ಗಂಡನ ಮನೆಯಲ್ಲಿದ್ದ ಮಗಳನ್ನು ಅಪಹರಿಸಿದ ಪೋಷಕರು; ಎರಡೇ ದಿನದಲ್ಲಿ ದಂಪತಿಯನ್ನ ಒಂದು ಮಾಡಿದ ಪೊಲೀಸ್ರು

ಆತ ಆ ಹುಡುಗಿಯನ್ನ ಮದುವೆಯೊಂದರಲ್ಲಿ ನೋಡಿ, ಪರಿಚಯ ಮಾಡಿಕೊಂಡು ಪ್ರೀತ್ಸೆ ಪ್ರೀತ್ಸೆ ಅಂತಿದ್ದ. ಆಗ ಇಬ್ಬರ ನಡುವೆ ಪ್ರೀತಿಯೂ ಹುಟ್ಟಿದೆ. ಆದ್ರೆ, ‌ಹುಡುಗಿ ಮನೆಯವರ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾದ ಈ ಜೋಡಿ ಹಕ್ಕಿಗಳು, ಹೊಸ ಜೀವನ ನಡೆಸಬೇಕೆಂದು ನೂರಾರು ಕನಸು ಕಂಡಿದ್ರು‌. ಅಷ್ಟರಲ್ಲಿ ಯುವತಿ ಮನೆಯವರು ಮನೆಗೆ ನುಗ್ಗಿ ಹುಡುಗಿಯನ್ನ ಕಿಡ್ನ್ಯಾಪ್​ ಮಾಡಿದ್ದರು. ಇದೀಗ ಮತ್ತೆ ನವಜೋಡಿಗಳು ಒಂದಾಗಿದೆ.

ಗಂಡನ ಮನೆಯಲ್ಲಿದ್ದ ಮಗಳನ್ನು ಅಪಹರಿಸಿದ ಪೋಷಕರು; ಎರಡೇ ದಿನದಲ್ಲಿ ದಂಪತಿಯನ್ನ ಒಂದು ಮಾಡಿದ ಪೊಲೀಸ್ರು
ಅಭಿಷೇಕ್, ಐಶ್ವರ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 16, 2023 | 11:29 AM

ಗದಗ: ಮದುವೆಯಾಗಿ ಒಂದೇ ತಿಂಗಳಲ್ಲೇ ಜೋಡಿ ದೂರ ಆಗಿದ್ದರು, ಈ ಕುರಿತು ಆಕೆಯ ಗಂಡ ಠಾಣೆಗೆ ದೂರು ನೀಡಿದ್ದ. ಇದೀಗ ಗದಗ ಪೊಲೀಸರ ಕಾರ್ಯಾಚರಣೆಯಿಂದ ಜುಲೈ 14 ರಂದು ಹುಡಗಿಯನ್ನು ಮತ್ತೆ ಗಂಡನ ಮನೆಗೆ ಸೇರಿಸಿದ್ದಾರೆ. ನಿನ್ನೆ ಅದ್ಧೂರಿ ರಿಸೆಪ್ಷನ್ ಕೂಡ ನಡೆದಿದೆ. ಹೀಗೆ ನಗು ನಗುತಾ ಸಪ್ತಪದಿ ತುಳಿದಿರುವ ಈ ಜೋಡಿಯ ಹೆಸರು ಅಭಿಷೇಕ್ ಐಶ್ವರ್ಯ. ಗದಗ(Gadag) ನಗರದ ಡಿಸಿ ಮಿಲ್ ಪ್ರದೇಶದ ಯುವಕ ಅಭಿಷೇಕ್. ಹುಬ್ಬಳಿ ನಿವಾಸಿಯಾಗಿರುವ ಐಶ್ವರ್ಯಳನ್ನ ಕಳೆದ ಎರಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ನೋಡಿ ಹುಡುಗಿ ಪರಿಚಯವಾಗಿದ್ದಳು. ಅಂದು ಆರಂಭವಾದ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಬೇಕೆಂದು ನಿರ್ಧಾರ ಮಾಡಿ, ಕುಟುಂಬಸ್ಥರಿಗೆ ಪ್ರೀತಿಯ ವಿಷಯ ತಿಳಿಸಿದ್ರು. ಹುಡುಗನ ಮನೆಯವರು ಮದುವೆಗೆ ಒಪ್ಪಿಕೊಂಡಿದ್ರು. ಆದ್ರೆ, ಹುಡುಗಿ ಮನೆಯವರು ಮದುವೆ ನಿರಾಕರಣೆ ಮಾಡಿದ್ದರು.

ಹುಡುಗಿ ಮನೆಯವ್ರ ವಿರೋಧದ ನಡುವೆ ಮದುವೆಯಾಗಿದ್ರು

ದೇವಸ್ಥಾನದಲ್ಲಿ ಹುಡುಗಿ ಮನೆಯವರ ವಿರೋಧದ ನಡುವೆ ಮದುವೆಯಾಗಿ, 2023 ಜೂನ್ 23 ರಂದು ಗದಗನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ನೊಂದಣಿ ಮಾಡಿಸಿದ್ರು. ಆದಾದ ಮೇಲೆ ಹೊಸ ಜೀವನ ನಡೆಸಬೇಕೆಂದು ಹುಡುಗ ಹಾಗೂ ಹುಡುಗಿ ಗದಗನಲ್ಲಿ ವಾಸ ಮಾಡ್ತಾಯಿದ್ರು‌. ಆದ್ರೆ, ಜುಲೈ 12 ಡಿಸಿ ಮಿಲ್ ಪ್ರದೇಶದ ಹುಡಗನ ಮನೆಗೆ ನುಗ್ಗಿದ ಐಶ್ವರ್ಯ ಪೋಷಕರು ಸೇರಿದಂತೆ ಅವರ ಸಹಚರರು ಆಕೆಯನ್ನ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರಂತೆ ಎಂದು ಪತಿ ಅಭಿಷೇಕ್ ಮಹಿಳಾ ಠಾಣೆಗೆ ದೂರು ನೀಡಿದ್ದ. ಅಂದು ಟಿವಿ9 ಕೂಡ ವರದಿ ಮಾಡಿತ್ತು. ಎಸ್ಪಿ ಬಿ ಎಸ್ ನೇಮಗೌಡ ಅವ್ರು ಕೂಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು. ಅಲರ್ಟ್ ಆದ ಮಹಿಳಾ ಪೊಲೀಸರು ಹುಬ್ಬಳ್ಳಿಗೆ ಹೋಗಿ ಹುಡುಗಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆದ್ರೆ, ಐಶ್ವರ್ಯ ಪೊಲೀಸ್ ವಿಚಾರಣೆಯಲ್ಲಿ ತಾಯಿಯ ಕರೆ ಹಿನ್ನಲೆಯಲ್ಲಿ ನಾನೆ ಹೋಗಿದ್ದೇನೆ. ನನ್ನ ಯಾರೂ ಕಿಡ್ನ್ಯಾಪ್ ಮಾಡಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾಳೆಂದು ಎಸ್ಪಿ ಹೇಳಿದ್ದಾರೆ.

ಇದನ್ನೂ ಓದಿ:‘ಐ ಲವ್​ ಯೂ ಎಂದು ಹೇಳಬೇಡಿ, ಅದರ ಬದಲು…’; ಟಿಪ್ಸ್ ಕೊಟ್ಟ ಸಾನ್ಯಾ ಐಯ್ಯರ್

ಪರಸ್ಪರ ಪ್ರೀತಿ ಮಾಡಿದ್ದ ಜೋಡಿಗೆ ಯುವತಿ ಮನೆಯವ್ರು ವಿಲನ್ ಆಗಿದ್ರು. ಈಗ ಪೊಲೀಸರು ಹುಡಗಿಯನ್ನು ವಶಕ್ಕೆ ಪಡೆದುಕೊಂಡು ಗದಗ ಪತಿ ಅಭಿಷೇಕ್ ಗೆ ಒಪ್ಪಿಸಿದ್ದಾರೆ. ಹೀಗಾಗಿ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಹೆಂಡತಿ ಮನೆಗೆ ಬಂದಿದ್ದೇ ತಡ ಇವತ್ತು ಅಭಿಷೇಕ ಮತ್ತು ಐಶ್ವರ್ಯಳ ಅದ್ದೂರಿಯಾಗಿ ಆರಕ್ಷತೆ ನಡೆದಿದೆ. ಹೆಂಡತಿ ಕಿಡ್ನ್ಯಾಪ್ ನಿಂದ ಕಂಗಾಲಾಗಿದ್ದ ಅಭಿಷೇಕ್​ ಮುಖದಲ್ಲಿ ಮಂದಹಾಸ ಮೂಡಿದೆ. ನಿನ್ನೆ ರಿಸೆಪ್ಷನ್​ ಮಾಡಿಕೊಳ್ಳುವ ಮೂಲಕ ಹಿರಿಯರ ಸಮ್ಮುಖದಲ್ಲಿ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಆದ್ರೆ, ಹುಡಗಿ ಮನೆಯವ್ರು ಮಾತ್ರ ಈ ಆರಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನನಗೆ ಸೊಸೆ ಬೇಕು ಅಂತಿದ್ದ ಅತ್ತೆಯೂ ಫುಲ್ ಖಷಿಯಾಗಿದ್ದು, ಇವತ್ತು ನನ್ನ ಮಗ ಸೊಸೆ ಒಂದಾಗಿದ್ದಾರೆ. ಬಹಳ ಖುಷಯಾಗಿದೆಯೆಂದು ಅಭಿಷೇಕ ತಾಯಿ ಹೇಳಿದ್ದಾಳೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:02 am, Sun, 16 July 23

ತಾಜಾ ಸುದ್ದಿ
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ