ಪ್ರಮೋದ್ ಮುತಾಲಿಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿಸಿದ್ರೆ ರಾಜ್ಯದ 12 ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಕಣಕ್ಕೆ: ರಾಜು ಖಾನಪ್ಪ

|

Updated on: Apr 11, 2023 | 2:59 PM

ಕಾರ್ಕಳ ಕ್ಷೇತ್ರದಲ್ಲಿ ಪ್ರಮೋದ್ ಮುತಾಲಿಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿಸಿದ್ರೆ ರಾಜ್ಯದ 12 ಕ್ಷೇತ್ರಗಳಲ್ಲಿ ಕಣಕ್ಕೆ ಗ್ಯಾರಂಟಿ ಎಂದು ಗದಗದಲ್ಲಿ ಶ್ರೀರಾಮಸೇನೆ ಧಾರವಾಡ ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ತಿಳಿಸಿದ್ದಾರೆ.

ಪ್ರಮೋದ್ ಮುತಾಲಿಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿಸಿದ್ರೆ ರಾಜ್ಯದ 12 ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಕಣಕ್ಕೆ: ರಾಜು ಖಾನಪ್ಪ
ರಾಜು ಖಾನಪ್ಪನವರ್
Follow us on

ಗದಗ: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಮೇ 10ರಂದು ಮತದಾನ ನಡೆಯಲಿದೆ. ಹೀಗಾಗಿ ಚುನಾವಣೆ ಕುರುಕ್ಷೇತ್ರಕ್ಕೆ ಶ್ರೀರಾಮಸೇನೆ(Shiv Sena) ಕೂಡ ಎಂಟ್ರಿಕೊಟ್ಟಿದೆ. ರಾಜ್ಯದ 12 ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಅಭ್ಯರ್ಥಿಗಳು ಕಣಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ಪ್ರಮೋದ್ ಮುತಾಲಿಕ್(Pramod Muthalik) ವಿರುದ್ಧ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿಸಿದ್ರೆ ರಾಜ್ಯದ 12 ಕ್ಷೇತ್ರಗಳಲ್ಲಿ ಕಣಕ್ಕೆ ಗ್ಯಾರಂಟಿ ಎಂದು ಗದಗದಲ್ಲಿ ಶ್ರೀರಾಮಸೇನೆ ಧಾರವಾಡ ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ತಿಳಿಸಿದ್ದಾರೆ.

ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ವಿವಿಧ ಕ್ಷೇತ್ರಗಳು ಸೇರಿದಂತೆ ಒಟ್ಟು 12 ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಅಭ್ಯರ್ಥಿಗಳು ಸ್ಪರ್ಧಿಸಲಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪ್ರಮೋದ್ ಮುತಾಲಿಕ್ ಪ್ರಭಾವ ಇರೋದ್ರಿಂದ ಬಿಜೆಪಿಗೆ ಕಂಟಕ ಗ್ಯಾರಂಟಿ ಎನ್ನಲಾಗುತ್ತಿದೆ. ಬಿಜೆಪಿ ಮತ ಬ್ಯಾಂಕ್​ಗೆ ಶ್ರೀರಾಮಸೇನೆ ಕೊಕ್. ಹೀಗಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಆತಂಕ. ಬಿಜೆಪಿ ಮುಖಂಡರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಪ್ರಮೋದ್ ಮುತಾಲೀಕ್ ವಿರುದ್ಧ ಅಭ್ಯರ್ಥಿ ಹಾಕದಂತೆ. ಒಂದು ವೇಳೆ ಅಭ್ಯರ್ಥಿ ಹಾಕಿದ್ರೆ. ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಯಲ್ಲಿ 12 ಜನ ಶ್ರೀರಾಮಸೇನೆ ಅಭ್ಯರ್ಥಿಗಳು ಕಣಕ್ಕೆ ಇಳಿಸುವುದು ಖಚಿತ ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಮೋದಿ ಹೆಸರಲ್ಲಿ ಮತ ಕೇಳಲು ಬಂದ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ; ಪ್ರಮೋದ್ ಮುತಾಲಿಕ್ ಕಿಡಿನುಡಿ

ಪ್ರಮೋದ್ ಮುತಾಲಿಕ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ

ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ವಿರುದ್ಧ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಗದಗದಲ್ಲಿ ಶ್ರೀರಾಮಸೇನೆ ಧಾರವಾಡ ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ಸುದ್ದಿಗೋಷ್ಠಿ ನಡೆಸಿದರು. ಪ್ರಮೋದ್ ಮುತಾಲಿಕ್ ತೇಜೋವಧೆ ಮಾಡುವ ಕುತಂತ್ರ ನಡೆದಿದೆ ಅಂತ ಕಿಡಿಕಾಡಿದರು. ಗದಗ ಮೂಲದ ಓಸಿ ಬುಕ್ಕಿ ಬಿಜೆಪಿ ಕಾರ್ಯಕರ್ತ ರವಿ ಸಿದ್ಲಿಂಗ್, ನಕಲಿ ತಂಬಾಕು ಮಾಡುವ ಆನಂದ ಸೇಠ್ ಅವ್ರು ಮುತಾಲೀಕ್ ವಿರುದ್ಧ ಆರೋಪ ಮಾಡಿದ್ದಾರೆ. ಇವರಿಬ್ಬರೂ ಹಣ ವಸೂಲಿಕೋರರು, ಲೂಟಿಕೋರರು ಪ್ರಮೋದ್ ಮುತಾಲಿಕ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. 2011 ರಲ್ಲಿ ನನ್ನ ಅಪಘಾತ ಆದಾಗ ನನ್ನ ಹೆಸರಲ್ಲಿ 11ಲಕ್ಷ ಹಣ ಲೂಟಿ ಮಾಡಿದ್ದಾರೆ. ಕಾರ್ಕಳದಲ್ಲಿ ಕಟ್ಟಾ ಹಿಂದೂವಾದಿಗಳು ಇದ್ದಾರೆ. ಇಂಥ ನೀಚರ ಮಾತು ನಂಬಲ್ಲ.

ಸಚಿವ ಸುನೀಲಕುಮಾರ್ ಸೋಲಿನ ಭೀತಿಯಿಂದ ಇಂಥವ್ರನ್ನು ಕರೆಸಿ ಹೇಳಿಕೆ ನೀಡಿಸಿದ್ದಾರೆ ಎಂದು ಸಚಿವ ಸುನೀಲ್ ಕುಮಾರ ವಿರುದ್ಧ ವಾಗ್ದಾಳಿ ನಡೆಸಿದರು. ಏನೇ ಕುತಂತ್ರ ಮಾಡಿದ್ರು ಪ್ರಮೋದ್ ಮುತಾಲಿಕ್ ಅವ್ರನ್ನು ಸೋಲಿಸಲು ಸಾಧ್ಯವಿಲ್ಲ. ಸಚಿವ ಸುನೀಲ್ ಕುಮಾರ ಅವ್ರನ್ನು ಯಾರೂ ರಾಜಕೀಯಕ್ಕೆ ಕರೆತಂದು ಗೆಲ್ಲಿಸಿದ್ದಾರೋ. ಅವ್ರೇ ಈಗ ಮುತಾಲೀಕ್ ಅವರನ್ನು ಕರ್ಕಳ ಕ್ಷೇತ್ರಕ್ಕೆ ಕರೆದಿದ್ದಾರೆ. ಕಾರ್ಕಳ ಕ್ಷೇತ್ರದಿಂದ ಮುತಾಲಿಕ್ ಗೆಲುವು ಗ್ಯಾರಂಟಿ ಶಾಸಕ ಆಗೋದು ಖಚಿತ ಎಂದರು.

ಇನ್ನು ಕಾರ್ಕಳದಲ್ಲಿ ಸುದ್ದಿಗೋಷ್ಠಿ ಮಾಡಿದ ಬಳಿಕ ಬಿಜೆಪಿ ಪದಾಧಿಕಾರಿಗಳಾದ ರವಿ ಸಿದ್ಲಿಂಗ್, ಆನಂದ ಸೇಠ್ ಸಚಿವ ಸುನೀಲ್ ಕುಮಾರ ಕಚೇರಿಗೆ ಹೋಗಿದ್ದಾರೆ. ಹಿಂದೂತಪಸ್ವಿ ಪ್ರಮೋದ್ ಮುತಾಲಿಕ್ ವಿರುದ್ಧ ಸಚಿವ ಸುನೀಲ್ ಕುಮಾರ ಹೇಳಿಕೆ ನೀಡಿಸಿದ್ದು ನೀಚ ಹೆಯ್ಯ ಕೃತ್ಯ ಮಾಡಿದ್ದೀರಿ ಅಂತ ಕಿಡಿಕಾರಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:59 pm, Tue, 11 April 23