ನಡೆದಿದ್ದು ಅದರ ಸ್ಯಾಂಪಲ್ಲಾ? ಅದನ್ನು ರಾಜ್ಯವ್ಯಾಪಿ ವಿಸ್ತರಿಸಲು ಹುನ್ನಾರವಾ? ಕುಮಾರಸ್ವಾಮಿ ಅವರನ್ನು ವಚನ ಭ್ರಷ್ಟರು ಎನ್ನುತ್ತೀರಿ. ಮೈತ್ರಿ ಸರಕಾರ ತೆಗೆದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೇ ಒಳಏಟು ಕೊಟ್ಟ ಸಿದ್ದಪುರುಷರನ್ನೇ ಸಿಎಂ ಮಾಡಿಕೊಂಡಿದ್ದೀರಿ. ಸಿಗ್ಗು, ಲಜ್ಜೆ ಇಲ್ಲವೇ? ಪಕ್ಷ ವಿರೋಧಿಗೇ ಪಟ್ಟ ಕಟ್ಟಿ, ಪಕ್ಷದ ಚಟ್ಟ ಎತ್ತಿದ ಈ ರಾಜಕಾರಣಕ್ಕೆ ಏನೆಂದು ಹೇಳಬೇಕು ಎಂದು ದಳಪತಿಗಳು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಕಳ್ಳಸುಳ್ಳಿನ ಫ್ಯಾಕ್ಟರಿ: ಜೆಡಿಎಸ್ ಕಿಡಿ

ಕಾಂಗ್ರೆಸ್‌ ಕಳ್ಳಸುಳ್ಳಿನ ಫ್ಯಾಕ್ಟರಿ. ಅಪ್ಪಟ ಅಸತ್ಯಗಳ ಅಡ್ಡೆ. ದೇಶದ್ರೋಹಿಗಳ ಪರವಿರುವ ಪಾತಕ ಪಕ್ಷ. ಒಂದು ಸಮುದಾಯದ ತುಷ್ಠೀಕರಣದ ನಗದೀಕರಣವೇ ಅದರ ಅರ್ಥಶಾಸ್ತ್ರ. ವಿ.ಪಿ.ಸಿಂಗ್, ಚಂದ್ರಶೇಖರ್, ಹೆಚ್.ಡಿ.ದೇವೇಗೌಡರು, ಐಕೆ ಗುಜ್ರಾಲ್ ಸರಕಾರಗಳನ್ನು ಬಲಿ ಪಡೆದ ಕೊಲೆಗೆಡುಕ ಪಕ್ಷ. ಕೇರಳದ EMS ನಂಬೂದರಿಪಾಡ್ ಅವರ ಸರಕಾರದಿಂದ ಮೊದಲುಗೊಂಡು ಆ ಪಕ್ಷ ನಡೆಸಿದ ರಾಜ್ಯ ಸರಕಾರಗಳ ನರಮೇಧದ ಪಟ್ಟಿಯೇ ಹನುಮನ ಬಾಲದಷ್ಟು. ನಯವಂಚನೆ, ವಿಶ್ವಾಸದ್ರೋಹವೇ ಕಾಂಗ್ರೆಸ್ ಲಾಂಛನ. ಮೈತ್ರಿಯಿಂದ ಮದ್ರಾಸ್‌ ಐ ಬಂದ ಹಾಗೆ ಪತರಗುಟ್ಟುತ್ತಿದೆ ಎಂದು ಜೆಡಿಎಸ್ ಟೀಕಾ ಪ್ರಹಾರ ನಡೆಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ