ಮೋದಿ ಹೆಸರಲ್ಲಿ ಮತ ಕೇಳಲು ಬಂದ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ; ಪ್ರಮೋದ್ ಮುತಾಲಿಕ್ ಕಿಡಿನುಡಿ

ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿ ವೋಟ್ ಹಾಕಿ ಅಂತಾ ಬರುವ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್​ ಕಿಡಿಕಾರಿದ್ದಾರೆ.

ಮೋದಿ ಹೆಸರಲ್ಲಿ ಮತ ಕೇಳಲು ಬಂದ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ; ಪ್ರಮೋದ್ ಮುತಾಲಿಕ್ ಕಿಡಿನುಡಿ
ಪ್ರಮೋದ್ ಮುತಾಲಿಕ್‌Image Credit source: deccanherald.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 02, 2023 | 9:40 PM

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿ ವೋಟ್ ಹಾಕಿ ಅಂತಾ ಬರುವ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೈದಾದ್ರಿ ರಂಗಮಂದಿರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲಾಯಕ್ ನಾಯಕರು ಇದ್ದಾರೆ. ಮೋದಿ ಹೆಸರು ಹೇಳಿಕೊಂಡು ಬರುತ್ತಾರೆ. ಅಂತವರಿಗೆ ಚಪ್ಪಲಿ ಏಟ ಕೊಡಿ ಎಂದು ಆಕ್ರೋಶದ ಕರೆ ನೀಡಿದ್ದಾರೆ. ಆರೇಳು ಬಾರಿ‌ ಗೆದ್ದವರಿದ್ದಾರೆ. ಕರ್ನಾಟಕವನ್ನ ಲೂಟಿ ಮಾಡಿದವರು ಇದ್ದಾರೆ. ಮೊದಲು ಇದ್ದಾಗ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಅಂತಾ ಲೆಕ್ಕಾ ಹಾಕುವುದಕ್ಕೂ ಆಗುವುದಿಲ್ಲ ಅಷ್ಟು ಗಳಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ನಿಮಗೆ ಶಾಪ ತಟ್ಟದೆ ಬಿಡುವುದಿಲ್ಲ

ಜನ ಸಂಘ ಹುಟ್ಟಿದ್ದು ಯಾಕೆ ಎನ್ನುವುದು ನೆನಪಿದಿಯಾ? ಜನ ಸೇವೆ ಮೆರೆತು ತಮ್ಮ ಸೇವೆ ಮಾಡಿಕೊಳ್ಳುತ್ತಿದ್ದಿರಾ? ಸಾವಿರ ವರ್ಷಗಳಿಂದ ಗೋಮಾತೆ ಉಳಿಸಿ ಅಂತಾ ಋಷಿ ಮುನಿಗಳು ಹೇಳುತ್ತಿದ್ದಾರೆ. ಗ್ರಾಮದಿಂದ ಕೇಂದ್ರದವರಗೆ ನಮ್ಮದೆ ಸರ್ಕಾರ ಇದೆ. ಗೋಮಾತೆ ರಕ್ತ ನಿಮ್ಮಿಂದ ಉಳಿಸಲು ಆಗುತ್ತಿಲ್ಲ. ಅಧಿಕಾರ ಇದೆ, ಆದರೆ ನಿಮ್ಮ ಹತ್ರ ಇಚ್ಚಾಶಕ್ತಿ ಇಲ್ಲ. ಆಕಳ ರೋಧನೆ ಅದರ ರಕ್ತ ನಿಮಗೆ ಕಾಣುತ್ತಿಲ್ಲ. ನಿಮಗೆ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೆಬ್ರಿಯಲ್ಲಿ ಭೂ ಅವ್ಯವಹಾರ, ಸುನಿಲ್ ಕುಮಾರ್ ಕೈವಾಡ ಶಂಕೆ; ಲೋಕಾಯುಕ್ತಕ್ಕೆ ಮುತಾಲಿಕ್ ದೂರು

ಮೋದಿ ಹೆಸರು ಹೇಳಿ ಗೆದ್ದವರು ನೀವು

ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಮೋದಿ ಹೆಸರು ಹೇಳಿ ಗೆದ್ದವರು ನೀವು. ತಾಕತ್ ಇದ್ರೆ ಮೋದಿ ಹೆಸರು ಬಿಟ್ಟು ನಿಮ್ಮ ಅಭಿವೃದ್ಧಿ ಹೇಳಿ ಗೆದ್ದು ಬನ್ನಿ. ಪರೇಶ ಮೇಸ್ತಾ ಅನಾಥವಾಗಿ ಸತ್ತ. ರಕ್ತ ಬಲಿದಾನವಾದ್ರು ಏನು ಆಗಲಿಲ್ಲ. ಅವನ ಹೆಣದ ಮೇಲೆ ರಾಜಕೀಯ ಮಾಡಿದವರು ನೀವು. ಅವನ ಆತ್ಮ ಕೇಳುತ್ತಿದೆ ನ್ಯಾಯ ಕೊಡಿಸಿ ಅಂತಾ. ಅವನ ಆತ್ಮಕ್ಕೆ ಶಾಂತಿಯಿಲ್ಲದೆ ಇನ್ನು ಅಲೆಯುತ್ತಿದೆ, ನ್ಯಾಯ ಬೇಕು ಎಂದು.

ಇದನ್ನೂ ಓದಿ: ಒಂದು ಹಿಂದು ಹುಡುಗಿ ಹೋದ್ರೆ, ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ: ನಿಮಗೆ ರಕ್ಷಣೆ ನಮ್ಮದು ಎಂದ ಮುತಾಲಿಕ್

ಸಿ.ಐ.ಡಿ, ಸಿ.ಬಿ.ಐ, ಎಲ್ಲಾ ಬಂತು ತನಿಖೆ ಮಾಡಿತು, ಏನು ಪ್ರಯೋಜನವಾಗಲಿಲ್ಲ. ಹಿಂದೂ ಆಕ್ರೋಶದ ಲಾಭ ಪಡೆದು ಅಧಿಕಾರಕ್ಕೆ ಬಂದ ನಾಲಾಯಕ, ನಿರ್ಲಜ್ಜರು ಇವರು. ಹಿಂದೂ‌ ಸಮಾಜ ಉಳಿಸಿಕೊಳ್ಳಲು ಛತ್ರಪತಿ ಶಿವಾಜಿಯಂತೆ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಮುತಾಲಿಕ್​ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:40 pm, Thu, 2 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್