ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಸಾವರ್ಕರ್​ ಹೆಸರು ಬಳಕೆ ಶೋಭೆಯಲ್ಲ: ಬಿವೈ ವಿಜಯೇಂದ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 22, 2022 | 2:54 PM

ಯಾರು ಏನ್ನ ಬೇಕಾದ್ರು ತಿನ್ನಬಹುದು ಅದಕ್ಕೆ ಸ್ವಾತಂತ್ರ್ಯ ಇದೆ. ನಾನು ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ಬಂಡತನ ಯಾರೋ ಒಪ್ಪೋದಿಲ್ಲ. ನಮ್ಮ ನಾಡಿನಲ್ಲಿ ಒಂದು ಸಂಸ್ಕೃತಿ ಒಂದು ಪರಂಪರೆಯಿದೆ.

ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಸಾವರ್ಕರ್​ ಹೆಸರು ಬಳಕೆ ಶೋಭೆಯಲ್ಲ: ಬಿವೈ ವಿಜಯೇಂದ್ರ
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ
Follow us on

ಗದಗ: ಸಾವರ್ಕರ್​​ರನ್ನು ರಸ್ತೆಗೆ ತಂದು ಕಾಂಗ್ರೆಸ್ (Congress) ಪಕ್ಷದಿಂದ ಅಪಮಾನ ಮಾಡಲಾಗಿದೆ. ಹೀಗೆ ಅವಹೇಳನಕಾರಿಯಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಗದಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದರು. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ರಸ್ತೆಗೆ ತಂದಿದ್ದು ಶೋಭೆಯಲ್ಲ. ಯಡಿಯೂರಪ್ಪಗೆ ಹೈಕಮಾಂಡ್ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ. ಸಂಪತ್‌ಗೆ 50 ಲಕ್ಷ ಆಮಿಷವೊಡ್ಡಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ನವರು ಪಾಪ ಆತಂಕದಲ್ಲಿದ್ದಾರೆ. ವಿಜಯದ ನಾಗಾಲೋಟದಲ್ಲಿದ್ದ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಿಂದ ಆತಂಕ ಶುರುವಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದರು.

ಇದನ್ನೂ ಓದಿ: ಗದಗ ಜಿಲ್ಲೆ ಪ್ರವಾಸದಲ್ಲಿರುವ ವಿಜಯೇಂದ್ರ ಮಹಿಳಾ ಅಭಿಮಾನಿಯೊಂದಿಗೆ ಫೋಟೋ ತೆಗೆಸಿಕೊಂಡರು

ಯಡಿಯೂರಪ್ಪ ಅವರು ಎಲ್ಲ ಜಾತಿ ಜನಾಂಗ ಒಗ್ಗೂಡಿಸುವ ಕೆಲಸ ಮಾಡಿದರು. ಆದರೆ ಈಗ ಕೆಲ ನಾಯಕರು ಜಾತಿ ಜಾತಿಯ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ. ತಾವು ಅಧಿಕಾರಕ್ಕೆ ಬರಲ್ಲ ಅಂತಾ ಗೊತ್ತಾದಾಗ ಜಾತಿ ಮಧ್ಯೆ ವಿಷ ಬೀಜ ಬಿತ್ತಿದರು. ಈಗ ವೀರ ಸಾವರ್ಕರ್ ಎಂಬ ಕ್ರಾಂತಿಕಾರಿಯನ್ನ ರಸ್ತೆಗೆ ತಂದು ಅವಮಾನ ಮಾಡ್ತಿದ್ದಾರೆ. ನಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುವುದು ಸರಿ ಅಲ್ಲ. ನಮ್ಮ ಪ್ರತಿಭಟನೆ ಎಲ್ಲೆ ಮೀರಿ ನಡೆಯಬಾರದು ಎಂದು ಹೇಳಿದರು.

ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವದು ಸರಿಯಲ್ಲ

ಯಾರು ಏನ್ನ ಬೇಕಾದ್ರು ತಿನ್ನಬಹುದು ಅದಕ್ಕೆ ಸ್ವಾತಂತ್ರ್ಯ ಇದೆ. ನಾನು ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ಬಂಡತನ ಯಾರೋ ಒಪ್ಪೋದಿಲ್ಲ. ನಮ್ಮ ನಾಡಿನಲ್ಲಿ ಒಂದು ಸಂಸ್ಕೃತಿ ಒಂದು ಪರಂಪರೆಯಿದೆ. ಧಾರ್ಮಿಕ ಶ್ರದ್ಧೆಯಿದೆ. ಇದನ್ನು ನಂಬಿಕೊಂಡು ಜೀವನ ಸಾಗಿಸುವ ಅಪಾರವಾದ ಜನಸಂಖ್ಯೆಯಿದೆ. ಉನ್ನತ ಸ್ಥಾನದಲ್ಲಿ ಇರುವಂತವರು, ರಾಜಕಾರಣದಲ್ಲಿ ಬೆಳೆದಂತವರು, ಈ ರೀತಿ ಬಹಿರಂಗ ಹೇಳಿಕೆ ನೀಡೋ ಮೂಲಕ ಇತ್ತರರ ಮನಸ್ಸಿಗೆ ಗಾಸಿಯಾಗಬಾರದು. ನಮ್ಮ ನಡುವಳಿಕೆ ಇತ್ತರರಿಗೆ ಮಾದರಿಯಾಗಬೇಕು. ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವದು ಸರಿಯಲ್ಲ.

ಇದನ್ನೂ ಓದಿ: ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ, ಫೋಟೊ ಅಂಟಿಸಿ ಪ್ರತಿಭಟನೆ

ಯಡಿಯೂರಪ್ಪಗೆ ಉನ್ನತ ಸ್ಥಾನ: ಕಾಂಗ್ರೆಸ್​ಗೆ ಆಘಾತ

ಬಿಎಸ್​​ವೈಗೆ ಉನ್ನತ ಹುದ್ದೆ, ಸಿದ್ದರಾಮಯ್ಯ ಮಠಗಳಿಗೆ ಬೇಟಿ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್​ನವರು ಮತ್ತೊಮ್ಮೆ ಅಧಿಕಾರಕ್ಕೆ ಬಂದ್ದೆಬಿಟ್ಟಿದ್ದೇವೆ ಎನ್ನುವ ಆತ್ಮವಿಶ್ವಾಸದಲ್ಲಿ ಮುನ್ನುಗುತ್ತಿದ್ದಾರೆ. ಪ್ರಧಾನ ಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕರು, ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ನೀಡಿದೆ. ಸಹಜವಾಗಿ ಕಾಂಗ್ರೆಸ್ ಪಕ್ಷದವರಿಗೆ ಅಘಾತವಾಗಿದೆ, ಅವರಿಗೆ ನೋವಾಗಿದೆ. ನಮ್ಮ ವಿಜಯ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿ ಆಗ್ತಾರೆ ಎನ್ನುವ ಆತಂಕವಾಗಿದೆ.

ಬಾವಿ ಮುಖ್ಯಮಂತ್ರಿ ಅಭ್ಯರ್ಥಿಗಳ ಕನಸಿಗೆ ಭಂಗವಾಗಿದೆ. ಅವರು ಸಹಜವಾಗಿ ದೇವಸ್ಥಾನಕ್ಕೆ ಮಠಕ್ಕೆ ಹೋಗ್ತಾರೆ. ಅಲ್ಲಿ ಹೋದ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ಎನ್ನುವದು ಮುಖ್ಯ. ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ಟಾಂಗ್ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 2:50 pm, Mon, 22 August 22