Gadag News: ಜೀವನದಲ್ಲಿ‌ ಜಿಗುಪ್ಸೆ, ಬಾವಿಗೆ ಹಾರಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆತ್ಮಹತ್ಯೆಗೆ ಶರಣು

| Updated By: ಆಯೇಷಾ ಬಾನು

Updated on: Jun 19, 2023 | 2:22 PM

ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರಸ್ವಾಮಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Gadag News: ಜೀವನದಲ್ಲಿ‌ ಜಿಗುಪ್ಸೆ, ಬಾವಿಗೆ ಹಾರಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆತ್ಮಹತ್ಯೆಗೆ ಶರಣು
ಕುಮಾರಸ್ವಾಮಿ
Follow us on

ಗದಗ: ಸರ್ಕಾರಿ ನೌಕರಿ ಸಿಕ್ಕರೆ ಸಾಕಪ್ಪಾ ಜೀವನ ಹೆಂಗೋ ಸಾಕುತ್ತೆ ಎಂದು ಜನ ಯೋಚಿಸ್ತಾರೆ. ಆದ್ರೆ ಇಲ್ಲಿ ಜೀವನದಲ್ಲಿ‌ ಜಿಗುಪ್ಸೆಗೊಂಡು ಸರ್ಕಾರಿ ನೌಕರ ಆತ್ಮಹತ್ಯೆಗೆ(Suicide) ಶರಣಾದ ಘಟನೆ ಗದಗ(Gadag) ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ. ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರಸ್ವಾಮಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೂನ್ 16 ರಂದು ಗದಗ ಆರೋಗ್ಯ ಇಲಾಖೆ ಮೀಟಿಂಗ್​ಗೆ ಹೋಗಿ ನಾಪತ್ತೆಯಾಗಿದ್ದ ಕುಮಾರಸ್ವಾಮಿ, ನಿನ್ನೆ(ಜೂನ್ 18) ರಾತ್ರಿ ನಿಡಗುಂದಿ ಗ್ರಾಮದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎರಡು ವರ್ಷಗಳಿಂದ ಪಾರ್ಶವಾಯುನಿಂದ ಬಳಲುತ್ತಿದ್ದ ಕುಮಾರಸ್ವಾಮಿ ಅನಾರೋಗ್ಯ ಹಾಗೂ ಜೀವನದಲ್ಲಿ‌ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Shivamogga News: ಶಿವಮೊಗ್ಗದಲ್ಲಿ ಇಂಜಿನಿಯರ್ ಪತ್ನಿ ಬಾಯಿಗೆ ಬಟ್ಟೆ ತುರುಕಿ ಕೊಲೆ

ವೈಯಕ್ತಿಕ ದ್ವೇಷಕ್ಕೆ ಕೊಲೆ

ಜಮೀನು ವಿವಾದ ಹಾಗೂ ವೈಯಕ್ತಿಕ ದ್ವೇಷ ಹಿನ್ನೆಲೆ ವ್ಯಕ್ತಿಯೋರ್ವನ‌‌ ಕೊಲೆಯಾಗಿದೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಕುರಿಹಾಳ ಗ್ರಾಮದಲ್ಲಿ ಆಸ್ತಿ ಹಾಗೂ ವೈಯಕ್ತಿಕ ದ್ವೇಷ ಹಿನ್ನಲೆ ಜೂನ್‌ 8 ರಂದು ಮರಿಲಿಂಗಪ್ಪನಿಗೆ ಚಾಕು ಇರಿಯಲಾಗಿತ್ತು. ಚಾಕು ಇರಿತದಲ್ಲಿ ಗಂಭೀರ ಗಾಯಗೊಂಡಿದ್ದ ಮರಿಲಿಂಗಪ್ಪನನ್ನ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಿಸದೆ ಮರಿಲಿಂಗಪ್ಪನವರು ಮೃತಪಟ್ಟಿದ್ದಾರೆ.

ಇನ್ನು ಈ ಘಟನೆ ಸಂಬಂಧ ವಡಗೇರ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ ದಾಖಲಾಗಿದೆ. ಬಸವರಾಜ ಸೇರಿ‌ ಸುಮಾರು ‌10 ಜನರ ವಿರುದ್ಧ ದೂರು ದಾಖಲಾಗಿದ್ದು ಸದ್ಯ ಹಲ್ಲೆ ಪ್ರಕರಣದಲ್ಲಿ ಬಸವರಾಜ ಸೇರಿ 5 ಜನರನ್ನು ವಡಗೇರ ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನ ಕೇಸ್ ಈಗ ಕೊಲೆ ಪ್ರಕರಣವಾಗಿ ಮಾರ್ಪಾಡಾಗಿದೆ. ಉಳಿದ ಆರೋಪಿಗಳಿಗಾಗಿ ವಡಗೇರ ಪೊಲೀಸರು ಬಲೆ ಬೀಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ